Get Updates
Get notified of breaking news, exclusive insights, and must-see stories!

ದಕ್ಷಿಣ ಕೊರಿಯಾದ ಸಿಯೋಲ್‌ ಕಾಲ್ತುಳಿತದಲ್ಲಿ 150 ಮಂದಿ ದುರ್ಮರಣ

ಸಿಯೋಲ್, ಅ. 30: ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ನಡೆದ ಹ್ಯಾಲೋವೀನ್ ಕಾರ್ಯಕ್ರಮದಲ್ಲಿ ಉಂಟಾದ ಮಾರಣಾಂತಿಕ ಕಾಲ್ತುಳಿತದಲ್ಲಿ 151 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಘಟನೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾನುವಾರ ಸಂತಾಪ ಸೂಚಿಸಿದ್ದಾರೆ.

ಶನಿವಾರ ತಡವಾಗಿ ಸೆಂಟ್ರಲ್ ಸಿಯೋಲ್‌ನಲ್ಲಿ ತುಂಬಿದ ಹ್ಯಾಲೋವೀನ್ ಕಾರ್ಯಕ್ರಮವೊಂದರಲ್ಲಿ ಮಾರಣಾಂತಿಕ ಕಾಲ್ತುಳಿತದಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಹೆಚ್ಚಿನವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ದಕ್ಷಿಣ ಕೊರಿಯಾದ ಅತ್ಯಂತ ಭೀಕರ ಅಪಘಾತಗಳಲ್ಲಿ ಒಂದಾಗಿದೆ.

ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್-ಯೋಲ್ ಅವರು ಭಾನುವಾರ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ. ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ಆರೈಕೆ ಮತ್ತು ಸತ್ತವರ ಅಂತ್ಯಕ್ರಿಯೆ ವೆಚ್ಚಗಳನ್ನು ಸರ್ಕಾರವು ಭರಿಸಲಿದೆ ಎಂದು ತಿಳಿಸಿದ್ದಾರೆ.

ಹ್ಯಾಲೋವೀನ್ ಕಾರ್ಯಕ್ರಮವೊಂದರಲ್ಲಿ ಸುಮಾರು 1, 00,000 ಜನರು ಭಾಗಿಯಾಗಿದ್ದರು ಎನ್ನಲಾಗಿದೆ. ಇದರಲ್ಲಿ ಹೆಚ್ಚಿನವರು 20 ರ ವಯಸ್ಸಿನವರು.

ದಕ್ಷಿಣ ಕೊರಿಯಾದೊಂದಿಗೆ ಭಾರತ ಒಗ್ಗಟ್ಟಾಗಿ ನಿಲ್ಲುತ್ತದೆ; ಸಚಿವ

ದಕ್ಷಿಣ ಕೊರಿಯಾದೊಂದಿಗೆ ಭಾರತ ಒಗ್ಗಟ್ಟಾಗಿ ನಿಲ್ಲುತ್ತದೆ; ಸಚಿವ

ನೂಕುನುಗ್ಗಲು ಉಂಟಾದಾಗ ಸಂಭವಿಸಿದ ಜೀವಹಾನಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾನುವಾರ ಸಂತಾಪ ಸೂಚಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಕೊರಿಯಾದೊಂದಿಗೆ ಭಾರತವು ಒಗ್ಗಟ್ಟಿನಿಂದ ನಿಂತಿದೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

"ಸಿಯೋಲ್‌ನಲ್ಲಿ ಕಾಲ್ತುಳಿತದಿಂದಾಗಿ ಹಲವಾರು ಯುವ ಜೀವಗಳನ್ನು ಕಳೆದುಕೊಂಡಿರುವುದು ತುಂಬಾ ಆಘಾತವಾಗಿದೆ. ಆತ್ಮೀಯರನ್ನು ಕಳೆದುಕೊಂಡವರ ಕುಟುಂಬಗಳಿಗೆ ನಮ್ಮ ಸಂತಾಪ. ಈ ಕಷ್ಟದ ಸಮಯದಲ್ಲಿ ನಾವು ಕೊರಿಯಾ ಗಣರಾಜ್ಯದೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ" ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

