ರಷ್ಯಾ-ಉಕ್ರೇನ್ ಯುದ್ಧದ ಮಾಸ್ಟರ್ ಮೈಂಡ್ ಅಲೆಕ್ಸಾಂಡರ್ ಡುಗಿನ್ ಪುತ್ರಿ ಬಾಂಬ್‌ ಸ್ಫೋಟದಲ್ಲಿ ಸಾವು

ಮಾಸ್ಕೋ, ಆಗಸ್ಟ್ 21: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಪ್ತ ಸಹಾಯಕ ಪ್ರಭಾವಿ ತತ್ವಜ್ಞಾನಿ ಅಲೆಕ್ಸಾಂಡರ್ ಡುಗಿನ್ ಅವರ ಪುತ್ರಿ ದರಿಯಾ ಡುಗಿನ್ ಶನಿವಾರ ಮಾಸ್ಕೋ ಪ್ರದೇಶದಲ್ಲಿ ಅವರು ಪ್ರಯಾಣಿಸುತ್ತಿದ್ದ ಕಾರು ಸ್ಫೋಟಗೊಂಡು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಾಜ್ಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲೆಕ್ಸಾಂಡರ್ ಅನ್ನು ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ಮಾಸ್ಟರ್ ಮೈಂಡ್ ಎಂದು ಪರಿಗಣಿಸಲಾಗಿದೆ.

ರಸ್ಕಿ ಗೊರಿಜಾಂಟ್ (ರಷ್ಯನ್ ಹಾರಿಜಾನ್) ಸಾಮಾಜಿಕ ಚಳುವಳಿಯ ಮುಖ್ಯಸ್ಥ ಮತ್ತು ದರಿಯಾ ಡುಗಿನ್ ಕುಟುಂಬದ ವೈಯಕ್ತಿಕ ಪರಿಚಯಸ್ಥರಾದ ಆಂಡ್ರೇ ಕ್ರಾಸ್ನೋವ್ ಭಾನುವಾರ ಮಾಧ್ಯಮಕ್ಕೆ ಈ ವಿಚಾರ ತಿಳಿಸಿದರು, ಸ್ಫೋಟದ ನಂತರ ಅವರ ಕಾರಿಗೆ ಬೆಂಕಿ ಹೊತ್ತಿಕೊಂಡು ದರಿಯಾ ಡುಗಿನ್ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

29 ವರ್ಷದ ದರಿಯಾ ಡುಗಿನ್ "ಟ್ರೆಡಿಷನ್" ಎಂಬ ಸಾಹಿತ್ಯ ಮತ್ತು ಸಂಗೀತ ಉತ್ಸವದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ರಷ್ಯಾದ ಮಾದ್ಯಮಗಳು ವರದಿ ಮಾಡಿದೆ.

Putins Close Aide Russian Philosopher Alexander Dugin Daughter Died In Car Explosion

"ಬೊಲ್ಶಿಯೆ ವ್ಯಾಜೆಮಿ ಗ್ರಾಮದ ಬಳಿ ಡುಗಿನಾ ಹೆದ್ದಾರಿ ಕಡೆಗೆ ಸಾಗುತ್ತಿದ್ದಾಗ, ಸ್ಫೋಟ ಸಂಭವಿಸಿದೆ, ಕಾರಿಗೆ ತಕ್ಷಣವೇ ಬೆಂಕಿ ಹತ್ತಿಕೊಂಡಿತು" ಎಂದು ಕ್ರಾಸ್ನೋವ್ ತಿಳಿಸಿದರು.

"ಜ್ವಾಲೆಯು ಕಾರನ್ನು ಸಂಪೂರ್ಣವಾಗಿ ಆವರಿಸಿದೆ. ದರಿಯಾ ಡುಗಿನಾ ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುತ್ತಿದ್ದ ಕಾರಣ ನಿಯಂತ್ರಣವನ್ನು ಕಳೆದುಕೊಂಡಳು ಮತ್ತು ಕಾರು ಹಾರಿಹೋಗಿ ರಸ್ತೆಯ ಎದುರು ಭಾಗಕ್ಕೆ ಬಿದ್ದಿತು" ಎಂದು ಕ್ರಾಸ್ನೋವ್ ಹೇಳಿದ್ದಾರೆ.

ಅಲೆಕ್ಸಾಂಡರ್ ಡುಗಿನ್ ಗುರಿಯಾಗಿಸಿ ದಾಳಿ; ಸ್ಫೋಟಗೊಂಡ ನಂತರದ ಚಿತ್ರಗಳು ಶನಿವಾರ ರಷ್ಯಾದ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲು ಪ್ರಾರಂಭಿಸಿದವು, ರಸ್ತೆಯ ಬದಿಯಲ್ಲಿ ವಾಹನವೊಂದು ಬೆಂಕಿಯಲ್ಲಿ ಉರಿಯುತ್ತಿರುವಂತೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹರಡಿರುವ ಕಾರಿನ ಭಾಗಗಳನ್ನು ತೋರುತ್ತಿದೆ.

