ರಷ್ಯಾದ ಕೋವಿಡ್ ಲಸಿಕೆ 'ಸ್ಪುಟ್ನಿಕ್ ವಿ' ಶೇ. 91.4ರಷ್ಟು ಪರಿಣಾಮಕಾರಿ!

ಮಾಸ್ಕೊ, ಡಿಸೆಂಬರ್ 14: ಕೋವಿಡ್-19 ನಿಯಂತ್ರಣಕ್ಕಾಗಿ ರಷ್ಯಾ ಅಭಿವೃದ್ಧಿಪಡಿಸಿರುವ 'ಸ್ಪುಟ್ನಿಕ್ ವಿ' ಕೋವಿಡ್‌ ಲಸಿಕೆ ಶೇಕಡಾ 91.4ರಷ್ಟು ಪರಿಣಾಮಕಾರಿಯಾಗಿದೆ ಎಂದು ಕ್ಲಿನಿಕಲ್ ಪ್ರಯೋಗಗಳ ಅಂತಿಮ ನಿಯಂತ್ರಣ ದತ್ತಾಂಶ ಕೇಂದ್ರದ ವಿಶ್ಲೇಷಣೆ ಹೇಳಿದೆ.

ರಷ್ಯಾ ವಿಶ್ವದಲ್ಲೇ ಸಂಭಾವ್ಯ ಕೋವಿಡ್-19 ಲಸಿಕೆಯನ್ನು ಅನುಮೋದಿಸಿದ ವಿಶ್ವದ ಮೊದಲ ರಾಷ್ಟ್ರವಾಗಿದೆ. ಆಗಸ್ಟ್‌ 11ರಂದು 'ಸ್ಪುಟ್ನಿಕ್ ವಿ' ಕೋವಿಡ್-19 ಲಸಿಕೆಯನ್ನು ನೋಂದಾಯಿಸಿತು. ರಷ್ಯಾದ ಗಮಲೆಯಾ ನ್ಯಾಷನಲ್ ರಿಸರ್ಚ್‌ ಇಸ್ಟಿಟ್ಯೂಟ್ ಆಫ್ ಎಪಿಡೆಮಿಯೊಲಜಿ ಆ್ಯಂಡ್ ಮೈಕ್ರೊಬಯಾಲಜಿಯಲ್ಲಿ 'ಸ್ಪುಟ್ನಿಕ್ ವಿ' ಲಸಿಕೆ ಅಭಿವೃದ್ಧಿಪಡಿಸಲಾಗಿದೆ.

Russias Covid Vaccine Sputnik V Shows 91.4% Efficacy In Clinical Trials

'ಸ್ಪುಟ್ನಿಕ್ ವಿ' ಲಸಿಕೆ ಕೋವಿಡ್‌ಗೆ ಶೇಕಡಾ 92ರಷ್ಟು ಪರಿಣಾಮಕಾರಿ ಎಂದು ಈ ಹಿಂದೆ ಆರ್‌ಡಿಎಫ್‌ನ ಪತ್ರಿಕಾ ಪ್ರಕಟಣೆ ತಿಳಿಸಿತ್ತು. ಇದೀಗ ಕ್ಲಿನಿಕಲ್ ಪ್ರಯೋಗಗಳ ಅಂತಿಮ ನಿಯಂತ್ರಣ ದತ್ತಾಂಶವು ಶೇ. 91.4ರಷ್ಟು ಪರಿಣಾಮಕಾರಿ ಎಂದು ಪ್ರಕಟಿಸಿದೆ.

ಪತ್ರಿಕಾ ಪ್ರಕಟಣೆಯ ಪ್ರಕಾರ, ಸ್ಪುಟ್ನಿಕ್-ವಿ ಯ ಮೊದಲ ಡೋಸ್‌ ನೀಡಿದ 21 ದಿನಗಳ ನಂತರ ಪಡೆದ ದತ್ತಾಂಶದ ಅಂತಿಮ ನಿಯಂತ್ರಣ ಕೇಂದ್ರದ ವಿಶ್ಲೇಷಣೆಯು, ಶೇಕಡಾ 91.4 ರಷ್ಟು ಪರಿಣಾಮಕಾರಿತ್ವವನ್ನು ದೃಢಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+