• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದ ಜೆಲಿನ್-1 ಗಾಫೆನ್ 02 ಸಿ ಉಪಗ್ರಹ ಕಕ್ಷೆ ತಲುಪುವಲ್ಲಿ ವಿಫಲ

|

ಬೀಜಿಂಗ್, ಸಪ್ಟೆಂಬರ್.13: ಚೀನಾದ ಆಪ್ಟಿಕಲ್ ರಿಮೋಟ್ ಸೆನ್ಸಿಂಗ್ ಉಪಗ್ರಹ ಜಿಲಿನ್ -1 ಗಾಫೆನ್ 02 ಸಿ ಪೂರ್ವ ನಿಗದಿತ ಕಕ್ಷೆಗೆ ಪ್ರವೇಶಿಸಲು ಶನಿವಾರ ವಿಫಲವಾಗಿದೆ ಎಂದು ಬೀಜಿಂಗ್ ನಲ್ಲಿರುವ ಸರ್ಕಾರದ ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ.

ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಕುಯಿಝೊವಾ-1 ಎ ಉಪಗ್ರಹವನ್ನು ಹೊತ್ತ ರಾಕೆಟ್ ನ್ನು ಸ್ಥಳೀಯ ಸಮಯ ಮಧ್ಯಾಹ್ನ 1.02 ನಿಮಿಷಕ್ಕೆ ಉಡಾವಣೆಗೊಳಿಸಲಾಗಿತ್ತು. ಅಸಹಜ ಕಾರ್ಯಕ್ಷಮತೆಯಿಂದಾಗಿ ಮಿಷನ್ ವಿಫಲವಾಗಿದೆ.

ಚೀನಾದಿಂದ ಮರುಬಳಕೆ ಬಾಹ್ಯಾಕಾಶ ನೌಕೆ ಉಡಾವಣೆ, ಯೋಜನೆ ವಿವರ ಗೌಪ್ಯ

ಉಡಾವಣಾ ಕೇಂದ್ರವು ನೀಡಿರುವ ಮಾಹಿತಿಯ ಬಗ್ಗೆ ಚೀನಾ ಸರ್ಕಾರಿ ಅಧೀನದಲ್ಲಿರುವ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ನಿಗದಿತ ಕಕ್ಷೆ ತಲುಪದಿರಲು ಕಾರಣ ನಿಗೂಢ:

ಚೀನಾದಲ್ಲಿ ಶನಿವಾರ ಉಡಾವಣೆಯಾಗಿರುವ ಉಪಗ್ರಹವು ನಿಗದಿತ ಕಕ್ಷೆಯನ್ನು ಪ್ರವೇಶಿಸುವಲ್ಲಿ ವಿಫಲವಾಗಿದ್ದಕ್ಕೆ ಕಾರಣ ಏನು ಎನ್ನುವುದರ ಬಗ್ಗೆ ಇದುವರೆಗೂ ಅಧಿಕೃತ ಮಾಹಿತಿ ಸಿಕ್ಕಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

English summary
Remote-Sensing Optical Satellite Of China Fails To Reach Orbit: State Media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X