ವಿಶ್ವದ ದೊಡ್ಡಣ್ಣ ಅಮೆರಿಕವನ್ನು ನಡುಗಿಸಿದ ಆ 10 ಭೀಕರ ಶೂಟೌಟ್!

Posted By:
Subscribe to Oneindia Kannada

ಟೆಕ್ಸಾಸ್(ಅಮೆರಿಕ), ನವೆಂಬರ್ 6: ಚರ್ಚಿಗೆ ಪ್ರಾರ್ಥನೆಗೆಂದು ತೆರಳಿದ್ದ ಯಾರಿಗೂ ಅದೇ ತಮ್ಮ ಕೊನೆಯ ಪ್ರಾರ್ಥನೆ ಎಂಬ ಅರಿವೂ ಇರಲಿಲ್ಲ! ಆದರೆ ಆಗಬಾರದ್ದು ಆಗಿಯೇ ಹೋಯಿತು. ಅಮೆರಿಕ ಟೆಕ್ಸಾಸ್ ನ ಸದರ್ನ್ ಸ್ಪ್ರಿಂಗ್ಸ್ ಎಂಬಲ್ಲಿ ದುಷ್ಕರ್ಮಿಯೊಬ್ಬ ಯಾವುದೋ ದ್ವೇಷಕ್ಕೆ ನಡೆಸಿದ ಗುಂಡಿನ ದಾಳಿಗೆ 25 ಕ್ಕೂ ಹೆಚ್ಚು ಅಮಾಯಕ ಜೀವಗಳು ಹಾರಿಹೋದವು!

ಟೆಕ್ಸಾಸ್ ಚರ್ಚ್ ನಲ್ಲಿ ಶೂಟೌಟ್ : ಕನಿಷ್ಠ 20 ಜನರ ಹತ್ಯೆ

ಹೌದು, ಅಮೆರಿಕದಲ್ಲಿ ಮತ್ತೊಮ್ಮೆ ಶೂಟೌಟ್ ನ ಕರ್ಕಶ ಸದ್ದು ಸುದ್ದಿಮಾಡಿದೆ. ಟೆಕ್ಸಾಸ್ ನಲ್ಲಿ ನಿನ್ನೆ(ನ.5)ಸಂಭವಿಸಿದ ಶೂಟೌಟ್ ನಲ್ಲಿ 25 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದು,ನೂರಾರು ಜನ ಗಾಯಗೊಂಡಿದ್ದಾರೆ. ಇದು ಅಮೆರಿಕದ ಆಧುನಿಕ ಇತಿಹಾಸದ ಅತ್ಯಂತ ಕರಾಳ ದಿನ ಎನ್ನಿಸಿದೆ.

ಅಮೆರಿಕಾ ಇತಿಹಾಸದಲ್ಲೇ ಭೀಕರ ಶೂಟೌಟ್, ನರಮೇಧಕ್ಕೆ 59 ಬಲಿ, 500

ಆರ್ಥಿಕವಾಗಿ ಜಗತ್ತಿನ ದಿಗ್ಗಜರಾಷ್ಟ್ರ ಎನ್ನಿಸಿರುವ ಅಮೆರಿಕ, ತನ್ನ ನಾಗರಿಕರಿಗೆ ಎಷ್ಟು ಭದ್ರತೆ ನೀಡಿದ ಎಂಬ ಪ್ರಶ್ನೆಗೆ ಮೌನವೇ ಉತ್ತರವಾಗಬೇಕಾದ ಸ್ಥಿತಿಯಿದೆ. ಅಧ್ಯಕ್ಷರುಗಳು ಬದಲಾದರೂ, ಆಧುನಿಕ ತಂತ್ರಜ್ಞಾನ, ವೈಜ್ಞಾನಿಕತೆಯನ್ನು ಎಲ್ಲ ದೇಶಗಳಿಗಿಂತ ಮೊದಲೇ ಅಳವಡಿಸಿಕೊಳ್ಳುವ ಹೆಗ್ಗಳಿಕೆ ಪಡೆದಿದ್ದರೂ ಅಮೆರಿಕದ ಶೂಟೌಟ್ ಗಳನ್ನು ನಿಲ್ಲಿಸುವುದಕ್ಕೆ ಮಾತ್ರ ಸಾಧ್ಯವಾಗಿಲ್ಲ.

