ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಿಂದ 3.2 ಕೋಟಿ ಸ್ಪುಟ್ನಿಕ್V ಲಸಿಕೆ ಖರೀದಿಸಿದ ಮೆಕ್ಸಿಕೋ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 09: ರಷ್ಯಾದ ಕೊರೊನಾ ಲಸಿಕೆ ಸ್ಪುಟ್ನಿಕ್ V ಗೆ ಬೇಡಿಕೆ ಹೆಚ್ಚಾಗಿದ್ದು, ಮೆಕ್ಸಿಕೋ ಈಗಾಗಲೇ 3.2 ಕೋಟಿ ಡೋಸ್ ಖರೀದಿಸಿದೆ.

ಸಂಶೋಧನೆಗೆ ಧನ ಸಹಾಯ ಮಾಡಿದ್ದ ರಷ್ಯಾ ನೇರ ಹೂಡಿಕೆ ನಿಧಿ (ಆರ್​ಡಿಐಎಫ್​) ಮೆಕ್ಸಿಕೋಗೆ 3.2 ಕೋಟಿ ಡೋಸ್​ ಲಸಿಕೆ ಮಾರಾಟ ಮಾಡಲು ಬುಧವಾರ ಒಪ್ಪಂದ ಮಾಡಿಕೊಂಡಿದೆ.

ಕೊರೊನಾ ಕೊನೆಯ ಸಾಂಕ್ರಾಮಿಕವಲ್ಲ: ಭವಿಷ್ಯದ ಸವಾಲುಗಳಿಗೆ ಸಿದ್ಧರಾಗಿ ಕೊರೊನಾ ಕೊನೆಯ ಸಾಂಕ್ರಾಮಿಕವಲ್ಲ: ಭವಿಷ್ಯದ ಸವಾಲುಗಳಿಗೆ ಸಿದ್ಧರಾಗಿ

ಮಾಸ್ಕೋದಲ್ಲಿರುವ ಗಮೆಲಿಯಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್V ಲಸಿಕೆ ನೋಂದಣಿಯಾಗಿದ್ದರೂ, ಮೂರನೇ ಹಂತದಲ್ಲಿ 40 ಸಾವಿರ ಜನರ ಮೇಲೆ ಪ್ರಯೋಗ ನಡೆಸುತ್ತಿದೆ.

Russia’s RDIF To Sell 32 Million Covid-19 Vaccine Doses To Mexico Firm

ಈ ಲಸಿಕೆಯ ಉತ್ಪಾದನೆಗೆ ಭಾರತದ ನೆರವು ಕೋರಿರುವ ರಷ್ಯಾ, ಮೂರನೇ ಹಂತದ ಪರೀಕ್ಷೆಗೂ ಅನುಮತಿ ಪಡೆದುಕೊಂಡಿದೆ.

ಇದು ಲಸಿಕೆಗೆ ಸಂಬಂಧಿಸಿದಂತೆ ರಷ್ಯಾದ ಎರಡನೇ ಮಾರಾಟ ಒಪ್ಪಂದವಾಗಿದೆ. ಈ ಮೊದಲು ಆಗಸ್ಟ್​ನಲ್ಲಿ ಕಜಕಿಸ್ತಾನ ಜತೆಗೆ ಖರೀದಿ ಒಪ್ಪಂದ ಮಾಡಿಕೊಂಡಿದೆ. ಆರಂಭದಲ್ಲಿ 20 ಲಕ್ಷ ಡೋಸ್​ ಬಳಿಕ ಇದನ್ನು 50 ಲಕ್ಷ ಡೋಸ್​ಗೆ ಹೆಚ್ಚಿಸುವ ಉದ್ದೇಶ ಹೊಂದಿದೆ.

ಲಸಿಕೆ ತಯಾರಿಕಾ ಕಂಪನಿ ಕೂಡ ಉತ್ತಮವಾಗಿದೆ. ಭಾರತದ ಕಂಪನಿ ಜೊತೆ ಸೇರಿ ದೊಡ್ಡ ಮಟ್ಟದಲ್ಲಿ ಲಸಿಕೆ ತಯಾರಿಕೆಯ ಗುರಿ ಹೊಂದಿದೆ ಎಂದು ಹೇಳಿದೆ.

ಸಮಗ್ರ ದತ್ತಾಂಶವನ್ನು ನೀಡಲಾಗಿದ್ದು, ಭಾರತದಲ್ಲಿ ಮೂರನೇ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ಕೋರಿದ್ದಾರೆ. ಭಾರತದಿಂದ ಅನುಮೋದನೆ ಸಿಕ್ಕಿದ ನಂತರ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಭಾರತದಲ್ಲಿ ಆರಂಭವಾಗುತ್ತದೆ.

ಸ್ಪುಟ್ನಿಕ್ 5 ವೆಬ್‌ಸೈಟ್ ಮಾಹಿತಿ ಪ್ರಕಾರ ಸೌದಿ ಅರೇಬಿಯಾ, ಯುಎಇ, ಬ್ರೆಜಿಲ್ ಮತ್ತು ಫಿಲಿಪೈನ್ಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ರಷ್ಯಾ ಮುಂದಾಗಿದೆ

English summary
Russia’s sovereign wealth fund will sell 32 million doses of potential Covid-19 vaccine ‘Sputnik-V’ to a top pharmaceutical company in Mexico, Russia’s second vaccine export deal, a source close to the deal said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X