ಬರ್ಲಿನ್ ನಲ್ಲಿ ಮೋದಿ ಭೇಟಿ ಮಾಡಿದ 'ಬೇ ವಾಚ್' ತಾರೆ

ಕಾರ್ಯ ನಿಮಿತ್ತ ಬರ್ಲಿನ್ ನಲ್ಲಿ ವಾಸ್ತವ್ಯ ಹೂಡಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಅಲ್ಲಿ ಸದ್ಯಕ್ಕೆ ಅದೇ ನಗರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾಗಿ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.

ನವದಹೆಲಿ, ಮೇ 30: ಪ್ರಸ್ತುತ ಜರ್ಮನಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಬಾಲಿವುಡ್ ಹಾಗೂ ಹಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಟ್ವಿಟರ್ ನಲ್ಲಿ ಖುದ್ದು ಪ್ರಿಯಾಂಕಾ ಚೋಪ್ರಾ ಅವರೇ ಈ ವಿಚಾರ ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರೊಂದಿಗೆ ಭೇಟಿಯಾದ ಫೋಟೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವ ಅವರು, ''ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಖುಷಿ ಕೊಟ್ಟಿದೆ. ಕಾಕತಾಳೀಯವೆಂಬಂತೆ, ನಾನು ಹಾಗೂ ಮೋದಿಯವರು ಬರ್ಲಿನ್ ನಲ್ಲಿ ಇದ್ದಿದ್ದು ಈ ಭೇಟಿಗೆ ಕಾರಣವಾಯಿತು'' ಎಂದು ತಿಳಿಸಿದ್ದಾರೆ.

Priyanka Chopra And PM Narendra Modi Met In Berlin. See Pics

ಇತ್ತೀಚೆಗೆ, ಹಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ತಮ್ಮ ಖ್ಯಾತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿಕೊಂಡಿರುವ ಪ್ರಿಯಾಂಕಾ, ಅವರ ಅಭಿನಯ ಇಂಗ್ಲೀಷ್ ಚಿತ್ರ 'ಬೇ ವಾಚ್' ಕಳೆದ ವಾರ ಅಮೆರಿಕದಲ್ಲಿ ತೆರೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+