Get Updates
Get notified of breaking news, exclusive insights, and must-see stories!

ಪೋರ್ನ್ ಸ್ಟಾರ್‌ಗೆ ಹಣ ನೀಡಿದ ಪ್ರಕರಣ: ಕ್ರಿಮಿನಲ್ ಆರೋಪದ ಮೇಲೆ ಡೊನಾಲ್ಡ್ ಟ್ರಂಪ್ ಬಂಧನ

ವಾಷಿಂಗ್ಟನ್ ಏಪ್ರಿಲ್ 5: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊನೆಗೂ ಕ್ರಿಮಿನಲ್ ಆರೋಪದ ಮೇಲೆ ಬಂಧಿಸಲಾಗಿದೆ. ಮ್ಯಾನ್‌ಹ್ಯಾಟನ್ ಕ್ರಿಮಿನಲ್ ಕೋರ್ಟ್‌ಹೌಸ್‌ನಲ್ಲಿ ವಿಚಾರಣೆಗೂ ಮೊದಲು ಮಂಗಳವಾರ ಅವರನ್ನು ಬಂಧಿಸಲಾಯಿತು.

ಅಮೆರಿಕದ ನಂಬರ್ ಒನ್ ಪ್ರಜೆಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು 2016 ರಲ್ಲಿ ವಯಸ್ಕ ಚಲನಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಅವರಿಗೆ ಪಾವತಿಸಿದ ಹಣಕ್ಕೆ ಸಂಬಂಧಿಸಿದ ಆರೋಪಗಳು ಟ್ರಂಪ್ ಮೇಲಿವೆ.

Porn star payment case: Former US President Donald Trump has been arrested

ಅವರ ಬಂಧನಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ "ಮ್ಯಾನ್‌ಹ್ಯಾಟನ್‌ ನ್ಯಾಯಾಲಯ ತುಂಬಾ ಅತಿವಾಸ್ತವಿಕವಾಗಿ ತೋರುತ್ತಿದೆ - ವಾಹ್, ಅವರು ನನ್ನನ್ನು ಬಂಧಿಸಲು ಹೋಗುತ್ತಿದ್ದಾರೆ. ಇದು ಅಮೇರಿಕಾದಲ್ಲಿ ನಡೆಯುತ್ತಿದೆ ಎಂದು ನಂಬಲಾಗುತ್ತಿಲ್ಲ" ಎಂದು ಅವರು ಹೇಳಿದರು. ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾಜಿ ಅಧ್ಯಕ್ಷರನ್ನು ಒಳಗೊಂಡ ಮೊದಲ ಕ್ರಿಮಿನಲ್ ಪ್ರಕರಣವಾಗಿದೆ.

ಡೊನಾಲ್ಡ್ ಟ್ರಂಪ್ ಬಂಧನಕ್ಕೆ ಕಾರಣವೇನು?

ಇದು 2016ರ ಕತೆ. ಟ್ರಂಪ್ 2016ರ ಅಧ್ಯಕ್ಷೀಯ ಚುನಾವಣೆ ವೇಳೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರು ಆ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಚುನಾವಣೆಯ ಮೊದಲು, ಅವರು ಅಮೆರಿಕದ ಖ್ಯಾತ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಜೊತೆಗಿನ ಸಂಬಂಧವನ್ನು ಹೊಂದಿದ್ದರು. ಅದನ್ನು ಬಹಿರಂಗಪಡಿಸದಂತೆ ಆಕೆಗೆ ಹಣವನ್ನು ನೀಡಿದ್ದರು ಎನ್ನುವ ವಿಚಾರ ಬಯಲಾಗಿದೆ.

ತಮ್ಮ ಸಂಬಂಧದ ಬಗ್ಗೆ ವಿಚಾರ ಹಂಚಿಕೊಳ್ಳದೇ ಇರಲು ಟ್ರಂಪ್ ತನ್ನ ವಕೀಲರನ್ನು ಮಧ್ಯವರ್ತಿಯಾಗಿಟ್ಟುಕೊಂಡು ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಗೆ ದೊಡ್ಡ ಮೊತ್ತದ ಹಣ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. 2006 ರಲ್ಲಿ ಟ್ರಂಪ್ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಸ್ವತ: ಸ್ಟಾರ್ಮಿ ಡೇನಿಯಲ್ಸ್ ಇತ್ತೀಚೆಗೆ ಬಹಿರಂಗಪಡಿಸಿದರು. ಅಧ್ಯಕ್ಷೀಯ ಚುನಾವಣೆ ವೇಳೆ ಈ ವಿಚಾರವನ್ನು ಬಹಿರಂಗ ಪಡಿಸದಂತೆ ಬೆದರಿಕೆ ಹಾಕಿದ್ದು, ಬಾಯಿ ಮುಚ್ಚಿಸಲು 1.30 ಲಕ್ಷ ಡಾಲರ್ ನೀಡಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ. ಇದು ಟ್ರಂಪ ಮೇಲಿರುವ ಆರೋಪ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೆ ಮ್ಯಾನ್‌ಹ್ಯಾಟನ್ ಕ್ರಿಮಿನಲ್ ಕೋರ್ಟ್‌ ಮಂಗಳವಾರ ಟ್ರಂಪ್ ಅವರನ್ನು ವಿಚಾರಣೆಗೆ ಕರೆದಿತ್ತು.