ದರಿಯಾ ಡುಗಿನಾಳ ಜೊತೆ ಕ್ರಾಸ್ನೋವ್ ವೈಯಕ್ತಿಕವಾಗಿ ಪರಿಚಯಸ್ಥರಾಗಿದ್ದರು ಅವರು ಪ್ರಯಾಣಿಸುತ್ತಿದ್ದ ಕಾರು ಆಕೆಯ ತಂದೆಗೆ ಸೇರಿದೆ ಎಂದು ಮಾಧ್ಯಮಕ್ಕೆ ತಿಳಿಸಿದರು. ಅಲೆಕ್ಸಾಂಡರ್ ಅವರನ್ನು ಗುರಿಯಾಗಿಸಿ ದಾಳಿ ಮಾಡಿರಬಹುದು ಅಥವಾ ಇಬ್ಬರನ್ನೂ ಕೊಲ್ಲಲು ಈ ಸಂಚು ನಡೆದಿರಬಹುದು ಎಂದು ಕಾಸ್ನೋವ್ ಅನುಮಾನ ವ್ಯಕ್ತಪಡಿಸಿದ್ದಾರೆ.

Putins Close Aide Russian Philosopher Alexander Dugin Daughter Died In Car Explosion

ತಂದೆಯ ಕಾರನ್ನು ತೆಗೆದುಕೊಂಡು ಹೋಗಿದ್ದ ದರಿಯಾ; "ದರಿಯಾ ಡುಗಿನಾ ಮತ್ತೊಂದು ಕಾರನ್ನು ಓಡಿಸುತ್ತಾಳೆ, ಆದರೆ ಸ್ಪೋಟ ಸಂಭವಿಸಿದ ದಿನ ತನ್ನ ತಂದೆಯ ಕಾರನ್ನು ತೆಗೆದುಕೊಂಡು ಹೋದಳು, ಅಲೆಕ್ಸಾಂಡರ್ ಮತ್ತೊಂದು ಕಾರಿನಲ್ಲಿ ಹೋದರು." ಎಂದು ಕಾಸ್ನೋವ್ ಹೇಳಿದ್ದಾರೆ.

ಅಲೆಕ್ಸಾಂಡರ್ ಡುಗಿನ್ ರಷ್ಯಾದ ಬಲಪಂಥೀಯ ಲೇಖಕ ಮತ್ತು ವಿಚಾರವಾದಿಯಾಗಿದ್ದು, ರಷ್ಯಾದ ಉಕ್ರೇನ್ ಆಕ್ರಮಣಕ್ಕೆ ಆಧ್ಯಾತ್ಮಿಕ ಮಾರ್ಗದರ್ಶಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲೆ ಗಮನಾರ್ಹ ಪ್ರಭಾವವನ್ನು ಹೊಂದಿದ್ದಾರೆಂದು ಹೇಳಲಾಗುತ್ತದೆ ಮತ್ತು ಆಗಾಗ್ಗೆ "ಪುಟಿನ್ ಅವರ ಮೆದುಳು" ಎಂದು ಕರೆಯಲಾಗುತ್ತದೆ.

ಡುಗಿನ್, ಮಗಳು, 1992 ರಲ್ಲಿ ಜನಿಸಿದರು ಮತ್ತು ಮಾಸ್ಕೋ ಸ್ಟೇಟ್ ಯೂನಿವರ್ಸಿಟಿಯಲ್ಲಿ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದರು. ಜುಲೈನಲ್ಲಿ ಅಮೆರಿಕ ಹೊರಡಿಸಿದ ನಿಷೇಧಿತ ಜನರ ಪಟ್ಟಿಯಲ್ಲಿ ದರಿಯಾ ಡುಗಿನ್‌ ಹೆಸರನ್ನು ಸೇರಿಸಲಾಗಿದೆ. 2015 ರಲ್ಲಿ ಯುಎಸ್, ಯುರೋಪಿಯನ್ ಯೂನಿಯನ್, ಕೆನಡಾದಿಂದ ಡುಗಿನ್ ಅನ್ನು ನಿಷೇಧಿಸಲಾಯಿತು.

ಫೆಬ್ರವರಿಯಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಇಲ್ಲಿಯವರೆಗೆ, ಈ ಯುದ್ಧದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಏತನ್ಮಧ್ಯೆ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಉಕ್ರೇನ್ ಜನರಿಗೆ ಜಾಗರೂಕರಾಗಿರಿ ಎಂದು ಎಚ್ಚರಿಸಿದ್ದಾರೆ, ಕೆಲವು ವಾರಗಳಲ್ಲಿ ಉಕ್ರೇನ್ ಸ್ವಾತಂತ್ರ್ಯ ದಿನಾಚರಣೆಯನ್ನು ಹೊಂದಲಿದ್ದಾರೆ, ಆದ್ದರಿಂದ ಅವರು ಈ ಆಚರಣೆಯ ಬಗ್ಗೆ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+