ಟೆಕ್ಸಾಸ್ ಯುನಿವರ್ಸಿಟಿ ಶೂಟೌಟ್: ಪೊಲೀಸ್ ಅಧಿಕಾರಿ ಹತ್ಯೆ

ಖಿನ್ನತೆ, ಮಾನಸಿಕ ಅಸಮತೋಲನ, ದ್ವೇಷ, ಪ್ರತೀಕಾರದ ಹೆಸರಿನಲ್ಲಿ ಇಂಥ ಶೂಟೌಟ್ ಗಳು ವಿಶ್ವದ ದೊಡ್ಡಣ್ಣನ ಅಸಲಿಯತ್ತನ್ನು ತೋರಿಸುತ್ತಿರುವುದು ಸುಳ್ಳಲ್ಲ. ಅಮೆರಿಕವನ್ನು ತಲ್ಲಣಿಸಿದ ಇತ್ತೀಚಿನ ವರ್ಷಗಳ 10 ಶೂಟೌಟ್ ಗಳ ಮಾಹಿತಿ ಇಲ್ಲಿದೆ...

ಲಾಸ್ ವೆಗಾಸ್ ಸಂಗೀತ ಸಂಜೆಯಲ್ಲಿ ಗುಂಡಿನ ಮೊರೆತ!

ಲಾಸ್ ವೆಗಾಸ್ ಸಂಗೀತ ಸಂಜೆಯಲ್ಲಿ ಗುಂಡಿನ ಮೊರೆತ!

ಅಕ್ಟೋಬರ್ 1 (2017) ರಂದು ಲಾಸ್ ವೆಗಾಸ್ ನಲ್ಲಿ ನಡೆಯುತ್ತಿದ್ದ ಸುಂದರ ಸಂಗೀತ ಸಂಜೆಯನ್ನು ಆಸ್ವಾದಿಸುವುದಕ್ಕೆ ಬಂದ 58 ಮಂದಿ ಗುಂಡಿನ ಮೊರೆತಕ್ಕೆ ಬಲಿಯಾಗಿದ್ದರು! ಈ ದಾಳಿ ನಡೆಸಿದ್ದು, ಸ್ಟಿಫನ್ ಪಡ್ಡಾಕ್ ಎಂಬುವವನು ಎಂಬುದು ನಂತರ ಬಹಿರಂಗಗೊಂಡಿತ್ತು.

ಅರ್ಕನಾಸ್ ನೈಟ್ ಕ್ಲಬ್ ನಲ್ಲಿ ಶೂಟೌಟ್ ಸದ್ದು!

ಅರ್ಕನಾಸ್ ನೈಟ್ ಕ್ಲಬ್ ನಲ್ಲಿ ಶೂಟೌಟ್ ಸದ್ದು!

ಜುಲೈ 1 ರಂದು ಅರ್ಕನಾಸ್ ನ ಲಿಟ್ಲ್ ರಾಕ್ ನ ನೈಟ್ ಕ್ಲಬ್ ವೊಂದರಲ್ಲಿ ಅಪರಿಚಿತನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 28 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಇದು ಕೇವಲ ಒಬ್ಬನೇ ವ್ಯಕ್ತಿ ನಡೆಸಿದ ಕೃತ್ಯವಲ್ಲ, ಯಾವುದೋ ತಂಡದ ಕೈವಾಡ ಈ ಘಟನೆಯ ಹಿಂದಿದೆ ಎಂದು ಪೊಲೀಸರು ಅಂದಾಜಿಸಿದ್ದರು.

ಆಸ್ಪತ್ರೆಯನ್ನೂ ಬಿಡಲಿಲ್ಲ ಗುಂಡಿನ ದಾಳಿ!

ಆಸ್ಪತ್ರೆಯನ್ನೂ ಬಿಡಲಿಲ್ಲ ಗುಂಡಿನ ದಾಳಿ!

ಜೂನ್ 30 ರಂದು ಬ್ರಾಂಕ್ಸ್ ಲೆಬನಾನ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಡಾ.ಹೆನ್ರಿ ಬೆಲ್ಲೋ ಎಂಬಾತ, ತಾನು ಕೆಲಸ ಕಳೆದುಕೊಳ್ಳುವುದಕ್ಕೆ ಆಸ್ಪತ್ರೆಯಲ್ಲಿನ ಕೆಲ ಸಹೋದ್ಯೋಗಿಗಳೇ ಕಾರಣ ಎಂದು ಅವರ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ವ್ಯಕ್ತಿ ಮೃತನಾಗಿದ್ದ, ಆರು ಜನ ಗಾಯಗೊಂಡಿದ್ದರು.

