Get Updates
Get notified of breaking news, exclusive insights, and must-see stories!

ಸೌದಿ ಅರೇಬಿಯಾ-ಇರಾನ್ ಸಂಧಾನಕ್ಕೆ ಚೀನಾದಲ್ಲಿ ಮುಹೂರ್ತ!

ಬೀಜಿಂಗ್: ಅಮೆರಿಕ ಒಂದು ಕಡೆ ತನ್ನ ಬಣಕ್ಕೆ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳನ್ನು ಸೇರಿಸಿಕೊಳ್ಳಲು ತವಕಿಸುತ್ತಿದ್ದರೆ, ಮತ್ತೊಂದು ಕಡೆ ಚೀನಾ ಮತ್ತು ರಷ್ಯಾ ಒಟ್ಟಾಗಿ ಅಮೆರಿಕದ ಲೆಕ್ಕಾಚಾರ ಉಲ್ಟಾ ಮಾಡುತ್ತಿವೆ. ಅಮೆರಿಕದ ಶತ್ರು ಇರಾನ್ ಮತ್ತು ಅಮೆರಿಕದ ಮಿತ್ರ ಸೌದಿ ಅರೇಬಿಯಾ ನಡುವೆ ಸಂಧಾನ ಸಭೆ ನಡೆಸುವಲ್ಲಿ ಚೀನಾ ಯಶಸ್ವಿಯಾಗಿದೆ. ಈ ಮೂಲಕ ವಿಶ್ವದ ದೊಡ್ಡಣ್ಣನಿಗೆ ಪರೋಕ್ಷ ಸಂದೇಶ ರವಾನಿಸಿದೆ ಡ್ರ್ಯಾಗನ್.

ಬರೋಬ್ಬರಿ 7 ವರ್ಷದ ಬಳಿಕ ಇರಾನ್ ಮತ್ತು ಸೌದಿ ಅರೇಬಿಯಾ ದೇಶಗಳು ದ್ವಿಪಕ್ಷೀಯ ಮಾತುಕತೆಗೆ ಕೂತಿವೆ. 2016ರಲ್ಲಿ ಶಿಯಾ ಧರ್ಮಗುರು ಶೇಖ್ ನಿಮರ್ ಅಲ್-ನಿಮರ್ ಅನ್ನು ಗಲ್ಲಿಗೇರಿಸಿದ ಬಳಿಕ ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಹಳಸಿತ್ತು. ಅದರಲ್ಲೂ ಇದೇ ಗಲಾಟೆಯಲ್ಲಿ ಸೌದಿ ಅರೇಬಿಯಾ ರಾಜತಾಂತ್ರಿಕ ಸಿಬ್ಬಂದಿ ಮೇಲೂ ದಾಳಿ ನಡೆದವು. ನಂತರ ಸುದೀರ್ಘ ಸಮಯದ ತನಕ ಎರಡೂ ರಾಷ್ಟ್ರಗಳ ನಡುವೆ ಮಾತುಕತೆ ನಡೆಯಲೇ ಇಲ್ಲ. ಈಗ ಹಳೆಯ ಮುನಿಸು ಮರೆತು ಒಗ್ಗಟ್ಟಿನ ಮಂತ್ರ ಜಪಿಸುತ್ತಿವೆ ಇರಾನ್ & ಸೌದಿ ಅರೇಬಿಯಾ.

Saudi Arabia and Iran trying to keep friendship again in Chinas land

ಸಿರಿಯಾ ಸಂಘರ್ಷ: 2016ರ ಕಹಿ ಘಟನೆಗಳ ಹೊರತಾಗಿ ಸಿರಿಯಾ ಸಂಘರ್ಷ ಹಾಗೂ ಯೆಮೆನ್ ಯುದ್ಧ ಕೂಡ ಇರಾನ್ ಮತ್ತು ಸೌದಿ ನಡುವಿನ ಸಂಬಂಧ ಮತ್ತಷ್ಟು ಹಳಸಲು ಕಾರಣವಾಗಿತ್ತು. ಆದರೆ ಇಬ್ಬರ ಈ ಜಗಳಕ್ಕೆ ಅಂತ್ಯ ಹಾಡಬೇಕು ಎಂಬ ಉದ್ದೇಶದಿಂದಲೇ ಚೀನಾ ದ್ವಿಪಕ್ಷೀಯ ಮಾತುಕತೆಗೆ ಎರಡೂ ರಾಷ್ಟ್ರಗಳನ್ನು ಬೀಜಿಂಗ್‌ಗೆ ಆಹ್ವಾನಿಸಿತ್ತು. ಇಂದು ಚೀನಾದ ಆಸೆ ಪೂರ್ಣಗೊಳ್ಳುವ ಜೊತೆಗೆ ಅಮೆರಿಕ ನಾಯಕರಿಗೆ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ಸಾಲಿನಲ್ಲಿ ನಾನೂ ಇದ್ದೀನಿ ಎಂಬ ಮೆಸೇಜ್ ಕೊಟ್ಟಿದೆ ಡ್ರ್ಯಾಗನ್ ರಾಷ್ಟ್ರ.

