Blood Falls: ಬಯಲಾಯ್ತು ಅಂಟಾರ್ಕ್ಟಿಕಾದ ರಕ್ತಸಿಕ್ತ ಜಲಪಾತದ ರಹಸ್ಯ: ಇದರೊಳಗಿದೆ 'ಮತ್ತೊಂದು ಪ್ರಪಂಚ'
ಅಂಟಾರ್ಕ್ಟಿಕಾ ಭೂಮಿಯ ಒಂದು ಭಾಗವಾಗಿದೆ. ಇದು ತುಂಬಾ ತಂಪಾದ ಪ್ರದೇಶ. ಇಲ್ಲಿ ಎಲ್ಲೆಡೆ ಹಿಮವೇ ಆವರಿಸಿರುತ್ತದೆ. ಈ ಹಿಮದ ಅಡಿಯಲ್ಲಿ ನೂರಾರು ರಹಸ್ಯಗಳನ್ನು ಅಡಗಿವೆ. ಈಗ ಆ ರಹಸ್ಯಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನದಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಅದುವೇ ಅಂಟಾರ್ಕ್ಟಿಕಾದ ರಕ್ತಸಿಕ್ತ ಜಲಪಾತದ ರಹಸ್ಯ.
1911 ರಲ್ಲಿ ಬ್ರಿಟಿಷ್ ಸರ್ಕಾರದ ಆದೇಶದ ಮೇರೆಗೆ ಅಂಟಾರ್ಕ್ಟಿಕಾದಲ್ಲಿ ಸಂಶೋಧನಾ ದಂಡಯಾತ್ರೆಯನ್ನು ಪ್ರಾರಂಭಿಸಲಾಯಿತು. ಆ ಸಮಯದಲ್ಲಿ ಅಲ್ಲಿ ಒಂದು ಸರೋವರ ಕಾಣಿಸಿತು. ಅದರ ಸುತ್ತಲೂ ಕೆಂಪು ಬಣ್ಣದ ನೀರು ಹರಿಯುತ್ತಿತ್ತು. ಅಂದಿನಿಂದ ರಕ್ತಸಿಕ್ತ ಜಲಪಾತ ಎಂದು ಕರೆಯಲಾಗುತ್ತದೆ. ಈಗ ದಶಕಗಳ ನಂತರ ಅದರ ಬಣ್ಣಕ್ಕೆ ಸಂಬಂಧಿಸಿದ ರಹಸ್ಯವನ್ನು ಕಂಡುಹಿಡಿಯಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಅಮೇರಿಕನ್ ವಿಜ್ಞಾನಿಗಳ ತಂಡ ನವೆಂಬರ್ 2006 ಮತ್ತು ನವೆಂಬರ್ 2018 ರ ನಡುವೆ ರಕ್ತಸಿಕ್ತ ಜಲಪಾತದಿಂದ ಮಾದರಿಗಳನ್ನು ತೆಗೆದುಕೊಂಡು ಬಂದಿತ್ತು. ನಂತರ ಅದನ್ನು ಶಕ್ತಿಯುತ ಎಲೆಕ್ಟ್ರಾನ್ ಸೂಕ್ಷ್ಮದರ್ಶಕವನ್ನು ಬಳಸಿ ವಿಶ್ಲೇಷಿಸಲಾಯಿತು. ಇದರಲ್ಲಿ ಹಲವು ಹೊಸ ವಿಷಯಗಳು ತಿಳಿದು ಬಂದಿವೆ.
