ಒಂದು ಭೂಮಿ.. ಒಂದು ಕುಟುಂಬ.. ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದನೆ!

ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಎದುರು ಮತ್ತೊಮ್ಮೆ ಒಂದು ಭೂಮಿ.. ಒಂದು ಕುಟುಂಬ.. ತತ್ವ ಪ್ರತಿಪಾದನೆ ಮಾಡಿದ್ದಾರೆ. ಅಮೆರಿಕ ಪ್ರವಾಸದ ವೇಳೆ ವಿಶ್ವಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುತ್ತಾ, 1.4 ಬಿಲಿಯನ್ ಭಾರತೀಯ ಪ್ರಜೆಗಳ ಅಭಿಪ್ರಾಯವನ್ನು ಜಗತ್ತಿನ ಎದುರು ಬಿಡಿಸಿಟ್ಟರು. ಹಾಗಾದ್ರೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದು ಏನು? ಈ ಮೂಲಕ ಯುದ್ಧದ ಬಗ್ಗೆ ಭಾರತದ ಪ್ರಧಾನಿ ಅವರು ನೀಡಿದ ಸಂದೇಶ ಎಂತಹದ್ದು? ಬನ್ನಿ ತಿಳಿಯೋಣ.

ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಮಹತ್ವದ ಭೇಟಿ ಕೂಡ ಪೂರೈಸಿದ್ದಾರೆ. ಅಂದಹಾಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು, ಇಡೀ ಜಗತ್ತಿನ ಜನಸಂಖ್ಯೆಯ 6ನೇ ಒಂದು ಭಾಗದಷ್ಟು ಇರುವ 1.4 ಬಿಲಿಯನ್ ಭಾರತೀಯರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಲು ಇಲ್ಲಿಗೆ ಬಂದಿದ್ದೇನೆ ಎನ್ನುವ ಮೂಲಕ ಮತ್ತೊಮ್ಮೆ ಪ್ರಪಂಚದ ಗಮನ ಸೆಳೆದರು. ಯುದ್ಧದ ವಿರುದ್ಧ ಮತ್ತೊಮ್ಮೆ ತೀವ್ರ ಬೇಸರ ಹೊರ ಹಾಕಿದ ಪ್ರಧಾನಿ ಮೋದಿ ಅವರು, ಈ ಸಮಯದಲ್ಲಿ ಒಂದು ಭೂಮಿ.. ಒಂದು ಕುಟುಂಬ.. ತತ್ವ ಪ್ರತಿಪಾದನೆ ಮಾಡಿ ತಂತ್ರಜ್ಞಾನದ ಸರಿಯಾದ ಬಳಕೆಗೆ ಸಲಹೆ ನೀಡಿದರು.

Prime Minister Narendra Modi Said This In United Nations General Assembly

ಭಾರತಕ್ಕೆ ಒಂದು ಭೂಮಿ...

ಅಂದಹಾಗೆ ಆಧುನಿಕ ತಂತ್ರಜ್ಞಾನದ ಕುರಿತು ಪ್ರಸ್ತಾಪ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ತಂತ್ರಜ್ಞಾನದ ಸುರಕ್ಷಿತ & ಜವಾಬ್ದಾರಿಯುತ ಬಳಕೆಗೆ ನಿಯಂತ್ರಣ ಅತ್ಯಗತ್ಯ ಎಂದರು ಈ ಮೂಲಕ, ಸಾರ್ವಭೌಮತ್ವ ಮತ್ತು ಸಮಗ್ರತೆ ಕಾಪಾಡಲು ಜಾಗತಿಕ ಡಿಜಿಟಲ್ ಆಡಳಿತವನ್ನ ನಾವು ಬಯಸುತ್ತೆವೆ. ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ಸೇತುವೆ ಆಗಿರಬೇಕೆ ಹೊರತು ಅದು ತಡೆಗೋಡೆ ಆಗಿರಬಾರದು ಎಂದು ಸಲಹೆ ನೀಡಿದರು ಪ್ರಧಾನಿ ನರೇಂದ್ರ ಮೋದಿ ಅವರು.

ಶಾಂತಿ ಮಂತ್ರ ಜಪಿಸಿದ ಭಾರತ

ಭಾರತಕ್ಕೆ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯವು ಈಗ ಒಂದು ಬದ್ಧತೆ ಆಗಿದ್ದು ಈ ತತ್ವ ಪಾಲನೆ ಆಗುತ್ತಿದೆ ಎಂದು ಪಿಎಂ ಮೋದಿ ಅವರು ಪ್ರತಿಪಾದಿಸಿದರು. ಈ ಮೂಲಕ ಭಾರತ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದೆ. ಹಾಗೇ ಯುದ್ಧಗಳು ಅನಗತ್ಯ ಎಂಬುದನ್ನು ಕೂಡ ಈ ಮೂಲಕ ಭಾರತ ಪ್ರತಿಪಾದನೆ ಮಾಡಿದೆ. ಪ್ರಪಂಚದಲ್ಲಿ ರಷ್ಯಾ & ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿದ್ದು, ಇದೇ ಸಮಯದಲ್ಲಿ ಇಸ್ರೇಲ್ ಹಾಗೂ ಗಾಜಾ ಪಟ್ಟಿ ನಡುವೆ ಕೂಡ ವಾರ್ ನಡೆಯುತ್ತಿದೆ. ಇಂತಹ ಸಮಯದಲ್ಲಿ ಕೂಡ ಭಾರತ ಯಾರ ಜೊತೆಗೂ ಸೇರದೆ ಶಾಂತಿ ಮಂತ್ರ ಜಪಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+