ಪಾಕ್ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಸಿನಿಮಾಕ್ಕೆ ಸಂಜಯ್ ದತ್ ನಾಯಕ

Posted By:
Subscribe to Oneindia Kannada

ಕರಾಚಿ, ಫೆಬ್ರವರಿ 3: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಅವರು ಶೀಘ್ರದಲ್ಲೇ ತಾವು ಹೊಸ ಸಿನಿಮಾದ ನಿರ್ಮಾಣಕ್ಕೆ ಕೈ ಹಾಕುತ್ತಿದ್ದು, ಆ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅವರು ಪ್ರಧಾನ ಭೂಮಿಕೆಯಲ್ಲಿರಲಿದ್ದಾರೆಂದು ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗಾಗಲೇ ಸಿನಿಮಾದ ಚಿತ್ರಕತೆ ಕೆಲಸ ಮುಗಿದಿದ್ದು, ಚಿತ್ರವು ಸಸ್ಪನ್ಸ್ ಥ್ರಿಲ್ಲರ್ ಕಥಾನಕದಿಂದ ಕೂಡಿರಲಿದೆ. ಸಾಕಷ್ಟು ಪರಾಮರ್ಶೆಗಳ ನಂತರ, ಸಂಜಯ್ ದತ್ ಅವರನ್ನು ಚಿತ್ರದ ನಾಯಕರನ್ನಾಗಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Ramiz Raja Casts Sanjay Dutt In His Debut Film Production

ಇನ್ನು, ನಾಯಕಿಯ ಪಾತ್ರಕ್ಕೆ ಪಾಕಿಸ್ತಾನದವರೇ ಆದ ಮಹಿರಾ ಖಾನ್ ಹಾಗೂ ಬಾಲಿವುಡ್ ನ ಕತ್ರಿನಾ ಕೈಫ್ ರಲ್ಲಿ ಒಬ್ಬರು ಆಯ್ಕೆಯಾಗುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದ್ದಾರೆ.

ಏತನ್ಮಧ್ಯೆ, ಸಂಜಯ್ ದತ್ ಅವರ ಜೀವನಕಥೆಯಾಧಾರಿತ ಚಿತ್ರವೊಂದು ಬಾಲಿವುಡ್ ನಲ್ಲಿ ತಯಾರಾಗುತ್ತಿರುವುದ ಬಗ್ಗೆ ರಾಜಾ ಆಸಕ್ತಿ ತೋರಿದರು. ಚಿತ್ರದಲ್ಲಿ ಸಂಜಯ್ ದತ್ ಅವರ ಜೀವನದ ಕೆಲವಾರು ವಿವಾದಾತ್ಮಕ ಅಂಶಗಳುಳ್ಳ ಚಿತ್ರವೊಂದು ತಯಾರಾಗುತ್ತಿರುವುದು ಆಸಕ್ತಿ ಕೆರಳಿಸಿದೆ. ಚಿತ್ರದಲ್ಲಿ ಸಂಜಯ್ ದತ್ ಪಾತ್ರ ಮಾಡುತ್ತಿರುವ ರಣಬೀರ್ ಕಪೂರ್ ಅಭಿನಯದ ಬಗ್ಗೆಯೂ ಕುತೂಹಲ ಹೆಚ್ಚಿದೆ ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Pakistan cricket captain Ramiz Raja revealed on Thursday that he has cast Bollywood superstar Sanjay Dutt as the male lead in a film that he's producing.
Please Wait while comments are loading...