ಡೆಡ್ಲಿ ಪರಮಾಣು ಬಾಂಬ್ ದಾಳಿಗೆ ರಷ್ಯಾ ಸೇನೆ ಸಿದ್ಧತೆ?
ಮಾಸ್ಕೋ: ಉಕ್ರೇನ್ ವಿರುದ್ಧ ಪ್ರತಿಕಾರಕ್ಕೆ ಸಜ್ಜಾಗಿರುವ ರಷ್ಯಾ ಸೇನೆ ಮಹತ್ವದ ಆದೇಶ ಹೊರಡಿಸಿದೆ. ಪುಟಿನ್ ಮನೆ ಮೇಲೆ ಅಟ್ಯಾಕ್ ನಂತರ ರಷ್ಯಾ ಗಡಿಯಲ್ಲಿ ಉಕ್ರೇನ್ ಭೀಕರ ದಾಳಿ ನಡೆಸ್ತಿದೆ. ಪ್ರತಿಕಾರ ತೀರಿಸಿಕೊಳ್ಳಲು ಪರಮಾಣು ಬಾಂಬ್ ದಾಳಿಗೆ ಸಿದ್ಧವಾಯಿತಾ ರಷ್ಯಾ ಸೇನೆ? ಎಂಬ ಅನುಮಾನ ಜಗತ್ತಿನ್ನೇ ಕಾಡುತ್ತಿದೆ. ಯಾಕೆ ಈ ತುರ್ತು ಪರಿಸ್ಥಿತಿ? ಎಂಬುದರ ಮಾಹಿತಿ ಇಲ್ಲಿದೆ.
ಉಕ್ರೇನ್‌ನ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಸುತ್ತಮುತ್ತಲೂ ವಾಸ ಇರುವ ಜನರನ್ನ ಅಲ್ಲಿಂದ ಒಕ್ಕಲೆಬ್ಬಿಸುತ್ತಿದೆ ರಷ್ಯಾ ಸೇನೆ. ಈ ಮೂಲಕ ಭೀಕರ ಅಣು ಯುದ್ಧಕ್ಕೆ ರಷ್ಯಾ ಸೇನೆ ತಯಾರಿ ನಡೆಸಿತಾ? ಎಂಬ ಅನುಮಾನ ಮೂಡಿದೆ. ಸುಮಾರು 1 ವರ್ಷದಿಂದ ಜಪೋರಿಝಿಯಾ ಅಣುಸ್ಥಾವರ ರಷ್ಯಾ ಕಂಟ್ರೋಲ್‌ಗೆ ಬಂದಿದ್ದು, ಉಕ್ರೇನ್ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಈ ಅಣು ವಿದ್ಯುತ್ ಸ್ಥಾವರ ಬಳಸಿಕೊಳ್ಳಬಹುದು ಎಂಬ ಆರೋಪ ಕೇಳಿಬರುತ್ತಿದೆ. ಜನರು ಎದ್ದುಬಿದ್ದು ಊರು ಬಿಟ್ಟು ಓಡಿ ಹೋಗುತ್ತಿದ್ದಾರೆ.

ಇರುವೆಯಂತೆ ನಿಂತ ಕಾರುಗಳ ಸಾಲು!
ರಷ್ಯಾ ಸೇನೆ ಎಚ್ಚರಿಕೆ ನೀಡಿದ ಬಳಿಕ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಸುತ್ತಮುತ್ತ ಜನ ಜೀವ ಭಯದಲ್ಲೇ ಊರು ಬಿಟ್ಟು ಓಡಿ ಹೋಗುತ್ತಿದ್ದಾರೆ. ಇಲ್ಲಿನ 18 ಪಟ್ಟಣಗಳ ಮೇಲೆ ರಷ್ಯಾ ಹಿಡಿತ ಸಾಧಿಸಿದ್ದು, ಈ ಪ್ರದೇಶದಿಂದ ಜನರನ್ನ ಖಾಲಿ ಮಾಡಿಸುತ್ತಿದೆ. ಇಲ್ಲಿಂದ ಜನ ಹೇಗೆ ಮನೆ ಖಾಲಿ ಮಾಡಿ ಹೋಗುತ್ತಿದ್ದಾರೆ ಅಂದ್ರೆ ರಸ್ತೆಗಳಲ್ಲಿ ಕಾರುಗಳು ಇರುವೆಯಂತೆ ಸಾಲಾಗಿ ನಿಂತಿವೆ. ಸುಮಾರು 5 ಗಂಟೆಗೂ ಹೆಚ್ಚು ಕಾಲ ಈ ಪ್ರದೇಶದಲ್ಲಿ ಸಾಲುಗಟ್ಟಿ ನಿಂತಿದ್ದವು ಎಂದು ಉಕ್ರೇನ್ ಮೇಯರ್ ತಿಳಿಸಿದ್ದಾರೆ.
