ಕಳಚಿತು ಪಾಕ್ ಮುಖವಾಡ, ಉಗ್ರರ ಬಗ್ಗೆ ಮಾಜಿ ಸಚಿವ ಬಾಯ್ಬಿಟ್ಟ ಸತ್ಯ

ಇಸ್ಲಾಮಾಬಾದ್ (ಪಾಕಿಸ್ತಾನ), ಮಾರ್ಚ್ 1: ಪಾಕಿಸ್ತಾನದ ಪ್ರಧಾನಿ ತಮ್ಮ 'ನಯಾ ಪಾಕಿಸ್ತಾನ್' ಆಲೋಚನೆ ಬಗ್ಗೆ ಹೇಳುತ್ತಲೇ ಇದ್ದಾರೆ. ಆದರೆ ಪಾಕಿಸ್ತಾನ ಅಂದರೆ ಅದರ ನೀತಿಯಲ್ಲೇ ಭಯೋತ್ಪಾದನೆ ಎಂಬುದು ಸೇರಿಹೋಗಿದೆ ಎಂಬ ಸಂಗತಿ ಮತ್ತೊಮ್ಮೆ ಬಯಲಾಗಿದೆ.

ಪಾಕಿಸ್ತಾನದ ಮಾಜಿ ವಿದೇಶಾಂಗ ಖಾತೆ ಸಚಿವ ಖ್ವಾಜಾ ಅಸೀಫ್ ಸಂಸತ್ ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಪುಲ್ವಾಮಾದಲ್ಲಿ ನಡೆದ ದಾಳಿ ಹಾಗೂ ಅದರಲ್ಲಿ ಸಿಆರ್ ಪಿಎಫ್ ನ ನಲವತ್ತು ಸಿಬ್ಬಂದಿ ಹುತಾತ್ಮರಾಗಿದ್ದು ಸೇರಿದಂತೆ ಇತರ ಭಯೋತ್ಪಾದನಾ ಕೃತ್ಯಗಳನ್ನು ಸಹ ಸಮರ್ಥಿಸಿಕೊಂಡಿದ್ದಾರೆ.

ಖ್ವಾಜಾ ಅಸೀಫ್ ಮಾತನಾಡಿ, ಜೈಶ್-ಇ-ಮೊಹ್ಮದ್ ನಿಂದ ಆಗಿರುವುದು ದ್ವೇಷ ತೀರಿಸಿಕೊಳ್ಳುವ ಕೃತ್ಯ. ಇದು ಅವರ ಕಾನೂನುಬದ್ಧ ಹಕ್ಕು ಹಾಗೂ ಜನ್ಮಸಿದ್ಧ ಹಕ್ಕು. ನಾವು ಅವರನ್ನು ಬೆಂಬಲಿಸುತ್ತೇವೆ ಹಾಗೂ ಪರವಾಗಿ ನಿಲ್ಲುತ್ತೇವೆ ಎಂದು ಆತ ಹೇಳಿದ್ದಾರೆ.

Pulwama attack an act of revenge, it is a legitimate right and a birth-right

ಖ್ವಾಜಾ ಅಸೀಫ್ ಮಾಜಿ ಸಚಿವ. ಸದ್ಯಕ್ಕೆ ವಿದೇಶಾಂಗ ಸಚಿವ ಆಗಿರುವ ಮಹ್ಮದ್ ಖುರೇಷಿ ಮಾತನಾಡಿ, ಜೈಶ್-ಇ-ಮೊಹ್ಮದ್ ನ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನದಲ್ಲೇ ಇದ್ದಾನೆ. ಅನಾರೋಗ್ಯದಿಂದ ಬಳಲುತ್ತಿರುವ ಆತನಿಗೆ ಮನೆಯಿಂದ ಆಚೆ ಬರಲು ಸಹ ಆಗುತ್ತಿಲ್ಲ ಎಂದು ಕೂಡ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+