ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಪ್ರಭಾವ, ಕತಾರ್ ನಿಂದ 23 ಕೈದಿಗಳ ಬಿಡುಗಡೆ

By Mahesh
|
Google Oneindia Kannada News

ಕತಾರ್, ಜೂನ್ 07: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕತಾರ್ ಪ್ರವಾಸದ ವೇಳೆ ಮಾಡಿಕೊಂಡ ಮನವಿಯನ್ನು ಕತಾರ್ ಸರ್ಕಾರ ಪುರಸ್ಕರಿಸಿದೆ. 23 ಭಾರತೀಯ ಮೂಲದ ಕೈದಿಗಳನ್ನು ಜೈಲಿನಿಂದ ಮುಕ್ತಗೊಳಿಸಲಾಗಿದೆ.

23 ಕೈದಿಗಳನ್ನು ಬಂಧಮುಕ್ತಗೊಳಿಸುವ ಮೂಲಕ ಈ ವಿಶೇಷ ತಿಂಗಳು(ರಮ್ಜಾನ್) ವಿಶೇಷವಾಗಿ ಆರಂಭಿಸಲಾಗಿದೆ. ಕತಾರ್ ನಿಂದ ಆದಷ್ಟು ಬೇಗ ಈ 23 ಭಾರತೀಯರು ಭಾರತ ಸೇರಲಿದ್ದಾರೆ ಎಂದು ಸಂತಸದಿಂದ ಮೋದಿ ಅವರು ಟ್ವೀಟ್ ಮಾಡಿದ್ದಾರೆ.[ಚಿತ್ರಗಳು: ಕತಾರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ]

Qatar releases 23 Indian prisoners

ತಮ್ಮ ಮನವಿಯನ್ನು ಪುರಸ್ಕರಿಸಿದ್ದಕ್ಕೆ ಕತಾರ್​ನ ಶೇಖ್ ತಮೀಮ್ ಬಿನ್ ಹಮೀದ್ ಅಲ್ ಥನಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕತಾರ್​ನಲ್ಲಿ 6.3 ಲಕ್ಷದಷ್ಟಿರುವ ಭಾರತೀಯ ವಲಸಿಗರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವಂತೆ ಶೇಖ್ ಅವರಿಗೆ ಮೋದಿ ಮನವಿ ಮಾಡಿದ್ದಾರೆ. ಎರಡು ದಿನಗಳ ದೋಹಾ ಪ್ರವಾಸ ಮುಗಿಸಿಕೊಂಡು ಮೋದಿ ಅವರು ನಂತರ ಸ್ವಿಟರ್ಲೆಂಡ್ ಗೆ ತೆರಳಿದ್ದನ್ನು ಇಲ್ಲಿ ಸ್ಮರಿಸಬಹುದು.

ದೋಹಾ ಪ್ರವಾಸದ ಸಂದರ್ಭದಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆ ನಿಗ್ರಹ ಸೇರಿದಂತೆ 7 ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿವೆ. [ಮೋದಿ ಅವರದ್ದು ಯು ಟರ್ನ್ ಸರ್ಕಾರ: ಎಎಪಿ ಆಕ್ರೋಶ]


ಕೌಶಲ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಹಕಾರ ಮತ್ತು ಬಂಡವಾಳ ಹೂಡಿಕೆ ಸಂಬಂಧ ಮಾತುಕತೆ ನಡೆಸಲಾಯಿತು.

English summary
Qatar on Tuesday(Jun 07) released 23 Indian prisoners, in a special gesture just after the visit of Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X