'ಸರ್ಕಾರ ಘಟನೆಯ ಸಂಪೂರ್ಣ ತನಿಖೆ ನಡೆಸಲಿದೆ'

'ಸರ್ಕಾರ ಘಟನೆಯ ಸಂಪೂರ್ಣ ತನಿಖೆ ನಡೆಸಲಿದೆ'

"ಸಿಯೋಲ್‌ನ ಮಧ್ಯಭಾಗದಲ್ಲಿ ದುರ್ಘಟನೆ ಮತ್ತು ದುರಂತ ಸಂಭವಿಸಿದೆ, ಅದು ಸಂಭವಿಸಬಾರದು" ಎಂದು ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್-ಯೋಲ್ ರಾಷ್ಟ್ರೀಯ ಭಾಷಣದಲ್ಲಿ ಹೇಳಿದ್ದಾರೆ.

"ಸರ್ಕಾರವು ಘಟನೆಯ ಕಾರಣವನ್ನು ಸಂಪೂರ್ಣವಾಗಿ ತನಿಖೆ ನಡೆಸುತ್ತದೆ. ಭವಿಷ್ಯದಲ್ಲಿ ಇಂತಹ ಅಪಘಾತವು ಮತ್ತೆ ಸಂಭವಿಸದಂತೆ ಖಚಿತಪಡಿಸಿಕೊಳ್ಳಲು ಮೂಲಭೂತ ಸುಧಾರಣೆಗಳನ್ನು ಮಾಡುತ್ತದೆ. ಘಟನೆಯಿಂದ ನನ್ನ ಹೃದಯ ಭಾರವಾಗಿದೆ, ದುಃಖವನ್ನು ತಡೆದುಕೊಳ್ಳುವುದು ಕಷ್ಟ" ಎಂದು ಅಧ್ಯಕ್ಷ ಹೇಳಿದ್ದಾರೆ. ಭಾನುವಾರ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಸೂಚಿಸುವ ಹಸಿರು ಜಾಕೆಟ್‌ಗಳನ್ನು ಧರಿಸಿದ್ದ ದಕ್ಷಿಣ ಕೊರಿಯಾ ಅಧ್ಯಕ್ಷ ಮತ್ತು ಇತರ ಉನ್ನತ ಅಧಿಕಾರಿಗಳು ಭಾನುವಾರ ಮುಂಜಾನೆ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಒಬ್ಬರ ಮೇಲೊಬ್ಬರು ಬಿದ್ದು ಉಸಿರುಗಟ್ಟಿದ ಜನರು

ಒಬ್ಬರ ಮೇಲೊಬ್ಬರು ಬಿದ್ದು ಉಸಿರುಗಟ್ಟಿದ ಜನರು

ಕಿರಿದಾದ, ಇಳಿಜಾರಾದ ಕಾಲುದಾರಿಯಲ್ಲಿ ಸಿಕ್ಕಿಬಿದ್ದಿದ್ದ ಜನರು, ಒಬ್ಬರ ಮೇಲೊಬ್ಬರು ಬಿದ್ದು ಉಸಿರುಗಟ್ಟಿದ್ದರು, ಕೆಳಗೆ ಬಿದ್ದಿದ್ದ ಜನರು ಉಸಿರಾಡಲು ಆಗದೆ ಮೇಲೆ ಬರಲು ಹರಸಾಹಸ ಪಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕಾಲ್ತುಳಿತಕ್ಕೆ ಸಿಕ್ಕ ಜನರ ಸಂಖ್ಯೆ ಹೆಚ್ಚಾದ ಕಾರಣ, ಕಿರಿದಾದ ದಾರಿಗಳಲ್ಲಿ, ಲಕ್ಷಾಂತರ ಜನರ ನಡುವೆ ಅವ್ಯವಸ್ಥೆಯ ಅಂಚಿನಲ್ಲಿ ಪ್ರಥಮ ಚಿಕಿತ್ಸೆ ನೀಡಲು ವೈದ್ಯರು, ಅರೆವೈದ್ಯರು ಪರದಾಡಿದ್ದಾರೆ. ದಾರಿಗಳನ್ನು ದಾರಿಹೋಕರಲ್ಲಿ ಕೇಳುತ್ತಿದ್ದ ದೃಶ್ಯಗಳು ಕಾಣಿಸುತ್ತಿದ್ದವು.