ಕ್ಯಾಬ್ ಚಾಲಕನ ಪ್ರತೀಕಾರಕ್ಕೆ ಮೂವರು ಬಲಿ!

ಕ್ಯಾಬ್ ಚಾಲಕನ ಪ್ರತೀಕಾರಕ್ಕೆ ಮೂವರು ಬಲಿ!

ಜೂನ್ 14 ರಂದು ಕ್ಯಾಬ್ ಚಾಲಕನಾಗಿದ್ದ ಜಿಮ್ಮಿ ಲ್ಯಾಮ್ ಎಂಬಾತ ತನ್ನ ಕಂಪೆನಿಯ ಓವರ್ ಟೈಮ್ ಡ್ಯೂಟಿಯ ಒತ್ತಡದಿಂದ ಕೋಪಗೊಂಡು, ಗುಂಡು ಹಾರಿಸಿದ ಪರಿಣಾಮ ಮೂವರು ಹತ್ಯೆಗೀಡಾಗಿದ್ದರು. ಗುಂಡಿನ ದಾಳಿಯ ನಂತರ ಈತ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆ ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ನಡೆದಿತ್ತು.

ಬೇಸ್ ಬಾಲ್ ಮೈದಾನದಲ್ಲಿ ಶೂಟೌಟ್

ಬೇಸ್ ಬಾಲ್ ಮೈದಾನದಲ್ಲಿ ಶೂಟೌಟ್

ಜೂನ್ 14, ರಂದು ಮತ್ತೊಂದು ಗುಂದಿನ ದಾಳಿ ನಡೆದಿದ್ದು, ಬೇಸ್ ಬಾಲ್ ಮೈದಾನವೊಂದರಲ್ಲಿ. ರಿಪಬ್ಲಿಕನ್ ಪಕ್ಷದ ಅನುಯಾಯಿಯೊಬ್ಬ ಬೇಸ್ ಬಾಲ್ ಆಡುತ್ತಿದ್ದ ಸಂದರ್ಭದಲ್ಲಿಜೇಮ್ಸ್ ಹಾಡ್ಗಿನ್ ಸನ್ ಎಂಬಾತ ನಡೆಸಿದ ಗುಂದಿನ ದಾಳಿಯಲ್ಲಿ ಆರು ಜನ ಗಾಯಗೊಂಡಿದ್ದರು. ಈ ಘತನೆಯ ನಂತರ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಹಾಡ್ಗಿನ್ ಸನ್ ಮೃತನಾಗಿದ್ದ.

ಐಸಿಸ್ ಬೆಂಬಲಿಗನಿಂದ ಗುಂಡಿನ ದಾಳಿ

ಐಸಿಸ್ ಬೆಂಬಲಿಗನಿಂದ ಗುಂಡಿನ ದಾಳಿ

ತಾನು ಐಸಿಸ್ ಬೆಂಬಲಿಗ ಎಂದು ಪರಿಚಯಿಸಿಕೊಂಡ ಈಸ್ಟಬನ್ ಸಾಂಟಿಗೋ ಎಂಬ 26 ವರ್ಷದ ಯುವಕ ಜನವರಿ 6 ರಂದು ಫೋರ್ಟ್ ಲೌಡರ್ಡೇಲ್ ಹಾಲಿವುಡ್ ಇಂಟರ್ನಾಶನಲ್ ಏರ್ ಪೋರ್ಟ್ ನಲ್ಲಿ ನಡೆಸಿದ ಗುಂದಿನ ದಾಳಿಯಲ್ಲಿ ಐವರು ಹತರಾಗಿ, ಹಲವರು ಗಾಯಗೊಂಡಿದ್ದರು.

ನೈಟ್ ಕ್ಲಬ್ ನಲ್ಲಿ 49 ಜನರ ಬರ್ಬರ ಹತ್ಯೆ

ನೈಟ್ ಕ್ಲಬ್ ನಲ್ಲಿ 49 ಜನರ ಬರ್ಬರ ಹತ್ಯೆ

ಓಮರ್ ಮ್ಯಾಟೀನ್ ಎಂಬ 29 ವರ್ಷದ ಯುವಕ 2016ರ ಜೂನ್ 11 ರಂದು ಒರ್ಲಾಂಡೊ ಫ್ಲೊರಿಡಾದ ಪಲ್ಸ್ ನೈಟ್ ಕ್ಲಬ್ ನ ಲ್ಲಿ ನಡೆಸಿದ ಭೀಕರ ಗುಂದಿನ ದಾಳಿಯಲ್ಲಿ 49 ಅಮಾಯಕರು ಬಲಿಯಾಗಿದ್ದರು. 53 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈತನೂ ಐಸಿಸ್ ಜೊತೆ ನಂಟು ಹೊಂದಿದ್ದ ಎನ್ನಲಾಗಿದೆ.

