ಆಡಿಕೊಳ್ಳುವವರ ಎದುರು ಮತ್ತೊಮ್ಮೆ ಎಡವಿಬಿದ್ದ ರಾಹುಲ್ ಗಾಂಧಿ!

Recommended Video

      ರಾಹುಲ್‌ ಗಾಂಧಿ ಮತ್ತೆ ವಿವಾದದಲ್ಲಿ! | Oneindia Kannada

      ಹಂಬರ್ಗ್, ಆಗಸ್ಟ್ 24: ರಾಹುಲ್ ಗಾಂಧಿ ಅವರು ಕೂತರೂ ಸುದ್ದಿ, ನಿಂತರೂ ಸುದ್ದಿ. ಅವರ ಮೇಲೆ ಸದಾ ಒಂದು ಕಣ್ಣಿಟ್ಟಿರುವ ಮಾಧ್ಯಮಗಳು ಒಂದೆಡೆಯಾದರೆ, ರಾಹುಲ್ ಪ್ರತಿ ನಡೆಯನ್ನೂ ಆಡಿಕೊಳ್ಳುವ ಬಿಜೆಪಿ ಇನ್ನೊಂದೆಡೆ. ಹೀಗಿರುವಾಗ ಆಡಿಕೊಳ್ಳುವವರೆದುರು ಎಡವಿ ಬಿದ್ದಂಥ ಪರಿಸ್ಥಿತಿಯನ್ನು ಸದ್ಯಕ್ಕೆ ರಾಹುಲ್ ಗಾಂಧಿ ಎದುರಿಸುತ್ತಿದ್ದಾರೆ!

      ಸದ್ಯ ಜರ್ಮನಿ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಹಂಬರ್ಗ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, 'ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿ ಮಾಡಲು ವಿಫಲವಾಗಿರುವುದಕ್ಕೆಯೇ ಐಸಿಸ್ ನಂಥ ಭಯೋತ್ಪಾದಕ ಸಂಘಟನೆಗಳು ಹುಟ್ಟಿಕೊಳ್ಳುತ್ತಿವೆ. ಉದ್ಯೋಗವಿಲ್ಲದೆ ಕಂಗೆಟ್ಟ ಜನರು ಐಸಿಸ್ ಗೆ ಸೇರುವಂತಾಗಿದೆ' ಎಂದಿದ್ದರು.

      ಪರೋಕ್ಷವಾಗಿ ಐಸಿಸ್ ಅನ್ನು ಸಮರ್ಥಿಸಿಕೊಂಡ ರಾಹುಲ್ ಗಾಂಧಿ ಅವರ ನಡೆಯನ್ನು ಟ್ವಿಟ್ಟಿಗರು ಖಂಡಿಸಿದ್ದಾರೆ. ಜೊತೆಗೆ ಬಿಜೆಪಿ ಸಹ ಈ ವಿಷಯವನ್ನಿಟ್ಟುಕೊಂಡು ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

      #RahulInsultsMuslims ಎಂಬ ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಸಹ ಆಗಿದೆ.

      ಇವರು ಪಿಎಂ ಆಗ್ಬೇಕಾ?

      ಪ್ರಧಾನಿಯಾಗಲು ಹೊರಟಿರುವ ಒಬ್ಬ ವ್ಯಕ್ತಿಯ ವೈಚಾರಿಕತೆಯ ಮಟ್ಟವನ್ನು ನೋಡಿ ನನಗೆ ಆಘಾತವಾಗುತ್ತಿದೆ. ನಿರುದ್ಯೋಗದ ಜೊತೆ ಐಸಿಸ್ ಅನ್ನು ಲಿಂಕ್ ಮಾಡಿ ಅವರು ಎಷ್ಟು ಮೂರ್ಖರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ, ಅಷ್ಟೇ ಅಲ್ಲ, ಜಗತ್ತಿಗೇ ಅವರೇನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ ಮುರಾರಿ ಗೋಯಲ್.

      ಇದರರ್ಥ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವುದಲ್ಲವೇ?

