ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ-ಉಕ್ರೇನ್ ಯುದ್ಧ ದಿನ 26: ಶರಣಾಗತಿಗೆ ಡೆಡ್‌ಲೈನ್‌, ಪ್ರಮುಖ ಬೆಳವಣಿಗೆಗಳ ರೌಂಡ್‌ಅಪ್‌

|
Google Oneindia Kannada News

ಕೀವ್‌, ಮಾರ್ಚ್ 21: ರಷ್ಯಾ-ಉಕ್ರೇನ್ ಯುದ್ಧವು ಇಂದು 26ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್‌ ಸೇನೆಯು ಮಾರಿಯುಪೋಲ್‌ನಲ್ಲಿ ರಷ್ಯಾದ ನೌಕಾಪಡೆಯ ಹಿರಿಯ ಕಮಾಂಡರ್ ಅನ್ನು ಹತ್ಯೆ ಮಾಡಿದ್ದೇವೆ ಎಂದು ಹೇಳಿಕೊಂಡಿದೆ. ಹಾಗೆಯೇ ಮಾರಿಯುಪೋಲ್‌ಗೆ ಶರಣಾಗಲು ಒಂದು ದಿನದ ಗಡುವನ್ನು ನೀಡಿದೆ. ಇಂದಿನ ಒಳಗೆ ಶರಣಾಗಬೇಕು, ಇಲ್ಲವಾದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ರಷ್ಯಾ ಸೇನೆ ಹೇಳಿದೆ.

ಸೆವಾಸ್ಟೊಪೋಲ್ ಗವರ್ನರ್ ಮಿಖಾಯಿಲ್ ರಜ್ವೊಝೇವ್ ಅವರು ವ್ಲಾಡಿಮಿರ್ ಪುಟಿನ್ ಪಡೆಗಳಿಗೆ ಪ್ರತಿ ಏಟು ಎಂಬಂತೆ ಹೇಳಿಕೆಯೊಂದನ್ನು ನೀಡಿದ್ದಾರೆ. ರಷ್ಯಾದ ಕಪ್ಪು ಸಮುದ್ರದ ಫ್ಲೀಟ್‌ನ ಉಪ ಕಮಾಂಡರ್ ಅನ್ನು ಗುಂಡಿಕ್ಕಿ ಕೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಹಿರಿಯ ನೌಕಾ ಅಧಿಕಾರಿ ಕ್ಯಾಪ್ಟನ್ ಆಂಡ್ರೆ ಪಾಲಿಯ್ ಉಕ್ರೇನ್‌ನಲ್ಲಿ ನಡೆದ ಯುದ್ಧದಲ್ಲಿ ಕೊಲ್ಲಲ್ಪಟ್ಟರು ಎಂದು ವರದಿ ಉಲ್ಲೇಖ ಮಾಡಿದೆ. ಆದರೆ ಕೀವ್‌ ಐದು ಸೇನಾ ಜನರಲ್‌ಗಳನ್ನು ಕೊಂದಿರುವುದಾಗಿ ಹೇಳಿಕೊಂಡಿದೆ.

ರಷ್ಯಾದಲ್ಲಿ ಯುದ್ಧ ವಿರೋಧಿ ಅಲೆ: 900ಕ್ಕೂ ಅಧಿಕ ಮಂದಿಯ ಬಂಧನರಷ್ಯಾದಲ್ಲಿ ಯುದ್ಧ ವಿರೋಧಿ ಅಲೆ: 900ಕ್ಕೂ ಅಧಿಕ ಮಂದಿಯ ಬಂಧನ

ಮಾರಿಯುಪೋಲ್ ನಗರದ ಅಂತಿಮ ಆಕ್ರಮಣಕ್ಕೆ ತಯಾರಿ ನಡೆಸುತ್ತಿರುವ ರಷ್ಯಾ ಮಾತ್ರ ಈ ಹೇಳಿಕೆಯನ್ನು ನಿರಾಕರಿಸಿದೆ. ಭಾನುವಾರ ರಾತ್ರಿಯೇ ಶರಣಾಗುವಂತೆ ರಷ್ಯಾವು ಮಾರಿಯುಪೋಲ್‌ ಆಡಳಿತಕ್ಕೆ ಹೇಳಿದೆ. ಮಾಸ್ಕೋ ಕಾಲಮಾನ ಪ್ರಕಾರ ಬೆಳಿಗ್ಗೆ 5 ಗಂಟೆಗೆ (ಭಾರತೀಯ ಕಾಲಮಾನ ಬೆಳಿಗ್ಗೆ 7.30) ಗಡುವನ್ನು ನಿಗದಿಪಡಿಸಲಾಗಿದೆ. ಇದಾಗ ಬಳಿಕ ದಾಳಿ ನಡೆಸಿದ ನಗರವನ್ನು ಸಂಪೂರ್ಣವಾಗಿ ನಾವು ಹತೋಟಿಗೆ ಪಡೆದುಕೊಳ್ಳುತ್ತೇವೆ ಎಂದು ರಷ್ಯಾ ಹೇಳಿಕೊಂಡಿದೆ.

