Ukraine War: ಉಕ್ರೇನ್ ಗಡಿಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ನಿಯೋಜಿಸಲು ರಷ್ಯಾ ಸಿದ್ಧತೆ?
ಒಬ್ಬರ ಮೇಲೆ ಮತ್ತೊಬ್ಬರ ದಾಳಿ, ಒಂದು ದೇಶದ ಮೇಲೆ ಮತ್ತೊಂದು ದೇಶ ಬಾಂಬ್ ಹಾಕುವುದು. ಅಂದಹಾಗೆ ಈ ರೀತಿಯ ಬಡಿದಾಟ ರಷ್ಯಾ & ಉಕ್ರೇನ್ ಯುದ್ಧದಲ್ಲಿ ಕಾಮನ್ ಆಗಿ ಹೋಗಿದೆ. ಹೀಗೆ ಇಬ್ಬರೂ ಸೇರಿ ಭಾರಿ ದೊಡ್ಡ ಜಗಳ ಮಾಡುತ್ತಿದ್ದು, ಕಳೆದ 3.5 ವರ್ಷಗಳಿಂದಲೂ ಇದೇ ರೀತಿ ರಷ್ಯಾ & ಉಕ್ರೇನ್ ಯುದ್ಧ ಮುಂದುವರಿದಿದೆ. ಯುದ್ಧ ಇವತ್ತು ನಿಲ್ಲುತ್ತೆ, ನಾಳೆ ನಿಲ್ಲುತ್ತೆ ಅಂತಾ ಕಾಯ್ತಿರುವ ದೇಶಗಳಿಗೆ ಕೂಡ ಸಾಕಷ್ಟು ನಿರಾಸೆಯಾಗಿದೆ. ಇಂತಹ ಹೊತ್ತಲ್ಲೂ, ರಷ್ಯಾ ಸೇನೆ ಇದೀಗ ಭಯಾನಕ ಅಸ್ತ್ರ ಒಂದನ್ನು ಪ್ರಯೋಗ ಮಾಡಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.
ಹೌದು, ರಷ್ಯಾ & ಉಕ್ರೇನ್ ಯುದ್ಧ 3-4 ತಿಂಗಳಲ್ಲಿ ಮುಗಿದು ಹೋಗುತ್ತೆ ನೋಡಿ ಅಂತಾ ಹೇಳಿದ್ದವರೇ ಹೆಚ್ಚು, ಆದರೂ ರಷ್ಯಾ & ಉಕ್ರೇನ್ ಯುದ್ಧ 3 ವರ್ಷ ಮುಗಿಸಿ ಇದೀಗ 4ನೇ ವರ್ಷ ಪೂರೈಸಲು ಮುಂದೆ ನುಗ್ಗಿದೆ. ಹೀಗಿದ್ದರೂ ರಷ್ಯಾ & ಉಕ್ರೇನ್ ಯುದ್ಧಕ್ಕೆ ಮಾತ್ರ ಬ್ರೇಕ್ ಬಿದ್ದೇ ಇಲ್ಲ. ಇಂತಹ ಸಮಯದಲ್ಲೇ ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಪರ ನಿಂತು ಬಾಯಿ ಬಡಿದುಕೊಳ್ಳುತ್ತಾ ಇವೆ, ಎಲ್ಲವನ್ನ ಗಮನಿಸಿಯೇ ದಿಢೀರ್ ರಷ್ಯಾ ತನ್ನ ಪ್ಲಾನ್ ಬದಲಾಯಿಸಿದ್ದು. ಉಕ್ರೇನ್ ಗಡಿಯಲ್ಲಿ ಭಾರಿ ದೊಡ್ಡ ಬೆಳವಣಿಗೆ ಈಗ ಶುರುವಾಗಿದೆಯಾ? ಎಂಬ ಅನುಮಾನ ಮೂಡಿದೆ.

ಗಡಿಯಲ್ಲಿ ವಿನಾಶಕಾರಿ ಶಸ್ತ್ರಾಸ್ತ್ರ ಸಂಗ್ರಹ?
ಹೌದು, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ರಷ್ಯಾ & ಉಕ್ರೇನ್ ನಡುವೆ ಭಾರಿ ದೊಡ್ಡದಾಗಿಯೇ ತಿಕ್ಕಾಟ ನಡೆಯುತ್ತಿದೆ. ಅದರಲ್ಲೂ ರಷ್ಯಾ ವಿರುದ್ಧ ಉಕ್ರೇನ್ ತನ್ನ ಶಕ್ತಿ ಮೀರಿ ಹೋರಾಟ ನಡೆಸುತ್ತಾ ಇದ್ದರೆ, ಇನ್ನೊಂದು ಕಡೆ ರಷ್ಯಾ ಕೂಡ ತನ್ನ ಶಕ್ತಿಗೆ ಮೀರಿ ಏಟು ನೀಡುತ್ತಿದೆ. ಇದೆಲ್ಲಾ ಸಾಲದಾ? ಎನ್ನುವಂತೆ ದಿಢೀರ್ ರಷ್ಯಾ & ಉಕ್ರೇನ್ ಗಡಿಯಲ್ಲಿ ಭಾರಿ ಘೋರ ಬೆಳವಣಿಗೆ ಒಂದು ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ರಷ್ಯಾ ವಿರುದ್ಧ ಪಾಶ್ಚಿಮಾತ್ಯ ದೇಶಗಳು ಮೇಲಿಂದ ಮೇಲೆ ಒಂದೊಂದು ಐಡಿಯಾ ಮಾಡುತ್ತಿವೆ, ಈ ಮೂಲಕ ಪದೇ ಪದೇ ವ್ಲಾದಿಮಿರ್ ಪುಟಿನ್ ಸೇರಿದಂತೆ ರಷ್ಯಾ ಸೇನೆಯ ಬಲ ಕುಗ್ಗಿಸಲು ಎಲ್ಲಾ ರೀತಿ ಪ್ರಯತ್ನ ನಡೆಯುತ್ತಿದೆ. ಅದರಲ್ಲೂ ಉಕ್ರೇನ್ ಬೆನ್ನಿಗೆ ನೇರವಾಗಿ ನಿಂತಿರುವ ಯುರೋಪ್ ದೇಶಗಳ ಒಕ್ಕೂಟ, ಹಣಕಾಸು & ಮಿಲಿಟರಿ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುತ್ತಿದೆ. ಹೀಗಾಗಿ ಉಕ್ರೇನ್ ದೇಶಕ್ಕೆ ಬಲ ಸಿಕ್ಕಿದ್ದರೂ, ರಷ್ಯಾಗೆ ಇದು ಮರಣ ಶಾಸನವಾಗುತ್ತಿದೆ. ಇಂತಹ ಸಮಯದಲ್ಲೇ ಮತ್ತೆ ಒಂದು ದೊಡ್ಡ ಆಘಾತವನ್ನು ರಷ್ಯಾಗೆ ಕೊಡಲು ಸಜ್ಜಾಗಿದೆ ಯುರೋಪ್ ಒಕ್ಕೂಟ!












Click it and Unblock the Notifications