ನಸೀಬು ಖೋತಾ ಹೈಟಿ ಜನರ ಪಾಲಿಗೆ ಇದೆಲ್ಲಿಯ ಚಂಡಮಾರುತ?

Posted By:
Subscribe to Oneindia Kannada

ಹೈಟಿ, ಅಕ್ಟೋಬರ್ 7: ಹರಿಕೇನ್ ಚಂಡ ಮಾರುತದಿಂದ ಸಾವಿನ ಸಂಖ್ಯೆಯಲ್ಲಿ ಇಷ್ಟೊಂದು ಏರಿಕೆ ಆಗುತ್ತಿರುವುದು ಇತರ ರೀತಿಯಲ್ಲೂ ಪರಿಣಾಮ ಬೀರುತ್ತದೆ. ಹೈಟಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಹಲವು ದಶಕಗಳಿಂದ ಇಲ್ಲಿ ಮೂಲಸೌಕರ್ಯ ಕೊರತೆ ಎದುರಾಗಿದೆ. 2010ರಲ್ಲಿ ಭೂಕಂಪವಾಗುವ ಮುಂಚೆಯೂ ಇತರ ಅನಾಹುತಗಳು ಸಂಭವಿಸಿ, ಪರಿಸ್ಥಿತಿಯನ್ನು ಮತ್ತೂ ಕ್ಲಿಷ್ಟಕರ ಮಾಡಿದವು.

ಎಲ್ಲವೂ ಸರಿಯಾಗಿದೆ ಎನ್ನುವಾಗಲೂ ಇಲ್ಲಿನ ಯಾವುದೇ ಸಮುದಾಯ ವ್ಯವಸ್ಥೆಗಳ ಮೇಲೆ ನಂಬಿಕೆ ಇಡುವಂತಿರಲಿಲ್ಲ. ಈ ಎಲ್ಲ ಸವಾಲುಗಳು ಮತ್ತು ಇತರ ಕೆಲವು ಕಾರಣಗಳಿಗಾಗಿ ಸರಕಾರಕ್ಕೆ ಚಂಡಮಾರುತದಿಂದ ಮೃತಪಟ್ಟವರ ಲೆಕ್ಕ ಸಿಗುತ್ತಿಲ್ಲ. ಹಲವರ ಪ್ರಕಾರ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಮುಖ್ಯವಾಗಿ ಸರಕಾರ ಅದ್ಯಾವ ಪ್ರಮಾಣದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಬಹುದೋ ಸಿದ್ಧತೆ ಮಾಡಿಕೊಳ್ಳಬಹುದೋ ಅದನ್ನು ಮಾಡುತ್ತಿದೆ.[ಹರಿಕೇನ್ ಚಂಡಮಾರುತ ಹೊಡೆತಕ್ಕೆ ಹೈಟಿ ದೇಶದಲ್ಲಿ 280 ಸಾವು]

Haiti Hurricane

ಸ್ಥಳಾಂತರ ಮಾಡುವುದಕ್ಕೆ ಅಧಿಕಾರಿಗಳು ಸೂಚಿಸಿದಾಗ ಹಲವು ಜನರು ನಂಬಲಿಲ್ಲ. ಆ ಕಾರಣಕ್ಕೆ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅವರಿಗೆ ಈ ಸಾವಿನ ಸಂಕೆ ಯಾವುದೇ ಆಶ್ಚರ್ಯ ತಂದಿಲ್ಲ. ನಾವಿನ್ನೂ ಅವಶೇಷಗಳಡಿ ಜನರನ್ನು ಹುಡುಕಬೇಕಿದೆ. ಇದು ತುಂಬ ದುಃಖಕರ ವಿಷಯ. ಆದರೆ ಬೇರೆ ದಾರಿಯಿಲ್ಲ ಎಂದು ಅವರು ಹೇಳಿದ್ದಾರೆ.

ಹೈಟಿಯಲ್ಲಿ ವಿಶ್ವಸಂಸ್ಥೆಯ ಎಂಜೋ ಡಿ ಟರಂಟೋ ಪ್ರಕಾರ, ಇದು ಪರಿಸರ, ಕೃಷಿ ಹಾಗೂ ಜಲ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಶಾಲೆ, ಆಸ್ಪತ್ರೆ, ಪೊಲೀಸ್ ಠಾಣೆಗಳು ಎಲ್ಲವೂ ಚಂಡಮಾರುತದ ಹೊಡೆತದಲ್ಲಿ ಸಿಲುಕಿ ಜಖಂ ಅಗಿವೆ. ಒಂದು ಕೋಟಿ ಹತ್ತು ಲಕ್ಷ ಜನಸಂಖ್ಯೆಯ ಈ ದೇಶದಲ್ಲಿ ಈಗಾಗಲೇ ತಡವಾಗಿರುವ ರಾಷ್ಟ್ರಾಧ್ಯಕ್ಷರ ಆಯ್ಕೆ ಚುನಾವಣೆಯನ್ನು ಭಾನುವಾರ ನಿಗದಿ ಮಾಡಲಾಗಿತ್ತು. ಆದರೆ ಅದೀಗ ಮುಂದೂಡುವಂತಾಗಿದೆ.[ಹರಿಕೇನ್ ಮಾಥ್ಯೂ ಚಂಡಮಾರುತ: 20 ಲಕ್ಷ ಮಂದಿ ಸ್ಥಳಾಂತರ!]

2010ರ ಭೂಕಂಪದ ನಂತರ ಪರಿಹರಿಸಲಾಗದ ಹಲವು ಸಮಸ್ಯೆಗಳಿದ್ದವು. ಅಂತರರಾಷ್ಟ್ರೀಯ ಮಟ್ಟದ ಗುಂಪುಗಳೇ ಇಲ್ಲಿ ಸರಕಾರದಂತೆ ಕಾರ್ಯ ನಿರ್ವಹಿಸುತ್ತಿದ್ದವು. ಈ ಬಾರಿ ಸರಕಾರವೇ ಮುಂದಾಳತ್ವ ವಹಿಸುವುದಾಗಿ ತಿಳಿಸಿದೆ. ದಾನಿಗಳು ನೀಡುವ ನೀರು, ಆಹಾರ ಹಾಗೂ ಹಣದ ನೆರವನ್ನು ಜನರಿಗೆ ತಲುಪಿಸುವ ಜವಬ್ದಾರಿ ತೆಗೆದುಕೊಳ್ಳುವುದಾಗಿ ಹೇಳುತ್ತಿದ್ದರೂ ಅದರಲ್ಲೂ ಕೆಲ ಮಿತಿಗಳು, ಸಮಸ್ಯೆಗಳು ಇವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Haiti's infrastructure had been in decline for decades, even before the earthquake and other storms weakened it further. A fragile communications system, too, was unreliable even in the best of times.
Please Wait while comments are loading...