ಪಾಕಿಸ್ತಾನದ ನೆಲಕ್ಕೇ ಹೋಗಿ, ಪಾಕಿಸ್ತಾನಕ್ಕೆ ಸರಿಯಾಗಿ ಪಾಠ ಹೇಳಿದ ಭಾರತದ ವಿದೇಶಾಂಗ ಸಚಿವರು!
ಭಯೋತ್ಪಾದಕರ ಸ್ವರ್ಗ ಪಾಕಿಸ್ತಾನಕ್ಕೆ ಅದೆಷ್ಟು ಬುದ್ಧಿ ಹೇಳಿದರೂ ಪ್ರಯೋಜನವೇ ಇಲ್ಲ ಅಂತಾ ಇಡೀ ಜಗತ್ತಿಗೆ ಅರ್ಥ ಆಗಿದೆ. ಇದೇ ಕಾರಣಕ್ಕೆ ಪಾಕಿಸ್ತಾನದ ಜೊತೆಗೆ ಸ್ನೇಹ ಬೆಸೆದು, ವ್ಯಾಪಾರ & ವ್ಯವಹಾರ ಮಾಡಲು ಯಾವುದೇ ದೇಶಗಳು ಮುಂದೆ ಬರುವುದಿಲ್ಲ. ಈ ರೀತಿ ಹಲವು ದೇಶಗಳು ಪಾಕಿಸ್ತಾನದ ಹೆಸರು ಕೇಳಿದರೆ ದೂರ ಹೋಗುತ್ತವೆ. ಇಂತಿಪ್ಪ ಪಾಕಿಸ್ತಾನಕ್ಕೆ ಅವರದ್ದೇ ನೆಲದಲ್ಲಿ ನಿಂತು ಭಾರತದ ವಿದೇಶಾಂಗ ಸಚಿವರು ಬುದ್ಧಿ ಮಾತನ್ನು ಹೇಳಿದ್ದಾರೆ.
ಪಾಕಿಸ್ತಾನದ ಪಾಪಿ ಬುದ್ಧಿ ನೋಡಿ ನೋಡಿ ಭಾರತಕ್ಕೆ ಕೆಂಡದಂತಹ ಕೋಪ ಬರುತ್ತಿದೆ. ಈ ಕಾರಣಕ್ಕೆ ಈಗಾಗಲೇ ಒಂದು ಬಾರಿ ಪಾಕಿಸ್ತಾನದ ಒಳಗೆ ನುಗ್ಗಿ ಭಾರತ ಬುದ್ಧಿ ಕೂಡ ಕಲಿಸಿ ಬಂದಿದೆ. ಹೀಗಿದ್ದರೂ ಪಾಕಿಸ್ತಾನ ಮಾತ್ರ ತನ್ನ ನೆಲದಲ್ಲಿ ಉಗ್ರರನ್ನ ಸಾಕಿಕೊಂಡು ಸಿಕ್ಕಾಪಟ್ಟೆ ಕಾಟ ಕೊಡುತ್ತಿದೆ ಎಂಬ ಆರೋಪ ಇದೆ. ಇಷ್ಟೆಲ್ಲದರ ನಡುವೆ ಪಾಕಿಸ್ತಾನದ ನೆಲದಲ್ಲಿಯೇ ನಿಂತು, ಪಾಕಿಸ್ತಾನಕ್ಕೆ ಸರಿಯಾಗಿ ಪಾಠ ಮಾಡಿದ್ದಾರೆ ಭಾರತದ ವಿದೇಶಾಂಗ ಸಚಿವರು.

ಪಾಕಿಸ್ತಾನದ ಬಣ್ಣ ಬಯಲಾಯ್ತು!
