ಮದುವೆ ಫೋಟೋದಿಂದ ಮನಸು ಮುರಿದು ಡೈವೋರ್ಸ್ ನೀಡಿದ!

Posted By:
Subscribe to Oneindia Kannada

ದುಬೈ, ಅಕ್ಟೋಬರ್ 26: ಮದುವೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಕಾರಣಕ್ಕೆ ಸೌದಿ ಮೂಲದ ವ್ಯಕ್ತಿಯೊಬ್ಬನು ತನ್ನ ಹೆಂಡತಿಯನ್ನೇ ಬಿಟ್ಟಿದ್ದಾನೆ. ಆ ಹೆಣ್ಣುಮಗಳು ಸ್ನಾಪ್ ಚಾಟ್ ಮೂಲಕ ತನ್ನ ಗೆಳತಿಗೆ ಮದುವೆ ಫೋಟೋ ಕಳಿಸಿದ್ದರು. ಈ ವಿಚಾರ ತಿಳಿದ ನಂತರ ಯಾವ ಸಮರ್ಥನೆ ನೀಡಲು ಸಹ ಆಕೆಗೆ ಅವಕಾಶ ನೀಡದೆ ಮದುವೆ ಮುರಿದುಕೊಂಡಿದ್ದಾನೆ ಈ ಭೂಪ.

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಯುವತಿಯ ಸಹೋದರ, ಸ್ನಾಪ್ ಚಾಟ್, ಇನ್ ಸ್ಟಾ ಗ್ರಾಂ ಅಥವಾ ಟ್ವಿಟರ್ ಬಳಸಕೂಡದು. ಅದರಲ್ಲಿ ಯಾವುದೇ ಫೋಟೋ ಹಾಕಬಾರದು, ಕಳಿಸಬಾರದು ಎಂಬುದು ಒಪ್ಪಂದವಾಗಿತ್ತು. ಈ ಎಲ್ಲವೂ ಮದುವೆ ಒಪ್ಪಂದದಲ್ಲೇ ಇತ್ತು ಎಂದು ಹೇಳಿದ್ದಾರೆ.[ಶಾರ್ಜಾದಲ್ಲಿ ಮದುವೆ ಬ್ರೇಕಪ್ ಮಾಡಿದ ನಕಲಿ ಮೇಕಪ್!]

Saudi Man Dumps Bride For Posting Wedding Images

ಆದರೆ, ನನ್ನ ಸಹೋದರಿ ಈ ಒಪ್ಪಂದವನ್ನು ಪಾಲಿಸಿಲ್ಲ. ಸ್ನಾಪ್ ಚಾಟ್ ನಲ್ಲಿ ಆಕೆಯ ಗೆಳತಿಗೆ ಮದುವೆಯ ಫೋಟೋ ಕಳಿಸಿದ್ದಾಳೆ. ಅದರಿಂದ ಇಂಥ ಅಘಾತಕಾರಿ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ. ವರ ಮದುವೆ ರದ್ದುಗೊಳಿಸಲು ಮುಂದಾಗಿದ್ದಾರೆ. ವಿಚ್ಛೇದನ ಪಡೆಯುವುದಕ್ಕೆ ತೀರ್ಮಾನಿಸಿದ್ದಾರೆ ಎಂದು ಆತ ಬೇಸರದಿಂದ ಹೇಳಿದ್ದಾರೆ.

ಇಂಥ ವಿಚಾರಕ್ಕೂ ವಿಚ್ಛೇದನ ಪಡೆಯುತ್ತಾರಾ ಎಂದು ಕುತೂಹಲ ಪಡುವುದು ಬೇಡ. ಏಕೆಂದರೆ, ಈ ಉದಾಹರಣೆಯೇ ಕಣ್ಣೆದುರಿಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Saudi man dumped his bride of two hours after she broke the agreement where she had agreed to not share pictures of the wedding on social media.
Please Wait while comments are loading...