ಹುಚ್ಚು ಹಿಡಿದವರಂತೆ ಕಚ್ಚಾಡುತ್ತಿವೆ ಉಕ್ರೇನ್ VS ರಷ್ಯಾ!
ಉಗುರಲ್ಲಿ ಹೋಗೋದಕ್ಕೆ ಕೊಡಲಿ ತಗೊಂಡ್ರು ಅನ್ನೋ ಮಾತು ಜನಜನಿತ. ಸಣ್ಣ ಸಣ್ಣ ವಿಚಾರವನ್ನ ದೊಡ್ಡದು ಮಾಡುವವರಿಗೆ ಈ ಮಾತು ಹೇಳುತ್ತಾರೆ ಹಿರಿಯರು. ಅದರಲ್ಲೂ ಉಕ್ರೇನ್ VS ರಷ್ಯಾ ಯುದ್ಧದ ವಿಚಾರದಲ್ಲಿ ಈ ಮಾತು ನಿಜವಾಗಿ ಹೋಗಿದೆ. ಮಾತುಕತೆ ಮೂಲಕ ಕೂತು ಬಗೆಹರಿಸಿಕೊಳ್ಳುವ ವಿಚಾರದಲ್ಲಿ, ಎರಡೂ ದೇಶಗಳು ಕೈಯಲ್ಲಿ ಅಸ್ತ್ರಗಳನ್ನ ಹಿಡಿದು ಬಡಿದಾತ್ತಿವೆ.
ರಷ್ಯಾ ಅಧ್ಯಕ್ಷ ಪುಟಿನ್ 2022ರ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿದರು. ಸೇನಾಧಿಕಾರಿಗಳ ಜೊತೆಗೆ ಮಹತ್ವದ ಮಾತುಕತೆ ನಡೆಸಿ, ಕೆಲವೇ ಕ್ಷಣದಲ್ಲಿ ಯುದ್ಧ ಘೋಷಣೆ ಮಾಡಿದ್ದರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್. ಈ ಮೂಲಕ ತಮ್ಮ ಶತ್ರುವಿನ ಸಾವಿಗೆ ಪಣತೊಟ್ಟರು ಪುಟಿನ್. ಆದ್ರೆ ಈ ಯುದ್ಧವು ಇನ್ನೇನು 2 ವರ್ಷ ಪೂರೈಸುವ ಹಂತಕ್ಕೆ ಬಂದರೂ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಹೀಗಿದ್ದಾಗಲೆ ನಿನ್ನೆ ರಾತ್ರಿ ಕೂಡ ರಷ್ಯಾ ಉಕ್ರೇನ್ ವಿರುದ್ಧ ಡೆಡ್ಲಿ ಅಟ್ಯಾಕ್ ಮಾಡಿದೆಯಂತೆ!

33 ಡ್ರೋನ್‌ಗಳ ಮೂಲಕ ಡೆಡ್ಲಿ ಅಟ್ಯಾಕ್!
ಅಷ್ಟಕ್ಕೂ ತನ್ನ ಶತ್ರು ವಿರುದ್ಧ ರಣಕಹಳೆ ಮೊಳಗಿಸಿ ಯುದ್ಧ ನಡೆಸುತ್ತಿರುವ ರಷ್ಯಾ ಸೇನೆ ನಿನ್ನೆ ರಾತ್ರಿ ಕೂಡ ಭೀಕರ ದಾಳಿ ಮಾಡಿದೆ ಎಂದು ಉಕ್ರೇನ್ ಆರೋಪ ಮಾಡಿದೆ. ಹೀಗೆ, ತನ್ನ ದೇಶದ ಮೇಲೆ ರಷ್ಯಾ ಸೇನೆ ಬರೋಬ್ಬರಿ 33 ಡ್ರೋನ್‌ಗಳ ಮೂಲಕ ಡೆಡ್ಲಿ ಅಟ್ಯಾಕ್ ಮಾಡಿದೆ ಅಂತಾ ಉಕ್ರೇನ್ ಆರೋಪ ಮಾಡಿದೆ. ಈ ಮೂಲಕ ಎರಡೂ ದೇಶಗಳ ನಡುವೆ ಸಂಧಾನ ನಡೆಸುವ ಪ್ರಯತ್ನಗಳು ಕೂಡ ಕೈಕೊಟ್ಟಂತೆ ಕಾಣುತ್ತಿವೆ. ಅಲ್ಲದೆ ಪರಿಸ್ಥಿತಿಯೂ ಕ್ಷಣಕ್ಷಣಕ್ಕೆ ಭೀಕರವಾಗುತ್ತಿದೆ.