ಪರಮಾಣು ಬಾಂಬ್ ಬಳಸುತ್ತಾ ರಷ್ಯಾ?
ಯಾವುದೇ ಕ್ಷಣದಲ್ಲೂ ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಪರಮಾಣು ದಾಳಿ ನಡೆಯಬಹುದೆಂಬ ಭಯ ಶುರುವಾಗಿದೆ. ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಕೂಡ ಈ ಬಗ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಇಲ್ಲಿ ಪರಮಾಣು ಬಳಕೆ ಅಥವಾ ಅಪಘಾತದ ಬಗ್ಗೆ ಭೀತಿ ಆವರಿಸಿದ್ದು, ಎಚ್ಚರಿಕೆ ವಹಿಸುವಂತೆ ಸಂದೇಶ ರವಾನೆಯಾಗಿದೆ. ಆದರೂ ರಷ್ಯಾ ಸೇನೆ ಪರಮಾಣು ಶಸ್ತ್ರಾಸ್ತ್ರ ಬಳಸುವ ಸಾಧ್ಯತೆ ತೀರಾ ಕಮ್ಮಿ ಎಂಬ ಸಮಾಧಾನದ ಮಾತು ಕೂಡ ಕೇಳಿಬರುತ್ತಿದೆ.
ನ್ಯೂಕ್ಲಿಯರ್ ದಾಳಿಗೆ ರಷ್ಯಾ ಸಿದ್ಧತೆ?
ಇಡೀ ಜಗತ್ತಿನಲ್ಲಿರುವ ಅತಿದೊಡ್ಡ ಪರಮಾಣು ಸ್ಥಾವರಗಳ ಪೈಕಿ ಜಪೋರಿಝಿಯಾ ಕೂಡ ಒಂದು. ಯುರೋಪಿನ ಅತಿದೊಡ್ಡ ಅಣುಸ್ಥಾವರ ಎಂಬ ಹೆಗ್ಗಳಿಕೆಗೂ ನ್ಯೂಕ್ಲಿಯರ್ ಪ್ಲಾಂಟ್ ಪಾತ್ರವಾಗಿದೆ. ಪರಿಸ್ಥಿತಿ ಹೀಗಿರುವಾಗ ದೊಡ್ಡ ದಾಳಿಗೆ ಇಲ್ಲಿಂದಲೇ ರಷ್ಯಾ ತಯಾರಿ ನಡೆಸಿದೆಯಾ ಎಂಬ ಭೀತಿ ಎದುರಾಗಿದೆ. ಅಕಸ್ಮಾತ್ ದಾಳಿ ನಡೆದಿದ್ದೇ ಸತ್ಯ ಎಂದಾದರೆ, ಮುಂದಿನ ಪರಿಣಾಮಗಳು ಕೂಡ ನೆಟ್ಟಗೆ ಇರುವುದಿಲ್ಲ. ಆದರೂ ಉಕ್ರೇನ್ ಮೇಲಿನ ಸಿಟ್ಟಿಗೆ ರಷ್ಯಾ ಪರಮಾಣು ದಾಳಿ ನಡೆಸಿದರೂ ಅಚ್ಚರಿ ಪಡಬೇಕಿಲ್ಲ.

ರಷ್ಯಾ ಖಾಸಗಿ ಸೇನೆ ಬಗ್ಗೆಯೂ ಭಯ!
