ಗಣ್ಯರಿಗೆ ಕೊರೊನಾ: ಈಗ ರಷ್ಯಾ ಪ್ರಧಾನಿ ಸರದಿ
ಮಾಸ್ಕೋ, ಏಪ್ರಿಲ್ 30: ಆತಂಕಕಾರಿ ಬೆಳವಣಿಗೆಯಲ್ಲಿ ರಷ್ಯಾದ ಪ್ರಧಾನಿ ಮಿಕಾಯಿಲ್ ಮಿಸುಸ್ಟಿನ್ ಅವರಿಗೆ ಕೋವಿಡ್ 19 ಸೋಂಕು ಪಾಸಿಟಿವ್ ಬಂದಿದೆ ಎಂದು ವರದಿಗಳು ತಿಳಿಸಿವೆ.
ಕಳೆದ ಎರಡು ದಿನಗಳಿಂದ ಅವರು ತೀವ್ರ ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದರು. ಅವರಿಗೆ ಕೋವಿಡ್ ಶಂಕೆಯ ಮೇಲೆ ತಪಾಸಣೆ ನಡೆಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ. ಆರ್‌ಟಿ ನ್ಯೂಸ್ ಈ ವಿಷಯವನ್ನು ಖಚಿತಪಡಿಸಿದೆ. ಕಳೆದ ಒಂದೂವರೆ ತಿಂಗಳಿನಿಂದ ಅವರು ಯಾವುದೇ ವಿದೇಶಕ್ಕೆ ಭೇಟಿ ನೀಡಿರಲಿಲ್ಲ. ಕೋವಿಡ್ ಬಗ್ಗೆ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದರು.
ರಷ್ಯಾದ ಪ್ರಧಾನಿ ಮಿಕಾಯಿಲ್ ಮಿಸುಸ್ಟಿನ್ ಅವರಿಗೆ ಕೋವಿಡ್ 19 ಸೋಂಕು ಪಾಸಿಟಿವ್ ಬಂದಿರುವುದರಿಂದ ಅವರನ್ನು ಐಸೋಲೇಷನ್ ಘಟಕಕ್ಕೆ ಸ್ಥಳಾಂತರಿಸಲಾಗಿದ್ದು, ಅವರ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದೆ. ಅಲ್ಲದೇ, ಅವರ ಮಂತ್ರಿ ಮಂಡಲವನ್ನು ಸಂಪೂರ್ಣ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

ರಷ್ಯಾದಲ್ಲಿ ಕೋವಿಡ್ 19 ಅಟ್ಟಹಾಸ ಮೆರೆಯುತ್ತಿದೆ. ಇದುವರೆಗೆ ಆ ದೇಶದಲ್ಲಿ 106K ಜನರಿಗೆ ಮಾರಕ ಕೊರೊನಾ ವೈರಸ್ ಸೋಂಕು ತಗುಲಿದ್ದು, ಜನ 1,073 ಮೃತಪಟ್ಟಿದ್ದಾರೆ. 11,619 ಜನ ಗುಣಮುಖರಾಗಿದ್ದಾರೆ.












Click it and Unblock the Notifications