ಅಮೆರಿಕ ಕೂಡ ಕೈಕೊಟ್ಟಿದೆಯಾ?
ಉಕ್ರೇನ್‌ಗೆ ಸುಮಾರು 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ನೆರವನ್ನ ಈವರೆಗೆ ಅಮೆರಿಕ ನೀಡಿ ಬೆನ್ನುಲುಬಾಗಿ ನಿಂತಿತ್ತು. ಆದರೆ ಈಗ ನೆರವು ನೀಡಲು ಅಮೆರಿಕ ಬಳಿ ಹಣ ಇಲ್ಲ. ಹೀಗಾಗಿ, ಇದೀಗ ಕಂಡ ಕಂಡ ದೇಶಗಳ ಬಳಿ ಉಕ್ರೇನ್ ಬೇಡುವ ಪರಿಸ್ಥಿತಿ ಬಂದಿದೆ. ಅದರಲ್ಲೂ ಈ ದೇಶಕ್ಕೆ ಈಗ ಯುರೋಪ್ ಒಕ್ಕೂಟ ಕೂಡ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಪೂರೈಸೋದಕ್ಕೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ರಷ್ಯಾ ತನ್ನ ಶತ್ರುವಾದ ಉಕ್ರೇನ್‌ನ ಸರ್ವನಾಶಕ್ಕೆ ತೊಡೆತಟ್ಟಿದೆ. ಸಂಧಾನ ನಡೆಯುವ ಲಕ್ಷಣ ಕಾಣುತ್ತಿಲ್ಲ. ಹೀಗಿದ್ದಾಗ ರಷ್ಯಾ ಅಧ್ಯಕ್ಷ ಪುಟಿನ್ ಯುದ್ಧ ನಿಲ್ಲಿಸುವ ಮನಸ್ಸನ್ನ ಮಾಡುತ್ತಿಲ್ಲ. ಇನ್ನ ಉಕ್ರೇನ್ ತಲೆಬಗ್ಗಿಸಿ ಸೋಲು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ. ಹೀಗೆ ಯಾರದ್ದೋ ಸ್ವಾರ್ಥ & ಕಿರಿಕಿರಿಯಲ್ಲಿ ಅಮಾಯಕರ ಜೀವ ಸಂಕಷ್ಟಕ್ಕೆ ಸಿಲುಕಿದೆ.
ತುತ್ತು ಅನ್ನಕ್ಕೂ ಉಕ್ರೇನ್‌ನ ಜನರು ಪರದಾಡುವ ಪರಿಸ್ಥಿತಿ ಬಂದಿದೆ. ಹೀಗಿದ್ದಾಗ ಅಮೆರಿಕದ ನೆರವು ಕೂಡ ನಿಂತು ಹೋದರೆ, ನಮ್ಮ ಪರಿಸ್ಥಿತಿ ಹೇಗಪ್ಪಾ? ಎಂಬ ಚಿಂತೆ ಉಕ್ರೇನ್ ಜನರಲ್ಲಿ ಶುರುವಾಗಿತ್ತು. ಆದರೆ ಈಗ ಬ್ರಿಟನ್ ಸೇರಿದಂತೆ ಯುರೋಪ್ ಒಕ್ಕೂಟ ಕೂಡ ಉಕ್ರೇನ್ ಬೆನ್ನಿಗೆ ನಿಲ್ಲುತ್ತಿದೆ. ಆದರೆ ಇದರಿಂದ ರಷ್ಯಾ ಈಗ ಗರಂ ಆಗುವ ಭಯ ಕೂಡ ಆವರಿಸಿದೆ.











Click it and Unblock the Notifications