ರಾತ್ರಿ ಸುಮಾರು 10:00 ಗಂಟೆಗೆ ಸಂಭವಿಸಿದ ಕಾಲ್ತುಳಿತದಲ್ಲಿ 19 ವಿದೇಶಿಯರು ಸೇರಿದಂತೆ ಕನಿಷ್ಠ 151 ಜನರು ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

ಒಬ್ಬರನ್ನೊಬ್ಬರು ತಬ್ಬಿಕೊಂಡು ಸಂತೈಸಿದ ಸಂತ್ತಸ್ತರು

ಒಬ್ಬರನ್ನೊಬ್ಬರು ತಬ್ಬಿಕೊಂಡು ಸಂತೈಸಿದ ಸಂತ್ತಸ್ತರು

ದುರಂತದಲ್ಲಿ 151 ಜನರು ಸಾವನ್ನಪ್ಪಿದ್ದು, ಭಾನುವಾರ ಆರಂಭದ ವೇಳೆಗೆ 355 ಮಂದಿ ನಾಪತ್ತೆಯಾದ ವರದಿಗಳನ್ನು ಸ್ವೀಕರಿಸಿದ್ದೇವೆ ಎಂದು ಸಿಯೋಲ್ ಅಧಿಕಾರಿಗಳು ತಿಳಿಸಿದ್ದಾರೆ.

"ಜನರು ಸಮಾಧಿಯಂತೆ ಒಬ್ಬರ ಮೇಲೆ ಒಬ್ಬರಂತೆ ಬಿದ್ದಿದ್ದರು. ಕೆಲವರು ಕ್ರಮೇಣ ತಮ್ಮ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದರು, ಆದರೆ ಕೆಲವರು ಆ ಹೊತ್ತಿಗೆ ಸತ್ತಂತೆ ಕಾಣುತ್ತಿದ್ದರು" ಎಂದು ಪ್ರತ್ಯಕ್ಷದರ್ಶಿಯೊಬ್ಬರು ನೋವಿನಿಂದ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಜನಸಮೂಹವು ಮೊದಲಿಗೆ ಉತ್ತಮ ಉತ್ಸಾಹದಿಂದ ಮತ್ತು ಶಾಂತವಾಗಿ ಕಾಣಿಸಿಕೊಂಡಿತ್ತು. ಆದರೆ, ಕೆಲ ಹೊತ್ತಿಗೆ ಗದ್ದಲ ಪ್ರಾರಂಭವಾಗಿ ಜನರು ಪರಸ್ಪರ ತಳ್ಳಲು ಮತ್ತು ಒತ್ತಲು ಪ್ರಾರಂಭಿಸುತ್ತಾರೆ. ಕಿರುಚಾಟಗಳು ಮತ್ತು ಏದುಸಿರುಗಳು ಕೇಳಿಬಂದಿವೆ.

ಘಟನೆಯಿಂದ ದಿಗ್ಭ್ರಮೆಗೊಂಡ ದಾರಿಹೋಕರು ಕಾಲುದಾರಿಯ ಮೇಲೆ ಕುಳಿತು ತಮ್ಮ ಫೋನ್‌ಗಳನ್ನು ಪರಿಶೀಲಿಸುತ್ತಿದ್ದರು. ಇತರರು ತಮ್ಮನ್ನು ತಾವು ಸಾಂತ್ವನಗೊಳಿಸಿದರು. ಇತರರಂತೆ ಒಬ್ಬರನ್ನೊಬ್ಬರು ತಬ್ಬಿಕೊಂಡು ಸಾಂತ್ವನ ವ್ಯಕ್ತಪಡಿಸಿದ್ದಾರೆ.

2020 ರಲ್ಲಿ ಉಂಟಾದ ಸಾಂಕ್ರಾಮಿಕ ರೋಗದಿಂದ ನಿಂತಿದ್ದ ಹ್ಯಾಲೋವೀನ್ ಈವೆಂಟ್ ಈ ವರ್ಷ ಆರಂಭವಾಗಿದೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+