• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾ ಮಾರಕ ವೈರಸ್ ದಾಳಿ: ಸೋಂಕುಪೀಡಿತರ ಸಂಖ್ಯೆ 291ಕ್ಕೆ ಏರಿಕೆ

|

ಬೀಜಿಂಗ್, ಜನವರಿ 21: ಮಾರಣಾಂತಿಕ ಸಾರ್ಸ್ ಸ್ವರೂಪದ ಕೊರೋನಾ ವೈರಸ್ ಎಂಬ ಹೊಸ ವೈರಸ್ ಸೋಂಕು ಚೀನಾದ ಅನೇಕ ಕಡೆ ವ್ಯಾಪಿಸಿದ್ದು, ಸೋಂಕಿಗೆ ಒಳಗಾದವರ ಸಂಖ್ಯೆ 291ಕ್ಕೆ ಏರಿದೆ.

ಇದುವರೆಗೂ ಆರು ಮಂದಿ ಮೃತಪಟ್ಟಿದ್ದು, ವೈರಸ್ ಸೋಂಕಿನ ಹೊಸ 80 ಪ್ರಕರಣಗಳು ಖಚಿತಗೊಂಡಿವೆ. ಇನ್ನೂ 900ಕ್ಕೂ ಹೆಚ್ಚು ಮಂದಿಯನ್ನು ವೈದ್ಯಕೀಯ ವೀಕ್ಷಣೆಗೆ ಒಳಪಡಿಸಲಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಚೀನಾಕ್ಕೆ ಬಂದೆರಗಿದೆ 'ಕೊರೋನಾವೈರಸ್': ಭಾರತಕ್ಕೂ ಆತಂಕ

ಹೊಸದಾಗಿ ಸೋಂಕಿಗೆ ಒಳಗಾದವರಲ್ಲಿ ಹೆಚ್ಚಿನವರು ಹುಬೆಯಿ ಪ್ರಾಂತ್ಯದವರಾಗಿದ್ದಾರೆ. ಇದು ಈ ವೈರಸ್ ತೀವ್ರ ಪ್ರಮಾಣದಲ್ಲಿ ಹರಡಿರುವ ವುಹಾನ್ ನಗರದ ಪ್ರಮುಖ ಸೀಫುಡ್ ಮಾರುಕಟ್ಟೆ ಕೇಂದ್ರವಾಗಿದೆ.

ಬೀಜಿಂಗ್‌ನಲ್ಲಿ ಐವರಿಗೆ ಸೋಂಕು ಇರುವುದು ದೃಢಪಟ್ಟಿದೆ. ದಕ್ಷಿಣ ಪ್ರಾಂತ್ಯವಾದ ಗುವಾಂಗ್ ಡೊಂಗ್‌ನಲ್ಲಿ 14 ಮತ್ತು ಶಾಂಘೈನಲ್ಲಿ ಇಬ್ಬರಿಗೆ ಸೋಂಕು ಇರುವುದು ಕಂಡುಬಂದಿದೆ.

ಮಧುಮೇಹಕ್ಕೆ ನೀಡುವ ಈ ಮಾತ್ರೆಯಲ್ಲಿ ಪ್ಲಾಸ್ಟಿಕ್: ಇಲಾಖೆ ಹೇಳೋದೇನು?

ಜಿಲಿನ್ ಪ್ರಾಂತ್ಯ, ಪೂರ್ವ ಝೆಜಿಯಾಂಗ್ ಮತ್ತು ದಕ್ಷಿಣ ಹೈನಾನ್ ಸೇರಿದಂತೆ ಚೀನಾದ ಇತರೆ 14 ಪ್ರಾಂತ್ಯ ಹಾಗೂ ಪ್ರದೇಶಗಳಲ್ಲಿ 50ಕ್ಕೂ ಹೆಚ್ಚು ಮಂದಿಯನ್ನು ಸೋಂಕಿನ ಶಂಕೆಯೊಂದಿಗೆ ತಪಾಸಣೆ ಒಳಪಡಿಸಲಾಗಿದೆ. ಮನುಷ್ಯರ ನಡುವೆ ವೇಗವಾಗಿ ಹರಡುವಂತಹ ಹೊಸ ವೈರಸ್ ತಡೆಗೆ ಏಷ್ಯಾದ ಹಲವೆಡೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರಜೆ ದಿನಗಳು ಸಮೀಪಿಸುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಈ ವೇಳೆ ಸೋಂಕು ವ್ಯಾಪಿಸದಂತೆ ತಡೆಯಲು ಪ್ರಯತ್ನಿಸಲಾಗುತ್ತಿದೆ.

English summary
The spreading of SARS like virus cases among people jumped to 291 in China on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X