ಜಿಂಬಾಬ್ವೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುಗಾಬೆ

Posted By:
Subscribe to Oneindia Kannada

ಹರಾರೆ, ನವೆಂಬರ್ 21: 'ಜಿಂಬಾಬ್ವೆ ಆಫ್ರಿಕನ್ ನ್ಯಾಷನಲ್ ಯೂನಿಯ‌ನ್-ಪೆಟ್ರಿಯಾಟಿಕ್ ಫ್ರಂಟ್' ಮುಖ್ಯಸ್ಥ ಸ್ಥಾನದಿಂದ ಪದಚ್ಯುತಗೊಂಡಿದ್ದ ರಾಬರ್ಟ್ ಮುಗಾಬೆ ಕೊನೆಗೂ ಒತ್ತಡಕ್ಕೆ ಮಣಿದಿದ್ದಾರೆ. 37 ವರ್ಷಗಳ ಆಡಳಿತದ ನಂತರ ಕೊನೆಗೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಜಿಂಬಾಬ್ವೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.

ಜಿಂಬಾಬ್ವೆಯಲ್ಲಿ ಕ್ಷಿಪ್ರ ಕ್ರಾಂತಿ, ಮುಗಾಬೆ 37 ವರ್ಷಗಳ ಆಡಳಿತ ಅಂತ್ಯ

ಕೆಲವು ದಿನಗಳ ಹಿಂದೆ ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ದೇಶದ ಆಡಳಿತ ಚುಕ್ಕಾಣಿಯನ್ನು ಸೇನೆ ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಅಧ್ಯಕ್ಷರನ್ನು ಅದು ಗೃಹ ಬಂಧನಕ್ಕೆ ತಳ್ಳಿತ್ತು.

ಗೃಹ ಬಂಧನದಿಂದ ಹೊರ ಬಂದು ಮಾತನಾಡಿದ್ದ 93 ವರ್ಷ ವಯಸ್ಸಿನ ಮುಗಾಬೆ ಅವರು ದೇಶ ಮತ್ತು ಸಹಜ ಸ್ಥತಿಗೆ ಬರಬೇಕಾಗಿದೆ ಎಂದಷ್ಟೇ ಹೇಳಿ ರಾಜೀನಾಮೆ ನೀಡಲು ನಿರಾಕರಿಸಿದ್ದರು. ಆದರೆ, ಈಗ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದಾರೆ.

Robert Mugabe resigns as Zimbabwe's president after 37 Years

ಬ್ರಿಟನ್‌ನಿಂದ 1980ರಲ್ಲಿ ಜಿಂಬಾಬ್ವೆ ಸ್ವಾತಂತ್ರ್ಯ ಪಡೆದುಕೊಂಡಿತ್ತು. ಅದಾದ ನಂತರ ಈ ದೇಶವನ್ನು ಆಳುತ್ತಾ ಬಂದ ಏಕಮೇವ ನಾಯಕ ಅಂದರೆ ಅದು ರಾಬರ್ಟ್ ಮುಗಾಬೆ. ಸೇನಾ ಕ್ರಾಂತಿಗೂ ಮುನ್ನ 37 ವರ್ಷಗಳ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದರು.

ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಮುಗಾಬೆ ನಕಾರ

ಮುಗಾಬೆ ಅವಧಿಯಲ್ಲಿ ಆಡಳಿತ ಹದಗೆಟ್ಟಿತ್ತು. ದೇಶದಲ್ಲಿ ಸಾಮೂಹಿಕ ವಲಸೆ, ಅಕ್ರಮ ಮತದಾನ, ಹಳ್ಳ ಹಿಡಿದ ಆರ್ಥಿಕತೆಗಳು ಪ್ರಮುಖ ಸಮಸ್ಯೆಗಳಾಗಿ ಗುರುತಿಸಿಕೊಂಡಿದ್ದವು.

ಇತ್ತೀಚೆಗೆ ಮುಗಾಬೆ ಅವರ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನಲೆಯಲ್ಲಿ ತಮ್ಮ ಪತ್ನಿ 52 ವರ್ಷದ ಗ್ರೇಸ್ ಮುಗಾಬೆ ಅವರನ್ನು ಮುಂದಿನ ಅಧ್ಯಕ್ಷರನ್ನಾಗಿಸಲು ಪ್ರಯತ್ನ ನಡೆಸಿದ್ದರು. ಇದು ಸೇನೆಯ ಹಿರಿಯ ಅಧಿಕಾರಿಗಳಿಗೆ ಇಷ್ಟವಿರಲಿಲ್ಲ. ಹೀಗಾಗಿ, ಕ್ಷಿಪ್ತ ಕ್ರಾಂತಿ ನಡೆಸಿದ ಸೇನೆ, ಮುಗಾಬೆ ಅವರನ್ನು ಗೃಹಬಂಧನದಲ್ಲಿರಿಸಿ, ಆಡಳಿತ ಯಂತ್ರವನ್ನು ಕೈಗೆ ತೆಗೆದುಕೊಂಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Zimbabwe's President Robert Mugabe has submitted his resignation after nearly four decades as the country's leader.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