ಗರ್ಭಿಣಿ ಮೇಲೆ ಅತ್ಯಾಚಾರ ಮಾಡುವಂತೆ ಗ್ರಾಮಸ್ಥರ ತೀರ್ಪು!

Posted By:
Subscribe to Oneindia Kannada

ಲಾಹೋರ್ ನವೆಂಬರ್, 13: ಇಂದಿಗೂ ಅನೇಕ ಹಳ್ಳಿಗಳ್ಲಿ ತಮಗಿಷ್ಟ ಬಂದಂತೆ ತೀರ್ಪು ನೀಡುವ ಮೂರ್ಖರು ಇದ್ದಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಆದರೆ ಈ ತೀರ್ಪಿನಿಂದ ಓರ್ವ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಗುಜರಾತ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಒಬ್ಬ ದುಷ್ಟ ಅತ್ಯಾಚಾರ ಮಾಡಿದ್ದ.

ಇದರಿಂದ ರೊಚ್ಚಿಗೆದ್ದ ಬಾಲಕಿಯ ಕುಟುಂಬ ಗ್ರಾಮದ ಮುಖಂಡರನ್ನು ಆಶ್ರಯಿಸಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದೆ. ಇದಕ್ಕೆ ಗ್ರಾಮದ ಮುಖಂಡರು ನೀಡಿದ ತೀರ್ಪು ಮಾತ್ರ ಮೃಗಗಳೂ ಅಸಹ್ಯಪಟ್ಟುಕೊಳ್ಳುವಷ್ಟು ಅಸಹ್ಯಕರವಾಗಿತ್ತು.

Pregnant Woman Raped On Panchayat Orders In Pakistan

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿಯ ಮಗಳ ಮೇಲೆ ನಿಮ್ಮ ಕುಟುಂಬದವರು ಅತ್ಯಾಚಾರ ಮಾಡಲಿ ಎಂದು ತಮಗೆ ತೋಚಿದಂತೆ ತೀರ್ಪು ನೀಡಿದ್ದರು.

ಆದರೆ ಆರೋಪಿ ವ್ಯಕ್ತಿಯ ಮಗಳು ಈಗಾಗಲೇ ಮದುವೆಯಾಗಿದ್ದಳು, ಸಾಲದೆಂಬಂತೆ ತುಂಬು ಗರ್ಭಿಣಿ. ಆಕೆ ಗರ್ಭಿಣಿ ಎಂದು ತಿಳಿದಿದ್ದರೂ, ಆಕೆಯ ಮೇಲೆ ಅತ್ಯಾಚಾರ ಮಾಡುವಂತೆ ತೀರ್ಪು ನೀಡಿ ಗ್ರಾಮದ ಮುಖ್ಯಸ್ಥರು ದುಷ್ಟತನ ತೋರಿಸಿದ್ದರು.

ಗ್ರಾಮಸ್ಥರ ತೀರ್ಪಿನಂತೆ ಸಂತ್ರಸ್ತ ಬಾಲಕಿಯ ಕುಟಂಬದ ಸದಸ್ಯನೊಬ್ಬ ಗರ್ಭಿಣಿ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅವಮಾನ ತಡೆಯಲಾಗದೆ ಗರ್ಭಿಣಿ ಮಹಿಳೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.

ಕುಟುಂಬಸ್ಥರು ಲಾಹೋರ್ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಆಸ್ಪತ್ರೆಯಲ್ಲೇ ಅಸುನೀಗಿದ್ದಾಳೆ. ಮರಣಕ್ಕೂ ಮುನ್ನ ತನಗಾದ ಅವಮಾನವನ್ನು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A pregnant woman set herself on fire and later died after she was raped in revenge by a man on the orders of a panchayat in Pakistan's Punjab province. A panchayat in Gujrat city asked a man whose minor daughter was raped to rape the daughter of the assaulter in revenge for the crime, Geo News reported.
Please Wait while comments are loading...