      ನಿರುದ್ಯೋಗದಿಂದ ಬಳಲುತ್ತಿರುವ ಯಾವುದೇ ಮುಸ್ಲಿಂ ಐಸಿಸ್ ನಂಥ ಉಗ್ರ ಸಂಘಟನೆಗೆ ಸೇರಬಹುದು ಎಂದು ರಾಹುಲ್ ಗಾಂಧಿ ಅವರೇ ಹೇಳಿದಂತಾಗಿಲ್ಲವೇ?

      ಅವರ ಹೇಳಿಕೆಯನ್ನು ಬಿಜೆಪಿ ತಿರುಚುತ್ತಿದೆ

      ರಾಹುಲ್ ಗಾಂಧಿ ಅವರು ಮುಸ್ಲಿಮರಿಗೆ ನೋವುಂಟು ಮಾಡುತ್ತಿದ್ದಾರೆಂದು ಕೇವಲ ಮೂರ್ಖರು ಮಾತ್ರ ತಿಳಿಯಲು ಸಾಧ್ಯ! ಅವರು ಮಾತನಾಡಿದ್ದು, 'ಗುಂಪುಗೂಡಿ ಸಾಯಿಸುವಂಥ ಹಿಂಸೆಗಳು ನಿಲ್ಲಬೇಕು' ಎಂದು. ಅದರಿಂದ ಮುಸ್ಲಿಮರನ್ನು ದೂರಿದ ಹಾಗೆ ಹೇಗಾಯಿತು? ಬಿಜೆಪಿ ಬೇಕೆಂದೇ ಅವರ ಹೇಳಿಕೆಯನ್ನು ತಿರುಚುತ್ತಿದೆ ಎಂದಿದ್ದಾರೆ ರೋಹಿತ್ ಮಾಳವೀಯ.

      ಮುಸ್ಲಿಂ ಸ್ನೇಹಿತರೇ, ಇದು ಸರಿಯೇ?

      ಮುಸ್ಲಿಂ ಸ್ನೇಹಿತರೇ, ನಿಮ್ಮನ್ನು ಮತಬ್ಯಾಂಕ್ ಗಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಅರಿಯಿರಿ. ನಿರುದ್ಯೋಗಕ್ಕೂ ಐಸಿಸ್ ಗೂ ಸಂಬಂಧ ಕಲ್ಪಿಸಿದ ಕಾಂಗ್ರೆಸ್ ಅಧ್ಯಕ್ಷರ ಮಾತುಗಳನ್ನು ನೀವು ಒಪ್ಪುತ್ತೀರಾ? ಅದೂ ಮತ್ತೊಂದು ದೇಶಕ್ಕೆ ಹೋಗಿ ಇಂಥ ಮಾತುಗಳನ್ನಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ ಮುರಾರಿ ಗೋಯಲ್.

      ಅಂದರೆ ಹಫೀದ್ ಸಯ್ಯಸ್ ಗೂ ಕೆಲಸ ಕೊಡಿಸ್ತಾರಾ?!

      ರಾಹುಲ್ ಗಾಂಧಿ ಸೂತ್ರ: ನಿರುದ್ಯೋಗ ಐಸಿಸ್ ಗೆ ಕಾರಣ. ಬಾಗ್ಧಾದಿಯೊಬ್ಬ ಉದ್ಯೋಗ ಅರಸುತ್ತಿರುತ್ತಾನೆ. ಆದರೆ ಅದು ಸಿಕ್ಕಿಲ್ಲವೆಂದು ಆತ ಐಸಿಸ್ ಗೆ ಸೇರುತ್ತಾನೆ. ಆತನ ಮುಖ್ಯ ಅಜೆಂಡಾ ದೇಶದ ಜಿಡಿಪಿ ವೃದ್ಧಿ!
      ಮುಂದೇನು? ಪ್ರಧಾನಿಯಾದ ಮೇಲೆ ರಾಹುಲ್ ಗಾಂಧಿ ಅವರು ಭಯೋತ್ಪಾದನೆಯಿಂದ ಹೊರಬನ್ನಿ ಎಂದು ಹಫೀದ್ ಸಯ್ಯದ್ ಗೂ ಕೆಲಸ ಕೊಡಿಸುತ್ತಾರೆ! ಎಂದು ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ ಕಾಂಗ್ರೆಸ್ ಬಂಡಾಯ ನಾಯಕ ಶೆಹನ್ವಾಜ್ ಪೂನಾವಾಲಾ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+