ರಷ್ಯಾ-ಉಕ್ರೇನ್ ಯುದ್ಧ ಶುರುವಾದ ಮರುದಿನದಿಂದ ಜಗತ್ತಿಗೆ ಒಂದಲ್ಲ ಒಂದು ಕಂಟಕ ಎದುರಾಗುತ್ತಿದೆ. ಅದರಲ್ಲೂ ಪರಮಾಣು ಯುದ್ಧದ ಕಾರ್ಮೋಡ ಆವರಿಸಿರುವಾಗಲೇ ರಷ್ಯಾ ಜಪೋರಿಝಿಯಾ ಪರಮಾಣು ಸ್ಥಾವರದ ಸುತ್ತಮುತ್ತ ವಾಸ ಇರುವ ಜನರನ್ನ ಅಲ್ಲಿಂದ ಖಾಲಿ ಮಾಡಿಸುತ್ತಿದೆ. ಇಷ್ಟೆಲ್ಲಾ ಆತಂಕ ಎದುರಾದ ಹೊತ್ತಲ್ಲೇ ಮತ್ತೊಂದು ಕಂಟಕ ಕೂಡ ಸೃಷ್ಟಿಯಾಗಿದೆ. ರಷ್ಯಾ ಸೇನೆಯೊಳಗೆ ಭಿನ್ನಮತ ಮೂಡಿದ್ದು, ಸರ್ಕಾರದ ಮಾತು ಕೇಳದೆ ರಷ್ಯಾ ಖಾಸಗಿ ಸೇನೆ ಪರಮಾಣು ದಾಳಿ ನಡೆಸಿದರೆ ಹೇಗೆ? ಎಂಬ ಚಿಂತೆ ಉಕ್ರೇನ್ ಜನರನ್ನ ಕಾಡುತ್ತಿದೆ.
ಉಕ್ರೇನ್‌ಗೆ ವಿನಾಶಕಾರಿ ವೆಪನ್ಸ್ ದಾನ!
ರಷ್ಯಾ ವಿರುದ್ಧ ಯುದ್ಧದಲ್ಲಿ ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದೆ ಅಮೆರಿಕ. ದಾನ ಕೊಡುತ್ತಿರುವ ಶಸ್ತ್ರಾಸ್ತ್ರಗಳ ಪೈಕಿ, ಆಕಾಶದಿಂದಲೇ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಹೈಡ್ರಾ-70 ರಾಕೆಟ್‌ಗಳು ಕೂಡ ಸೇರಿವೆ. ಜೊತೆಗೆ ಮಿಸೈಲ್, ಬಾಂಬ್, ಮದ್ದುಗುಂಡು ಹೀಗೆ ಲೆಕ್ಕವಿಲ್ಲದಷ್ಟು ಶಸ್ತ್ರಾಸ್ತ್ರ ಅಮೆರಿಕದಿಂದ ಉಕ್ರೇನ್ ಉಗ್ರಾಣ ಸೇರುತ್ತಿದೆ. ಎಲ್ಲಾ ಬೆಳವಣಿಗೆ ಬಗ್ಗೆ ಮೊದಲೇ ಆಕ್ರೋಶ ಹೊರಹಾಕಿದ್ದ ರಷ್ಯಾ, ಈಗ ನ್ಯೂಕ್ಲಿಯರ್ ದಾಳಿ ಮೂಲಕ ಎಲ್ಲಾ ಒಂದೇ ಸಾರಿ ಮುಗಿಸುವ ಯೋಜನೆ ಹಾಕಿರುವ ಆರೋಪ ಕೇಳಿಬಂದಿದೆ.
ಉಕ್ರೇನ್ ಅಧ್ಯಕ್ಷ ರಷ್ಯಾ ಟಾರ್ಗೆಟ್?
ರಷ್ಯಾ ಅಧ್ಯಕ್ಷರ ಸರ್ಕಾರಿ ನಿವಾಸದ ಮೇಲೆ ದಾಳಿ ನಡೆದಿರುವುದು ರಷ್ಯಾ ಸೇನೆಯನ್ನ ರೊಚ್ಚಿಗೆಬ್ಬಿಸಿದೆ. ಈ ಮೊದಲೇ ಕೊತ ಕೊತ ಕುದಿಯುತ್ತಿದ್ದ ರಷ್ಯಾ, ಇದೇ ಕಾರಣ ನೆಪವಾಗಿ ಇರಿಸಿಕೊಂಡು ರಷ್ಯಾ ಮತ್ತೊಮ್ಮೆ ಉಕ್ರೇನ್ ವಿರುದ್ಧ ಭೀಕರ ದಾಳಿ ಸಿದ್ಧತೆ ಆರಂಭಿಸಿದೆ. ಅದ್ರಲ್ಲೂ ರಷ್ಯಾ ಮೊದಲ ಟಾರ್ಗೆಟ್ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಎಂಬ ಮಾತು ಕೇಳಿಬರುತ್ತಿತ್ತು. ಈಗ ನೋಡಿದರೆ ಏಕಾಏಕಿ ಅಣು ಬಾಂಬ್ ಅಥವಾ ನ್ಯೂಕ್ಲಿಯರ್ ವೆಪನ್ಸ್ ಬಳಸುವ ಬಗ್ಗೆಯೇ ಭಯ ಶುರುವಾಗಿದೆ.

