ಜಮಾಲ್ ದೇಹವನ್ನು ಆಸಿಡ್ ನಲ್ಲಿ ಮುಳುಗಿಸಿ ಚರಂಡಿಗೆ ಎಸೆಯಲಾಗಿತ್ತು

ಅಂಕಾರಾ (ಟರ್ಕಿ), ನವೆಂಬರ್ 10 : ಬರ್ಬರವಾಗಿ ಹತ್ಯೆಗಾಗಿದ್ದ 59 ವರ್ಷದ ಸೌದಿ ಪತ್ರಕರ್ತ ಜಮಾಲ್ ಖಶೋಗ್ಗಿಯ ದೇಹವನ್ನು ಕೊಲೆಗಡುಕರು ಆಸಿಡ್ ನಲ್ಲಿ ಕರಗಿಸಿ, ಚರಂಡಿಯಲ್ಲಿ ಸುರಿದಿದ್ದರು ಎಂದು ಟರ್ಕಿಯ ಪತ್ರಿಕೆ ಶನಿವಾರ ವರದಿ ಮಾಡಿದೆ.

ಇಸ್ತಾನ್ ಬುಲ್ ನಲ್ಲಿರುವ ಸೌದಿ ಕನ್ಸುಲೇಟ್ ನಲ್ಲಿ ಚರಂಡಿಯಿಂದ ಸಂಗ್ರಹಿಸಲಾದ ಸ್ಯಾಂಪಲ್ ನಲ್ಲಿ ಆಸಿಡ್ ಇರುವ ಸಂಗತಿ ಪತ್ತೆಯಾಗಿದೆ ಎಂದು ಸರಕಾರಿ ದಿನಪತ್ರಿಕೆ ಸಬಾಹ್ ವರದಿ ಮಾಡಿದೆ. ಜಮಾಲ್ ಅವರ ದೇಹವನ್ನು ದ್ರವದ ರೂಪದಲ್ಲಿ ಚರಂಡಿಗೆ ಸುರಿಯಲಾಯಿತು ಎಂಬುದನ್ನು ತನಿಖೆಯಿಂದ ತಿಳಿದುಬಂದಿದೆ.

ಜಮಾಲ್ ಅವರು ತಮ್ಮ ಮದುವೆಗಾಗಿ ದಾಖಲೆ ಪತ್ರ ತೆಗೆದುಕೊಳ್ಳಲೆಂದು ಅಕ್ಟೋಬರ್ 2ರಂದು ಸೌದಿ ಕನ್ಸುಲೇಟ್ ಅನ್ನು ಪ್ರವೇಶಿಸಿದ್ದರು. ನಂತರ ಅವರು ಎಲ್ಲೂ ಕಂಡುಬಂದಿಲ್ಲ, ಅವರ ದೇಹವೂ ಎಲ್ಲೂ ಪತ್ತೆಯಾಗಿರಲಿಲ್ಲ. ಆದರೆ, ಆರಂಭದಲ್ಲಿ ನಿರಾಕರಿಸಿದ್ದರೂ ಅವರನ್ನು ಅಮಾನವೀಯವಾಗಿ ಹತ್ಯೆ ಮಾಡಲಾಗಿದೆ ಎಂದು ಸೌದಿ ಒಪ್ಪಿಕೊಂಡಿದೆ.

 Saudi journalist Khashoggis corpse went down the drains

ಸೌದಿ ಸರಕಾರದಲ್ಲಿರುವ ಉನ್ನತ ಅಧಿಕಾರಗಳೇ ಈ ಕೃತ್ಯ ಎಸಗಿದ್ದಾರೆ. ಇದು ಆಕಸ್ಮಿಕ ಹತ್ಯೆಯಲ್ಲ, ಮೊದಲೇ ಪ್ಲಾನ್ ಮಾಡಿದ ಬರ್ಬರ ಹತ್ಯೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತೈಯಿಪ್ ಎರ್ಡೋಗನ್ ಅವರು ತೀವ್ರವಾಗಿ ಟೀಕಿಸಿದ್ದರೆ, ಕೆಲ ಅಧಿಕಾರಿಗಳು ಪ್ರಭಾವಶಾಲಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಮೇಲೆ ಬೆರಳು ತೋರಿಸುತ್ತಿದ್ದಾರೆ. ಜಮಾಲ್ ಖಶೋಗ್ಗಿ ಅವರ ಎಲ್ಲ ದಾಖಲೆಗಳನ್ನು ರಿಯಾದ್, ಪ್ಯಾರಿಸ್ ಮತ್ತು ವಾಷಿಂಗ್ಟನ್ ಗೆ ಕಳುಹಿಸಿರುವುದಾಗಿ ತೈಯಿಪ್ ಅವರು ತಿಳಿಸಿದ್ದಾರೆ.

ಜಮಾಲ್ ಅವರ ದೇಹವನ್ನು ಆಸಿಡ್ ನಲ್ಲಿ ಮುಳುಗಿಸಿ ಚರಂಡಿಯಲ್ಲಿ ಎಸೆಯಲಾಗಿದೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಜಮಾಲ್ ಖಶೋಗ್ಗಿ ಅವರ ಟರ್ಕಿಯ ಪ್ರಿಯತಮೆ ಹಟೀಸ್ ಕೆಂಗಿಜ್ ಅವರು ದುಃಖ ತೋಡಿಕೊಂಡಿದ್ದಾರೆ.

ಅವರು ನಿಮ್ಮ ಬರ್ಬರವಾಗಿ ಕೊಂದಿದ್ದು ಮಾತ್ರವಲ್ಲ, ದೇಹವನ್ನು ತುಂಡುತುಂಡು ಮಾಡಿ, ಆಸಿಡ್ ನಲ್ಲಿ ಹಾಕಿ ಚರಂಡಿಗೆ ಎಸೆದಿದ್ದು ಮಾತ್ರವಲ್ಲದೆ, ನಿಮ್ಮ ದೇಹಕ್ಕೆ ಅಂತಿಮ ಸಂಸ್ಕಾರ ಮಾಡಲು ನಮಗೆ ಮತ್ತು ನಮ್ಮ ಕುಟುಂಬಕ್ಕೆ ಸಿಗದಂತೆ ಮಾಡಿದ್ದಾರೆ ಎಂದು ಅವರು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+