ರಷ್ಯಾ & ಉಕ್ರೇನ್ ಯುದ್ಧಕ್ಕೆ ಕೊನೇ ಮೊಳೆ: ಶಾಂತಿ ಸ್ಥಾಪನೆ ಮಾಡುತ್ತಾ ಭಾರತ?
ರಷ್ಯಾ & ಉಕ್ರೇನ್ ಯುದ್ಧಕ್ಕೆ ಬ್ರೇಕ್ ಹಾಕಲು ಭಾರತ ಮುಂದಾಗಿದೆ. ಈಗಾಗಲೇ ಹಲವಾರು ದಿನಗಳಿಂದ ಯುದ್ಧ ನಿಲ್ಲಿಸಲು ಭಾರತ ತನ್ನ ಪ್ರಯತ್ನ ಆರಂಭ ಮಾಡಿದೆ. ಇದು ಜಾಗತಿಕ ಮಟ್ಟದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಒದಗಿಸಿತ್ತು. ಹಾಗೇ ಭಾರತದ ಈ ನಡೆ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಹೀಗಿದ್ದಾಗಲೇ ಭಾರತದ ಜೇಮ್ಸ್ ಬಾಂಡ್ ಈಗ ರಷ್ಯಾಗೆ ಹಾರುತ್ತಿದ್ದು, ಇನ್ನೇನು ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವ ಕ್ಷಣಗಳು ಹತ್ತಿರದಲ್ಲೇ ಇವೆ ಎನ್ನಲಾಗುತ್ತಿದೆ!
ಉಕ್ರೇನ್ & ರಷ್ಯಾ ತಿಕ್ಕಾಟದಲ್ಲಿ ಬಲಿಯಾಗುತ್ತಿರುವ ಅಮಾಯಕ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ರಷ್ಯಾ ಸೇನೆ ರೊಚ್ಚಿಗೆದ್ದು ಅಟ್ಯಾಕ್ ಮಾಡುತ್ತಾ ಇದ್ದು ಉಕ್ರೇನ್ ಜನ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ಬಂದಿದೆ ಎಂಬ ಆರೋಪ ಕೂಡ ಇದೆ. ಆದರೆ, ನಾವು ಸಂಧಾನಕ್ಕೆ ಸಿದ್ಧವಾಗಿದ್ದೇವೆ ಉಕ್ರೇನ್ ಶಾಂತಿ ಮಾತುಕತೆಗೆ ಮುಂದೆ ಬರ್ತಿಲ್ಲ ಎಂಬ ಆರೋಪವನ್ನ ರಷ್ಯಾ ಮಾಡುತ್ತಿದೆ. ಹೀಗೆ ಇಬ್ಬರ ಕಿತ್ತಾಟದಲ್ಲಿ ಜಗತ್ತಿನ ಶಾಂತಿಯೇ ಹಾಳಾಗಿ ಹೋಗುತ್ತಿದೆ. ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಕೈಮೀರಿ ಹೋಗುತ್ತಿದ್ದು, ಏನು ಮಾಡೋದು ಎಂಬ ಭಯ ಆವರಿಸಿದ ಸಮಯದಲ್ಲೇ ಭಾರತ ಹೀರೋ ರೀತಿ ಎಂಟ್ರಿ ಕೊಟ್ಟಿದೆ!

ಭಾರತದ ಜೇಮ್ಸ್ ಬಾಂಡ್ ರಷ್ಯಾಗೆ!
ಭಾರತ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಬಲವಾಗಿ ಬೆಳೆದು ನಿಂತಿದೆ, ಅದು ಎಷ್ಟರಮಟ್ಟಿಗೆ ಅಂದ್ರೆ ದೊಡ್ಡ ಯುದ್ಧ ಒಂದನ್ನ ನಿಲ್ಲಿಸುವಷ್ಟು ಭಾರತ ಇದೀಗ ಶಕ್ತಿಶಾಲಿ ಆಗಿದೆ. ಹೀಗಾಗಿ ಭಾರತದ ಮಾತಿಗೆ ಪ್ರಪಂಚ ಕೂಡ ಬೆಲೆ ನೀಡುತ್ತದೆ. ಹೀಗಿದ್ದಾಗ ರಷ್ಯಾ & ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಲು, ಇದೀಗ ಭಾರತ ಸೇರಿದಂತೆ ಬ್ರಿಕ್ಸ್ ಒಕ್ಕೂಟದ ದೇಶಗಳು ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿವೆ. ಹೀಗಿದ್ದಾಗಲೇ ಮಹತ್ವದ ಸಭೆಗೆ ಭಾರತದ ಜೇಮ್ಸ್ ಬಾಂಡ್ ಎಂದೇ ಖ್ಯಾತಿಯನ್ನ ಪಡೆದಿರುವ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ತೆರಳುತ್ತಿದ್ದಾರೆ ಎಂಬ ಮಾಹಿತಿ ಸಿಗುತ್ತಿದೆ.












Click it and Unblock the Notifications