• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷಿಪಣಿ ದಾಳಿ ನಡೆಸಿ ಪೋಲೆಂಡ್‌ನಲ್ಲಿ ಇಬ್ಬರನ್ನು ಕೊಂದ ರಷ್ಯಾ, ಹೈ ಅಲರ್ಟ್ ಘೋಷಣೆ

|
Google Oneindia Kannada News

ನವದೆಹಲಿ, ನವೆಂಬರ್‌ 16: ರಷ್ಯಾದ ಕ್ಷಿಪಣಿ ದಾಳಿಯಿಂದ ಮಂಗಳವಾರ ಪೋಲೆಂಡ್‌ನಲ್ಲಿ ಇಬ್ಬರು ನಾಗರೀಕರು ಮೃತಪಟ್ಟಿದ್ದಾರೆ. ಇದು ಉಕ್ರೇನ್‌ನಲ್ಲಿ ಯುದ್ಧದ ಸ್ಥಿತಿ ಹೆಚ್ಚಳವಾಗಿದೆ. ಇದರಿಂದ ತನ್ನ ಮಿಲಿಟರಿಯನ್ನು ಹೆಚ್ಚಿನ ಸನ್ನದ್ದತೆಯಲ್ಲಿ ಇರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ರಷ್ಯಾದ ಕ್ಷಿಪಣಿ ದಾಳಿ ಮಾಡಿ ಇಬ್ಬರನ್ನು ಕೊಂದು ಹಾಕಲಾಗಿದೆ. ಆದರೆ ಇದಕ್ಕೆ ನಿರ್ಣಾಯಕ ಪುರಾವೆಗಳು ಸಿಕ್ಕಿಲ್ಲ. ಈ ಸಂಬಂಧ ಹೆಚ್ಚಿನ ವಿವರಣೆಗಳಿಗಾಗಿ ರಷ್ಯಾ ರಾಜಧಾನಿ ಮಾಸ್ಕೋದ ರಾಯಭಾರಿಗಳನ್ನು ಕರೆಸಲಾಗಿದೆ ಎಂದು ತಿಳಿದು ಬಂದಿದೆ.

ಉಕ್ರೇನ್‌ಗೆ ಪರಿಹಾರ ನೀಡುವ ನಿರ್ಣಯದ ಪರ ಯುಎನ್‌ಜಿಎ ಮತಉಕ್ರೇನ್‌ಗೆ ಪರಿಹಾರ ನೀಡುವ ನಿರ್ಣಯದ ಪರ ಯುಎನ್‌ಜಿಎ ಮತ

ರಾಷ್ಟ್ರೀಯ ಭದ್ರತಾ ಮಂಡಳಿ ತುರ್ತು ಸಭೆಯ ನಂತರ ವಾರ್ಸಾ ತನ್ನ ಮಿಲಿಟರಿ ಹೆಚ್ಚು ಸನ್ನದ್ಧವಾಗಿರುವಂತೆ ಎಚ್ಚರಿಕೆಯನ್ನು ನೀಡಿತು. ಕೆಲವು ಯುದ್ಧ ಪಡೆಗಳು ಹಾಗೂ ಇತರ ಪೂರಕ ಸೇವೆಗಳನ್ನು ಸಜ್ಜುಗೊಳಿಸುವ ನಿರ್ಧಾರ ಮಾಡಲಾಗಿದೆ ಎಂದು ವಾರ್ಸಾ ವಕ್ತಾರ ಪಿಯೋಟರ್‌ ಮುಲ್ಲರ್‌ ತಿಳಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅವರು ಪೊಲಂಡ್‌ ಅಧ್ಯಕ್ಷ ಆಂಡ್ರೆಜ್‌ ಡುಡಾ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಪೊಲೆಂಡ್‌ಗೆ ಅಮೆರಿಕ ಸಂಪೂರ್ಣ ಬೆಂಬಲ ಮತ್ತು ಸಹಾಯವನ್ನು ನೀಡಲಾಗುತ್ತದೆ ಎಂದು ಶ್ವೇತಭವನ ತಿಳಿಸಿದೆ.

ಪೋಲೆಂಡ್‌ನಲ್ಲಿ ನಡೆದ ಸ್ಪೋಟದ ಬಗ್ಗೆ ನ್ಯಾಟೋ ಮುಖ್ಯಸ್ಥ ಜೆನ್ಸ್‌ ಸ್ಟೋಲ್ಟೆನ್‌ಬರ್ಗ್‌ ಅವರೊಂದಿಗೆ ಜೋ ಬಿಡೆನ್‌ ಮಾತನಾಡಿದ್ದಾರೆ. ಇದಲ್ಲದೆ ಮೈತ್ರಿಕೂಟದ ರಾಯಭಾರಿಗಳು ಬುಧವಾರ ತುರ್ತು ಸಭೆ ನಡೆಸಲಿದ್ದಾರೆ. ಪೋಲೆಂಡ್‌ ಮೇಲಿನ ಈ ರಷ್ಯಾದ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮುಖ್ಯವಾಗಿ ಯುರೋಪಿಯನ್‌ ಯುನಿಯನ್‌ ಮುಖ್ಯಸ್ಥ ಚಾರ್ಲ್ಸ್ ಮೈಕೆಲ್‌ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಬಾಲಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯಲ್ಲಿ ಮಾತುಕತೆಗೆ ಆಹ್ವಾನಿಸಿದ್ದಾರೆ.

Russia declares high alert after missile attack kills two in Poland

ಉಕ್ರೇನ್‌ ಅಧ್ಯಕ್ಷ ವಾಲೊಡಿಮಿರ್‌ ಝೆಲೆನ್ಸ್ಕಿ ಈ ಹಿಂದೆ ಎರಡು ರಷ್ಯಾದ ಕ್ಷಿಪಣಿಗಳು ಪೋಲಂಡ್‌ಗೆ ದಾಳಿ ಮಾಡಿದ್ದವು. ಇದು ಅತ್ಯಂತ ಅಘಾತಕಾರಿ ಎಂದು ತಿಳಿಸಿದ್ದಾರೆ. ಮಂಗಳವಾರ ರಷ್ಯಾದ ಕ್ಷಿಪಣಿಗಳು ಪೊಲೆಂಡ್‌ನ ಗಡಿಯ ಸಮೀಪದ ಎಲ್ವಿವ್‌ ಸೇರಿದಂತೆ ಉಕ್ರೇನ್‌ನಾದ್ಯಂತ ನಗರಗಳನ್ನು ಸ್ಫೋಟಿಸಿದೆ. ಇದರಿಂದ 10 ಮಿಲಿಯನ್‌ ಜನರಿಗೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಬಳಿಕ ನಾವು 8 ಮಿಲಿಯನ್‌ ಜನರಿಗೆ ಮರಳಿ ವಿದ್ಯುತ್‌ ನೀಡಿದ್ದೇವೆ ಎಂದು ವಾಲೊಡಿಮಿರ್‌ ಝೆಲೆನ್ಸ್ಕಿ ತಿಳಿಸಿದ್ದಾರೆ.

English summary
A Russian missile killed two people in Poland on Tuesday, escalating the war in Ukraine. As a result, its military has been put on high alert, according to reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X