ಈ ಹಿಮನದಿಯ ಅಡಿಯಲ್ಲಿ ಕಬ್ಬಿಣದ ಉಪ್ಪು ಇದೆ. ಇದನ್ನು ಫೆರಿಕ್ ಹೈಡ್ರಾಕ್ಸೈಡ್ ಎಂದೂ ಕರೆಯುತ್ತಾರೆ. ಇದರ ಹೊರತಾಗಿ, ಹಿಮನದಿಯ ಅಡಿಯಲ್ಲಿ ಮತ್ತೊಂದು ಪ್ರಪಂಚವಿದೆ. ಇದು ಅನೇಕ ಸೂಕ್ಷ್ಮ ಜೀವಿಗಳನ್ನು ಹೊಂದಿದೆ. ವಿಜ್ಞಾನಿಗಳ ಪ್ರಕಾರ, ಇವುಗಳಿಂದಾಗಿ ನೀರು ಉಪ್ಪು ಮತ್ತು ರಕ್ತದಂತಹ ಕೆಂಪು ಬಣ್ಣದ್ದಾಗಿದೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಕೆನ್ ಲೆವಿ ಅವರು ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅವರ ಪ್ರಕಾರ, ಸೂಕ್ಷ್ಮದರ್ಶಕದಿಂದ ಮಾದರಿಯನ್ನು ನೋಡಿದಾಗ ಅವರು ಕಬ್ಬಿಣದ ಸಮೃದ್ಧವಾಗಿರುವ ಸಣ್ಣ ನ್ಯಾನೋಸ್ಪಿಯರ್ಗಳನ್ನು ನೋಡಿದರು ಎಂದು ತಿಳಿದು ಬಂದಿದೆ. ಈ ಸಣ್ಣ ಕಣಗಳು ಪುರಾತನ ಸೂಕ್ಷ್ಮಜೀವಿಗಳಿಂದ ಹುಟ್ಟಿಕೊಂಡಿವೆ. ಇದು ಮಾನವನ ಕೆಂಪು ರಕ್ತ ಕಣಗಳ ನೂರನೇ ಒಂದು ಭಾಗದಷ್ಟು ಗಾತ್ರವನ್ನು ಹೊಂದಿದೆ. ಖೂನಿ ಹಿಮನದಿಯಲ್ಲಿ ಅವು ಹೇರಳವಾಗಿವೆ.
ಕಬ್ಬಿಣದ ಜೊತೆಗೆ ಸಿಲಿಕಾನ್, ಕ್ಯಾಲ್ಸಿಯಂ, ಅಲ್ಯೂಮಿನಿಯಂ ಮತ್ತು ಸೋಡಿಯಂ ಕೂಡ ಇದರಲ್ಲಿ ಕಂಡುಬಂದಿದೆ. ಈ ವಿಶಿಷ್ಟ ದ್ರವ ಹಿಮನದಿಯಿಂದ ಹೊರಬರುವ ಉಪ್ಪುನೀರಿನ ಭಾಗವಾಗಿದೆ. ಸೂರ್ಯನ ಬೆಳಕು ಮತ್ತು ಆಮ್ಲಜನಕದ ಕಾರಣದಿಂದಾಗಿ ಈ ನೀರು ಕೆಂಪು ಮತ್ತು ಹೊಳೆಯುತ್ತದೆ. ಇದರಿಂದ ಇದು ರಕ್ತದಂತೆ ಕಾಣಿಸುತ್ತದೆ.
ಇದಕ್ಕೆ ಬ್ರಿಟಿಷ್ ವಿಜ್ಞಾನಿಯ ಹೆಸರು ನಾಮಕರಣ
ಈ ಕೆಂಪು ಜಲಪಾತಕ್ಕೆ ಟೇಲರ್ ಗ್ಲೇಸಿಯರ್ ಎಂದು ಕರೆಯಲಾಗುತ್ತದೆ. ಇದು ಬ್ರಿಟಿಷ್ ವಿಜ್ಞಾನಿ ಥಾಮಸ್ ಗ್ರಿಫಿತ್ ಟೇಲರ್ ಹೆಸರಾಗಿದೆ. ಅವರು ಮೊದಲು 1910 ರಿಂದ 1913 ರ ಅಭಿಯಾನದ ಸಮಯದಲ್ಲಿ ಈ ರಕ್ತದ ಜಲಪಾತವನ್ನು ನೋಡಿದರು. ಈ ಭೂಮಿ ದಕ್ಷಿಣ ಧ್ರುವದಲ್ಲಿರುವ ಅಂಟಾರ್ಕ್ಟಿಕಾ ಖಂಡದ ಟೇಲರ್ ಹಿಮನದಿಯಲ್ಲಿ ಸುಮಾರು 106 ವರ್ಷಗಳ ಹಿಂದೆ ಪತ್ತೆಯಾದ ಘನೀಕೃತ 'ರಕ್ತ ಜಲಪಾತ'ದ (ಬ್ಲಡ್ ಫಾಲ್ಸ್) ರಹಸ್ಯವನ್ನು ವಿಜ್ಞಾನಿಗಳು ಭೇದಿಸಿದ್ದು ಅಚ್ಚರಿಯ ಸಂಗತಿಗಳು ಹೊರಬಂದಿವೆ.












Click it and Unblock the Notifications