ಉಕ್ರೇನ್ ಅಧ್ಯಕ್ಷ ಮಾಡಿದ ಎಡವಟ್ಟು?
ಉಕ್ರೇನ್ ಮೇಲಿನ ಆಕ್ರಮಣಕ್ಕೆ ಮತ್ತು ಯುದ್ಧ ಅಪರಾಧಗಳಿಗೆ ರಷ್ಯಾ ಹೊಣೆಯಾಗಿಸಲು ವಿಶೇಷ ನ್ಯಾಯಮಂಡಳಿ ರಚಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯಕ್ಕೆ ಮನವಿ ಮಾಡಿ 2 ದಿನ ಕಳೆದಿಲ್ಲ. ಆಗಲೇ ರಷ್ಯಾ ತನ್ನ ಬಳಿ ಇರುವ ವಿನಾಶಕಾರಿ ವೆಪನ್ಸ್ ಹೊರಗೆ ತೆಗೆಯುತ್ತಿದೆ. ಈ ಮೂಲಕ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಮಾಡಿದ ಎಡವಟ್ಟು ಉಕ್ರೇನ್ ಜನರ ಬುಡಕ್ಕೆ ಬೆಂಕಿ ಇಟ್ಟಂತೆ ಭಾಸವಾಗುತ್ತಿದೆ. ಅಕಸ್ಮಾತ್ ರಷ್ಯಾ ಸೇನೆ ಪರಮಾಣು ದಾಳಿ ನಡೆಸಿದರೆ ಮುಂದೆ ಏನು?
ಭೀಕ ಪರಿಸ್ಥಿತಿ ಎದುರಾಗುವುದು ಪಕ್ಕಾ!
ರಷ್ಯಾ ಯಾರ ಸಹವಾಸಕ್ಕೂ ಹೋಗಲ್ಲ, ಆದರೆ ತನ್ನ ಸಹವಾಸಕ್ಕೆ ಬಂದರೆ ಸುಮ್ಮನೆ ಇರಲ್ಲ ಎಂಬ ಎಚ್ಚರಿಕೆ ಸಂದೇಶವನ್ನ ರಷ್ಯಾ ಸೇನೆ ಮತ್ತು ರಷ್ಯಾ ಅಧ್ಯಕ್ಷರು ಆಗಾಗ ನೀಡುತ್ತಲೇ ಬಂದಿದ್ದರು. ಉಕ್ರೇನ್ ನ್ಯಾಟೋ ಪಡೆ ಜೊತೆ ಕೈಜೋಡಿಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿತ್ತು. ಇದೆಲ್ಲಾ ಮುಗಿದು ಶಾಂತಿ ಮಾತುಕತೆ ನಡೆಸಬಹುದಾಗಿತ್ತು. ಆದರೂ ಉಕ್ರೇನ್ ಅಧ್ಯಕ್ಷರ ಎಡವಟ್ಟು ಪರಿಸ್ಥಿತಿಯನ್ನ ಮತ್ತೆ ಕಠಿಣ ಮಾಡಿದೆ.
ಜಗತ್ತು ಹಲವು ಸಮಸ್ಯೆಗಳ ನಡುವೆ ನರಳಾಡುವ ಸಂದರ್ಭದಲ್ಲೇ ಮತ್ತೊಂದು ತಲೆನೋವು ಶುರುವಾಗಿದೆ. ಇಲ್ಲಿ ರಷ್ಯಾ ಅಕಸ್ಮಾತ್ ನ್ಯೂಕ್ಲಿಯರ್ ವೆಪನ್ಸ್ ಬಳಸಿದ್ದೇ ಆದರೆ, ಭವಿಷ್ಯದಲ್ಲಿ ಮಾನವನಿಗೆ ಕಂಟಕ ಕಟ್ಟಿಟ್ಟಬುತ್ತಿಯೇ ಸರಿ. ಹೀಗಾಗಿ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಕೂಡ ಎಚ್ಚರಿಕೆ ಸಂದೇಶ ರವಾನಿಸಿದ್ದು, ಎಲ್ಲಾ ಕಡೆ ಹೈಅಲರ್ಟ್ ಘೋಷಿಸಲಾಗಿದೆ.












Click it and Unblock the Notifications