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಕಿಸ್ತಾನಕ್ಕೆ ಹೋಗಿದ್ದು, ಅಲ್ಲಿ ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಭಾಗವಹಿಸಿದ್ದಾರೆ. ಎಸ್‌ಸಿಒ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿರುವ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ಅವರು, ಪಾಪಿ ಪಾಕಿಸ್ತಾನದ ಬಣ್ಣ ಬಯಲು ಮಾಡಿದ್ದಾರೆ. ಗಡಿಯ ಹೊರಗಿನ ಚಟುವಟಿಕೆ ಭಯೋತ್ಪಾದನೆ, ಉಗ್ರವಾದ & ಬೇರೆ ದೇಶಗಳನ್ನು ಪ್ರತ್ಯೇಕಿಸುವ ವಾದದಿಂದ ಕೂಡಿದ್ದರೆ, ಆಗ ಆ ದೇಶದಲ್ಲಿ ಅಭಿವೃದ್ಧಿ ಅಸಾಧ್ಯ ಎಂದಿದ್ದಾರೆ ವಿದೇಶಾಂಗ ಸಚಿವ ಜೈಶಂಕರ್. ಈ ಮೂಲಕ ಪಾಕಿಸ್ತಾನದ ಹೆಸರು ಹೇಳದೆ ನೇರವಾಗಿ ಪಾಪಿ ಪಾಕ್‌ನ ಬುಡಕ್ಕೆ ಬಿಸಿನೀರು ಕಾಯಿಸಿದಂತೆ ಆಗಿದೆ.
ಒಗ್ಗಟ್ಟಿನ ಮಂತ್ರ ಜಪಿಸಿದ ಸಚಿವರು
ಮತ್ತೊಂದು ಕಡೆ ತಮ್ಮ ಮಾತಿನಲ್ಲಿ ಒಗ್ಗಟ್ಟಿನ ಮಂತ್ರವನ್ನೂ ಜಪಿಸಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಪರಸ್ಪರ ಗೌರವ, ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರಗಳ ಸಾರ್ವಭೌಮತೆ ಗೌರವಿಸುವುದರ ಆಧಾರದಲ್ಲಿ ಸಹಕಾರ ಇರಬೇಕು ಎಂದಿದ್ದಾರೆ. ಈ ಮೂಲಕ ಭಾರತದ ಗಡಿ ಬಳಿ ಪದೇ ಪದೇ ಕಿರಿಕ್ ಮಾಡುವ ಪಾಕಿಸ್ತಾನದ ಸೇನೆಗೆ ಕೂಡ ಬುದ್ಧಿ ಕಲಿಸಿದಂತೆ ಆಗಿದೆ. ಎಸ್‌ಸಿಒ ಸದಸ್ಯ ರಾಷ್ಟ್ರಗಳ ನಡುವಿನ ಸಹಕಾರ ಮತ್ತು ಲಾಭ ನಿಜವಾಗಲು ಎಲ್ಲರೂ ಒಟ್ಟಾಗಿ ಸಾಗಬೇಕಿದೆ. ಆಗ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ ಎಂದು ಶಾಂಘೈ ಸಹಕಾರ ಸಂಘಟನೆ ಸದಸ್ಯ ರಾಷ್ಟ್ರಗಳಿಗೆ ಕಿವಿಮಾತು ಹೇಳಿದರು.
9 ವರ್ಷಗಳ ಬಳಿಕ ಜೈಶಂಕರ್ ದಾಖಲೆ!
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇದೀಗ, ಪಾಕಿಸ್ತಾನ ಭೇಟಿ ಕೈಗೊಂಡು ಹೊಸ ಇತಿಹಾಸ ನಿರ್ಮಿಸಿದ್ದಾರೆ. 2015ರಲ್ಲಿ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರು ಪಾಕ್‌ನ ರಾಜಧಾನಿ ಇಸ್ಲಾಮಾಬಾದ್ ನಗರಕ್ಕೆ ಭೇಟಿ ನೀಡಿದ್ದರು. ಆ ನಂತರ ಸುಮಾರು 9 ವರ್ಷ ಕಾಲ ಯಾವುದೇ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿರಲಿಲ್ಲ. ಇದೀಗ 9 ವರ್ಷಗಳ ಬಳಿಕ ಎಸ್. ಜೈಶಂಕರ್ ಅವರು ಭಾರತದ ಪ್ರತಿನಿಧಿಯಾಗಿ ಭೇಟಿ ನೀಡಿ ಜಗತ್ತಿನ ಗಮನ ಸೆಳೆದಿದ್ದಾರೆ.












Click it and Unblock the Notifications