ಫ್ಕಾಕ್ಟರಿಯಲ್ಲಿ ಗುಂಡಿನ ಅಟ್ಟಹಾಸ

ಫ್ಕಾಕ್ಟರಿಯಲ್ಲಿ ಗುಂಡಿನ ಅಟ್ಟಹಾಸ

2016ರ ಫೆಬ್ರವರಿ 25 ರಂದು ಕೆಡ್ರಿಕ್ ಫೋರ್ಡ್ ಎಂಬ 38 ವರ್ಷದ ವ್ಯಕ್ತಿ ಹೆಸ್ಟಾನ್ ಎಂಬಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸಾವಿಗೀಡಾಗಿದ್ದರಲ್ಲದೆ, 14 ಕ್ಕೂ ಅಧಿಕ ಜನ ಗಾಯಗೊಂಡಿದ್ದರು. ಈ ಘಟನೆ ಫ್ಯಾಕ್ಟರಿಯೊಂದರಲ್ಲಿ ನಡೆದಿತ್ತು. ಫ್ಯಾಕ್ಟರಿಯಲ್ಲಿ ಆಗ ಇದ್ದ 200 ಕ್ಕು ಹೆಚ್ಚು ಜನರನ್ನು ಕಾಪಾಡುವ ಸಲುವಾಗಿ ಪೊಲೀಸರು ಕೆಡ್ರಿಕ್ ಫೋರ್ಡ್ ಮೇಲೆ ಪ್ರತಿದಾಳಿ ನಡೆಸಿ ಆತನನ್ನು ಸಾಯಿಸಿದ್ದರು.

ಮಿಶಿಗನ್ ನಲ್ಲಿ ಆರು ಜನರ ಹತ್ಯೆ

ಮಿಶಿಗನ್ ನಲ್ಲಿ ಆರು ಜನರ ಹತ್ಯೆ

2016ರ ಫೆಬ್ರವರಿ 20 ರಂದು ಜಾಸನ್ ಡಾಲ್ಟನ್ ಎಂಬ 45 ವರ್ಷದ ವ್ಯಕ್ತಿ ನಡೆಸಿದ ಗುಂಡಿನ ದಾಳಿಯಲ್ಲಿ ಆರು ಜನ ಬಲಿಯಾಗಿ, ಹಲವರು ಗಾಯಗೊಂದಿದ್ದರು. ಈ ಘಟನೆ ಮಿಶಿಗನ್ ನ ಕಲಮಾಜೂ ಎಂಬಲ್ಲಿ ನಡೆದಿತ್ತು.ಕ್ಯಾಬ್ ಡ್ರೈವರ್ ಆಗಿದ್ದ ಆತನ ಹಣಕ್ಕಾಗಿ ಕೊಲೆ ಮಾಡುತ್ತಿದ್ದ ಎಂಬುದು ನಂತರ ತಿಳಿದುಬಂದಿತ್ತು.

ಇಬ್ಬರಿಂದ ಗುಂಡಿನ ದಾಳಿ

ಇಬ್ಬರಿಂದ ಗುಂಡಿನ ದಾಳಿ

2015ರ ಡಿಸೆಂಬರ್ 2 ರಂದು ಸಯ್ಯದ್ ರಿಜ್ವಾನ್ ಫಾರೂಕ್ ಮತ್ತು ತಶ್ಫೀನ್ ಮಲೀಕ್ ಎಂಬ ಇಬ್ಬರು ಸಾರ್ವಜನಿಕ ಸ್ಥಳವೊಂದರಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ 14 ಜನ ಮೃತರಾಗಿದ್ದು, 14 ಜನ ಗಾಯಗೊಂಡಿದ್ದರು. ಈ ಘಟನೆ ಕ್ಯಾಲಿಫೋರ್ನಿಯಾದ ಸ್ಯಾನ್ ಬೆರ್ನಾರ್ಡಿನೊ ಎಂಬಲ್ಲಿ ನಡೆದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
More than 25 people killed in terrible shoot out in America, which took place in a church in Sutherland Springs in Texas. The shootouts in America are becoming a normal incident these days. Here are some worst shootouts in America's recent history.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