Russia-Ukraine war day 26: Heres Major developments, Explained in Kannada

ಈ ನಡುವೆ ಯಹೂದಿಗಳನ್ನು ರಕ್ಷಣೆ ಮಾಡುವಂತೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇಸ್ರೇಲ್‌ಗೆ ಮನವಿ ಮಾಡಿದ್ದಾರೆ. "ನಿಮ್ಮ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಅತ್ಯುತ್ತಮವಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ನೀವು ಖಂಡಿತವಾಗಿಯೂ ನಮ್ಮ ಜನರಿಗೆ ಸಹಾಯ ಮಾಡುತ್ತೀರಿ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ. ಇಸ್ರೇಲಿ ವಿದೇಶಾಂಗ ಸಚಿವ ಜೈರ್ ಲ್ಯಾಪಿಡ್, "ನಾವು ಉಕ್ರೇನ್‌ಗೆ ಕೈಲಾದಷ್ಟು ಸಹಾಯ ಮಾಡುತ್ತೇವೆ," ಎಂದು ಹೇಳಿದ್ದಾರೆ. ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿ 26 ದಿನಗಳಾಗಿದ್ದು, ಪ್ರಮುಖ ಬೆಳವಣಿಗೆಗಳ ರೌಂಡ್‌ಅಪ್‌ ಇಲ್ಲಿದೆ.

ಪ್ರಮುಖ ಬೆಳವಣಿಗೆಗಳ ರೌಂಡ್‌ಅಪ್‌

* ಮಾರಿಯುಪೋಲ್‌ನಲ್ಲಿ ರಷ್ಯಾಕ್ಕೆ ಶರಣಾಗತಿ ಆಗುವಂತೆ ರಷ್ಯಾವು ಹೇಳಿದ್ದು, ಯಾವುದೇ ಕಾರಣಕ್ಕೂ ನಾವು ಶರಣವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
* ಕೊರಿಯನ್ ಕಂಪನಿ ಎಲ್‌ಜಿ ಎಲೆಕ್ಟ್ರಾನಿಕ್ಸ್ ರಷ್ಯಾಕ್ಕೆ ತನ್ನ ಉತ್ಪನ್ನಗಳ ರಫ್ತನ್ನು ನಿಲ್ಲಿಸಿದೆ. ಆದರೆ, ಈ ಕುರಿತು ನೀಡಿರುವ ಹೇಳಿಕೆಯಲ್ಲಿ ಕಂಪನಿ ಉಕ್ರೇನ್ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ.
* ಮಾರಿಯುಪೋಲ್‌ ನಗರದಲ್ಲಿ ಇರುವ ಜನರು ನಗರವನ್ನು ತೊರೆಯಲು ಸಹಾಯ ಮಾಡಲಾಗುವುದು ಎಂದು ರಷ್ಯಾ ಹೇಳಿದೆ

ದೇಶದ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಅನುಮತಿಸಲು ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳ ಮನವಿದೇಶದ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಅನುಮತಿಸಲು ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳ ಮನವಿ

