Donald Trump: ಟ್ರಂಪ್ ಹತ್ಯೆಗೆ ಇರಾನ್ ಸಂಚು: ಅಮೆರಿಕ ಭದ್ರತಾ ಅಧಿಕಾರಿಗಳು ಹೇಳಿದ್ದೇನು?
ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ವಿರೋಧಿಗಳು ಟಾರ್ಗೆಟ್ ಮಾಡಿದ್ದಾರೆ. ಈ ಸುದ್ದಿ ಇತ್ತೀಚಿಗಿನ ಸುದ್ದಿ ಅಲ್ಲ. ಇದಕ್ಕೂ ಮುಂಚಿತವಾಗಿಯೇ ಟ್ರಂಪ್ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ತಿಳಿದು ಬಂದಿದೆ. ಹೀಗಾಗಿ ಅಮೆರಿಕ ಮಾಜಿ ಅಧ್ಯಕ್ಷರ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲಲು ಇರಾನ್ ಸಂಚು ರೂಪಿಸಿರುವ ಬಗ್ಗೆ ಕೆಲವು ವಾರಗಳ ಹಿಂದೆ ಯುಎಸ್‌ಎಗೆ ತಿಳಿದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಇತ್ತೀಚಿಗೆ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ ಅವರ ಮೇಲೆ ಗುಂಡಿನ ದಾಳಿ ನಡೆದಿದಿತ್ತು. ಈ ಘಟನೆಯಲ್ಲಿ ಟ್ರಂಪ್ ಕೊಂಚದರಲ್ಲಿ ಪಾರಾಗಿದ್ದರು.

ಮೊನ್ನೆ ನಡೆದ ದಾಳಿಗೆ ಹಾಗೂ ಇರಾನಗೆ ಯಾವುದೇ ಸಂಬಂಧ ಇಲ್ಲ ಎಂಬುದು ತಿಳಿದು ಬಂದಿದೆ. ಟ್ರಂಪ್ ಹತ್ಯೆಗೆ ಸಂಬಂಧಿಸಿದಂತೆ ಇರಾನ್ ಸಂಚು ರೂಪಿಸಿದ್ದು ವಿಫಲವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಟ್ರಂಪ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.
ಹತ್ಯೆ ಸಂಚು ಏಕೆ?
2020 ರಲ್ಲಿ ಇರಾಕ್‌ನಲ್ಲಿ ಡ್ರೋನ್ ದಾಳಿಯಲ್ಲಿ ಇರಾನ್‌ನ ಕುಡ್ಸ್ ಫೋರ್ಸ್ ಕಮಾಂಡರ್ ಖಾಸೆಮ್ ಸೊಲೈಮಾನಿಯನ್ನು ಕೊಲ್ಲಲು ಆದೇಶಿಸಿದ ನಂತರ ಟ್ರಂಪ್ ಮತ್ತು ಅವರ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಸೇರಿದಂತೆ ಅಧಿಕಾರಿಗಳು ಟೆಹ್ರಾನ್‌ನಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ.
ಮಾಜಿ ಅಧ್ಯಕ್ಷ ಟ್ರಂಪ್ ಅವರನ್ನು ಹತ್ಯೆ ಮಾಡುವ ಇರಾನಿನ ಬೆದರಿಕೆಯನ್ನು ಯುಎಸ್ ಭದ್ರತಾ ಸಿಬ್ಬಂದಿ ಸೂಕ್ಷ್ಮವಾಗಿ ಪರಿಗಣಿಸಿದ್ದು, ಅವರನ್ನು ಟ್ರ್ಯಾಕ್ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ವಿಷಯವನ್ನು ನಮ್ಮ ದೇಶದ ಭದ್ರಾತಾ ವಿಷಯವನ್ನಾಗಿಯೇ ಪರಿಗಣಿಸುತ್ತೇವೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಂಪ್ ಭದ್ರತಾ ಆಡಳಿತದೊಂದಿಗೆ ಸಂಬಂಧ ಹೊಂದಿರುವ ಮಾಜಿ ಅಧಿಕಾರಿಗಳ ಮೇಲೆ ಇರಾನ್ ಬೆದರಿಕೆಗಳ ಹಾಕುತ್ತಿತ್ತು. ಇದರ ಮೇಲೆ ಯುಎಸ್ ಭದ್ರತಾ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಎಂದು ಅಮೆರಿಕದ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಆಡ್ರಿಯೆನ್ ವ್ಯಾಟ್ಸನ್ ಹೇಳಿದ್ದಾರೆ.
ಇರಾನ್ ಹೇಳಿದ್ದೇನು?
ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆರೋಪಕ್ಕೆ ಇರಾನ್ ನೀಡಿದ ಉತ್ತರವೂ ಬೆಳಕಿಗೆ ಬಂದಿದೆ. ವಿಶ್ವಸಂಸ್ಥೆಯಲ್ಲಿನ ಇರಾನಿನ ಮಿಷನ್ ಯುಎಸ್ ವರದಿಯನ್ನು ಸಾಬೀತುಪಡಿಸದ ಮತ್ತು ದುರುದ್ದೇಶಪೂರಿತ ಎಂದು ತಿರಸ್ಕರಿಸಿದೆ.
ನಿಲ್ಲದ ಉತ್ಸಾಹ
ಇತ್ತೀಚಿಗೆ ಚುನಾವಣಾ ರ್ಯಾಲಿ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಆ ನಂತರವೂ ಟ್ರಂಪರ್ ಅವರ ಚುನಾವಣ ಉತ್ಸಾಹ ಕಡಿಮೆ ಆಗಿಲ್ಲ. ಈ ಘಟನೆಯ ಬಳಿಕ ಅಮೆರಿಕದ ತನಿಖೆ ಮತ್ತು ಭದ್ರತಾ ಏಜೆನ್ಸಿಗಳ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಲಾಯಿತು. ತನ್ನ ಬೆಂಬಲಿಗರಲ್ಲಿ ಉತ್ಸಾಹವನ್ನು ಹೆಚ್ಚಿಸಲು ದಾಳಿಯ ಎರಡು ದಿನಗಳ ನಂತರ ಟ್ರಂಪ್ ರಿಪಬ್ಲಿಕನ್ ಸಮಾವೇಶದಲ್ಲಿ ಮತ್ತೆ ಕಾಣಿಸಿಕೊಂಡರು.












Click it and Unblock the Notifications