ಮಹತ್ವದ ಮಾತುಕತೆ: ಸೌದಿ ಅರೇಬಿಯಾ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ & ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮಿರ್-ಅಬ್ದೊಲ್ಲಾಹಿಯಾನ್ ಇಂದು ಚೀನಾದಲ್ಲಿ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಮಾತುಕತೆ ನಡೆಸಿದ್ದಾರೆ. ಇನ್ನು ಇಬ್ಬರ ಈ ಮಾತುಕತೆಯ ವಿಡಿಯೋವನ್ನ ಸೌದಿ ಅರೇಬಿಯಾ ಸರ್ಕಾರಿ ಚಾನೆಲ್ ಟ್ವೀಟ್ ಮಾಡಿ ಹಂಚಿಕೊಂಡಿದೆ.

ಅರಬ್ ರಾಷ್ಟ್ರಗಳ ಕಿರಿಕ್: ಇರಾನ್ ಮತ್ತು ಸೌದಿ ಅರೇಬಿಯಾ ಕೂಗಳತೆ ದೂರದಲ್ಲಿ ಇದ್ದರೂ ಹಾವು-ಮುಂಗಸಿ ರೀತಿ ಕಚ್ಚಾಡಿಕೊಂಡೇ ಬಂದಿವೆ. ಬಹುತೇಕ ಅರಬ್ ರಾಷ್ಟ್ರಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿ ಇಲ್ಲ ಬಿಡಿ. ಇದಕ್ಕೆಲ್ಲಾ ಅಮೆರಿಕದ ಒಡೆದು ಆಳುವ ನೀತಿಯೇ ಕಾರಣ ಎಂಬ ಆರೋಪ ಚೀನಾ ಮತ್ತು ರಷ್ಯಾ ನಾಯಕರದ್ದು. ಹೀಗಾಗಿ ಶತ್ರುಗಳ ನಡುವೆ ಸಂಧಾನ ಮಾಡಿ, ತಮ್ಮ ಪರ ಉಳಿಸಿಕೊಳ್ಳಲು ಚೀನಾ-ರಷ್ಯಾ ಒಟ್ಟಾಗಿ ರಣತಂತ್ರ ರೂಪಿಸಿದಂತೆ ಕಾಣತ್ತಿದೆ.

ತೈಲದ ಖನಿಜ: ಅರಬ್ ರಾಷ್ಟ್ರಗಳ ಪೈಕಿ ಇರಾನ್ ಭಾರಿ ಪ್ರಮಾಣದಲ್ಲಿ ತೈಲ ನಿಕ್ಷೇಪ ಉಳಿಸಿಕೊಂಡಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕದ ಶತ್ರುತ್ವ ಕಟ್ಟಿಕೊಂಡಿರುವ ಕಾರಣ ಆರ್ಥಿಕವಾಗಿ ಬೆಳೆಯಲು ಇರಾನ್‌ಗೆ ಸಾಧ್ಯವಾಗುತ್ತಿಲ್ಲ. ಈ ಕಾರಣಗಳಿಗೆ ಮುನಿಸು ಮರೆತು ತನ್ನ ಅಕ್ಕಪಕ್ಕದ ರಾಷ್ಟ್ರಗಳ ಜೊತೆ ಮತ್ತೆ ದೋಸ್ತಿಗೆ ಮುಂದಾಗುತ್ತಿದೆ ಇರಾನ್.

ಸಂಧಾನ ಏನೇ ನಡೆದರೂ ಮುಂದೆ ಜಗಳ ಬರುವುದಿಲ್ಲ ಎಂಬ ಗ್ಯಾರಂಟಿ ಇಲ್ಲ. ಚೀನಾ ನಾಯಕರೇನೋ ಇರಾನ್ ಮತ್ತು ಸೌದಿ ನಡುವೆ ಒಗ್ಗಟ್ಟು ಮೂಡಿಸಲು ರಣತಂತ್ರ ರೂಪಿಸಿದ್ದಾರೆ, ಆದರೆ ಅಮೆರಿಕ ಈ ವಿಚಾರದಲ್ಲಿ ಯಾವ ರೀತಿ ಪ್ರತಿತಂತ್ರ ಹಾಕಿಕೊಂಡಿದೆ ಎಂಬುದನ್ನ ಕಾದು ನೋಡಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+