* ಮಾರಿಯುಪೋಲ್‌ನಲ್ಲಿ ಸುಮಾರು 300,000 ಜನರು ಸಿಲುಕಿದ್ದಾರೆ. ಬಾಂಬ್‌ ದಾಳಿಗೆ ಒಳಗಾಗಿರುವ ಈ ಪ್ರದೇಶದಲ್ಲಿ ಜನರು ಸರಿಯಾಗಿ ಆಹಾರ, ನೀರು ಇಲ್ಲದೆ ಸಂಕಷ್ಟದಲ್ಲಿದ್ದಾರೆ.
* ರಷ್ಯಾವು ಹಲವಾರು ಆಶ್ರಮಗಳು, ಶಾಲೆಗಳು, ಆಸ್ಪತ್ರೆ ಮತ್ತು ರಂಗಮಂದಿರಗಳ ಮೇಲೆ ದಾಳಿ ನಡೆಸಿದೆ. ಈ ಹಿನ್ನೆಲೆಯಿಂದಾಗಿ ಮಾರಿಯುಪೋಲ್ ದಾಳಿಯು ಯುದ್ಧಾಪರಾಧ ಎಂದು ಉಕ್ರೇನ್ ಹೇಳಿದೆ.
* ಭಾನುವಾರ ಹಲವಾರು ಪ್ರದೇಶಗಳಲ್ಲಿ ಶೆಲ್‌ ದಾಳಿ ಸ್ಥಗಿತವಾಗಿತ್ತು. ಆದರೆ ಕೀವ್‌ನಲ್ಲಿ ಕನಿಷ್ಠ ನಾಲ್ಕು ಜನರ ಸಾವಿಗೆ ಶೆಲ್‌ ದಾಳಿಯು ಕಾರಣವಾಗಿದೆ.
* ಇಸ್ರೇಲ್ ತನ್ನ ಕ್ಷಿಪಣಿ ರಕ್ಷಣಾ ತಂತ್ರಜ್ಞಾನವನ್ನು ಉಕ್ರೇನ್‌ಗೆ ಕಳುಹಿಸಲು ಮುಂದಾಗದ್ದನ್ನು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಟೀಕೆ ಮಾಡಿದ್ದಾರೆ.
* ನಿಮ್ಮ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಅತ್ಯುತ್ತಮವೆಂದು ಎಲ್ಲರಿಗೂ ತಿಳಿದಿದೆ. ನೀವು ಖಂಡಿತವಾಗಿಯೂ ನಮ್ಮ ಜನರಿಗೆ ಸಹಾಯ ಮಾಡಬಹುದು ಎಂದು ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಇಸ್ರೇಲ್‌ ಅನ್ನು ಉದ್ದೇಶಿಸಿ ಹೇಳಿದ್ದಾರೆ.
* ಮಾರ್ಚ್ 19 ರ ಮಧ್ಯರಾತ್ರಿಯ ವೇಳೆಗೆ ಉಕ್ರೇನ್‌ನಲ್ಲಿ ಕನಿಷ್ಠ 902 ನಾಗರಿಕರು ಸಾವನ್ನಪ್ಪಿದ್ದಾರೆ ಹಾಗೂ 1,459 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಭಾನುವಾರ ಹೇಳಿದೆ.
* ಮಾರಿಯುಪೋಲ್ ಸೇರಿದಂತೆ ಯುದ್ಧದಿಂದ ತಲ್ಲಣಿಸಿರುವ ನಗರಗಳಲ್ಲಿ ಸಾವುನೋವುಗಳ ವರದಿಗಳನ್ನು ಪಡೆಯಲು ಅಥವಾ ಪರಿಶೀಲಿಸಲು ಸಾಧ್ಯವಾಗದ ಕಾರಣ ನಿಜವಾದ ಸಾವುಗಳ ಸಂಖ್ಯೆ ಇನ್ನೂ ಅಧಿಕವಾಗಿದೆ ಎಂದು ನಂಬಲಾಗಿದೆ.
* 400 ಮಂದಿ ಆಶ್ರಯಪಡೆಯುತ್ತಿದ್ದ ಮಾರಿಯುಪೋಲ್ ನಗರದ ಕಲಾ ಶಾಲೆಯ ಮೇಲೆ ರಷ್ಯಾದ ಸೇನೆಯು ರಾಕೆಟ್ ಮತ್ತು ಬಾಂಬ್‌ಗಳಿಂದ ಸ್ಫೋಟ ಮಾಡಿದೆ. ಇಲ್ಲಿ ಸಾವಿನ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ.
* ಲುಹಾನ್ಸ್ಕ್ ಪ್ರದೇಶದ ಕ್ರೆಮಿನ್‌ನ ನಗರದಲ್ಲಿ ಮಾರ್ಚ್ 11 ರಂದು ರಷ್ಯಾದ ಟ್ಯಾಂಕ್‌ಗಳಿಂದ ಬಾಂಬ್‌ಗೆ ದಾಳಿಗೆ ಒಳಗಾದ ವೃದ್ಧಾಶ್ರಮದಲ್ಲಿ 10 ದಿನಗಳ ನಂತರ 56 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ.
* ಮರಿಯುಪೋಲ್‌ನಲ್ಲಿ ಶೇಕಡ 80ರಷ್ಟು ವಸತಿ ಕಟ್ಟಡಗಳು ನಾಶವಾಗಿವೆ. ರಷ್ಯಾದ ಟ್ಯಾಂಕ್‌ಗಳು ಈ ಪ್ರದೇಶದೆಲ್ಲಡೆ ಆವರಿಸಿದೆ.

English summary
Russia-Ukraine war day 26: Mariupol given deadline to surrender by today, Here's Major developments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X