ಆಸ್ಟ್ರೇಲಿಯಾ ಸಂಸತ್‌ನಲ್ಲಿ ಪ್ರಧಾನಿ ಮೋದಿ ಭಾಷಣ
ಕ್ಯಾನ್‌ಬೆರಾ, ನ. 18 : ಸೋಮವಾರ ಸಿಡ್ನಿಯಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆಸ್ಟ್ರೇಲಿಯಾ ಸಂಸತ್‌ನಲ್ಲಿ ಭಾಷಣ ಮಾಡಿದರು. ಪ್ರಜಾಪ್ರಭುತ್ವ ಎರಡೂ ದೇಶಗಳನ್ನು ಬೆಸೆದಿದೆ ಎಂದು ಹೇಳಿದ ಮೋದಿ, ಭಾರತದ ಅಭಿವೃದ್ಧಿಗೆ ಆಸ್ಟ್ರೇಲಿಯಾಸ ಸಹಕಾರ ಬೇಕು ಎಂದು ಹೇಳಿದರು.
ಮಂಗಳವಾರ ಆಸ್ಟ್ರೇಲಿಯಾ ಸಂಸತ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರಿಗೆ ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್ ಸ್ವಾಗತ ಕೋರಿದರು. ಮೊದಲನೇ ವಿಶ್ವಯುದ್ಧದ ಪ್ರತಿರೂಪದ ಕಾಣಿಕೆಯನ್ನು ಮೋದಿ ಅವರಿಗೆ ಅಬೋಟ್ ಈ ಸಂದರ್ಭದಲ್ಲಿ ನೀಡಿದರು. [ಮೋದಿ ಸಿಡ್ನಿ ಭಾಷಣದ ವಿವರ ಇಲ್ಲಿದೆ]

ಆಸ್ಟ್ರೇಲಿಯಾ ಸಂಸತ್ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಲ್ಲಿನ ಮೂಲ ನಿವಾಸಿಗಳಿಗೆ ನಮನ ಸಲ್ಲಿಸಿ ಮಾತನ್ನು ಆರಂಭಿಸಿದರು. ಶಾಂತಿ ಮತ್ತು ಸುವ್ಯವಸ್ಥೆ ಇದ್ದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದ ಮೋದಿ, ಅಭಿವೃದ್ಧಿ ಪಾಕೃತಿಕ ಸಂಪತ್ತನ್ನು ನಾಶ ಮಾಡಬಾರದು ಎಂದರು.
Guard of Honour at the ceremonial reception for PM @narendramodiParliament House forecourt, Canberra pic.twitter.com/fdPWeqgept
— PIB India (@PIB_India) November 17, 2014 ಭಾರತದ 125 ಕೋಟಿ ಜನರ ಪ್ರತಿನಿಧಿಯಾಗಿ ನಾನು ಆಸ್ಟ್ರೇಲಿಯಾಕ್ಕೆ ಆಗಮಿಸಿದ್ದೇನೆ ಎಂದು ಹೇಳಿದ ಮೋದಿ, ಪ್ರಜಾಪ್ರಭುತ್ವ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಭಾರತವನ್ನು ಒಂದುಗೂಡಿಸಿದೆ. ಭಾರತ ಅಭಿವೃದ್ಧಿಯಾಗಲು ಆಸ್ಟ್ರೇಲಿಯಾ ನೆರವು ನೀಡಬೇಕು ಎಂದು ಮನವಿ ಮಾಡಿದರು.
I have never seen such a reception for any leader in Australia as seen for @narendramodi : Australian PM @TonyAbbottMHR
— narendramodi_in (@narendramodi_in) November 17, 2014 ಭಯೋತ್ಪಾದನೆ ಮತ್ತು ಕಪ್ಪುಹಣದ ಕುರಿತು ಮಾತನಾಡಿದ ಮೋದಿ, ಕಪ್ಪುಹಣ ಉಗ್ರವಾದವನ್ನು ಪೋಷಿಸುತ್ತಿದೆ. ಉಗ್ರವಾದದ ವಿರುದ್ಧ ಹೋರಾಡಲು ಎಲ್ಲಾ ದೇಶಗಳ ಸಹಕಾರ ಅತಿ ಮುಖ್ಯವಾದದ್ದು ಎಂದರು. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ಯಶಸ್ವಿಯಾಗಲಿ ಎಂದು ಹಾರೈಸಿದರು.
We are united by the ideals of democracy: Shri @narendramodi at the Australian Parliament
— narendramodi_in (@narendramodi_in) November 17, 2014 I see Australia as a major partner in every area of our national priorities: Shri @narendramodi at the Australian Parliament
— narendramodi_in (@narendramodi_in) November 17, 2014 ಪ್ರಧಾನಿ ಮೋದಿ ಭಾಷಣದ ವಿಡಿಯೋ ಇಲ್ಲಿದೆ












Click it and Unblock the Notifications