Porn star payment case: Former US President Donald Trump has been arrested

ಬಂಧನದ ಬಗ್ಗೆ ಸುಳುವು ಕೊಟ್ಟಿದ್ದ ಟ್ರಂಪ್

ಪೋರ್ನ್ ಸ್ಟಾರ್‌ಗೆ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ನ್ಯಾಯಾಲಯ ವಿಚಾರಣೆಗೆ ಟ್ರಂಪ್ ಹಾಜರಾಗಿದ್ದರು. ತಮ್ಮ ಬಂಧನ ಖಚಿತ ಎಂದು ಟ್ರಂಪ್ ಪರೋಕ್ಷವಾಗಿ ಈ ಹಿಂದೆ ಹೇಳಿಕೊಂಡಿದ್ದರು. ಕಳೆದ ಗುರುವಾರ ರಾತ್ರಿ ತಮ್ಮ ಸತ್ಯ ಸಾಮಾಜಿಕ ವೇದಿಕೆಯ ಮೂಲಕ ತಮ್ಮ ಮೇಲಿರುವ ದೋಷಾರೋಪಣೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ ಟ್ರಂಪ್ ಅವರು ನ್ಯೂಯಾರ್ಕ್‌ನಲ್ಲಿ ನ್ಯಾಯಯುತ ವಿಚಾರಣೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದರು. ಜೊತೆಗೆ ಪ್ರಕರಣದ ಅಧ್ಯಕ್ಷತೆ ವಹಿಸುತ್ತಿರುವ ನ್ಯಾಯಾಧೀಶ ಜುವಾನ್ ಮರ್ಚನ್ ಅವರನ್ನೂ ಟ್ರಂಪ್ ಟೀಕಿಸಿದ್ದರು. ನ್ಯಾಯಾಧೀಶ ಜುವಾನ್ ಮರ್ಚನ್ ನನ್ನ ಕೇಸ್ ವಿಚಾರಣೆಗೆ ನಿಯೋಜಿತರಾಗಿದ್ದಾರೆ. ಅವರು ನನ್ನನ್ನು ದ್ವೇಷಿಸುತ್ತಾರೆ ಎಂದು ಹೇಳುವ ಮೂಲಕ ಟ್ರಂಪ್ ತಮ್ಮ ಬಂಧನ ಖಚಿತ ಎಂಬಾರ್ಥದಲ್ಲಿ ಸುಳಿವು ಕೊಟ್ಟಿದ್ದರು.

ಈ ಪ್ರಕರಣದಲ್ಲಿ ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಿಸಿದ ಕೂಡಲೇ ಶರಣಾಗಲು ಟ್ರಂಪ್ ನಿರ್ಧರಿಸಿದ್ದಾರೆ. ನ್ಯಾಯಾಲಯ ಟ್ರಂಪ್ ಅವರು ನ್ಯೂಯಾರ್ಕ್ ತಲುಪಿದ್ದಾರೆ. ಟ್ರಂಪ್ ಅವರು ವಾಸಿಸುವ ವೆಸ್ಟ್ ಪಾಮ್ ಬೀಚ್‌ನಿಂದ ಖಾಸಗಿ ವಿಮಾನದಲ್ಲಿ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ವೈಟ್ ಕಾಲರ್ ಕ್ರಿಮಿನಲ್ ಡಿಫೆನ್ಸ್ ವಕೀಲ ಟಾಡ್ ಬ್ಲಾಂಚೆ ಅವರು ಮ್ಯಾನ್‌ಹ್ಯಾಟನ್ ನ್ಯಾಯಾಲಯದಲ್ಲಿ ಟ್ರಂಪ್ ಅವರನ್ನು ಪ್ರತಿನಿಧಿಸಲಿದ್ದಾರೆ.

Porn star payment case: Former US President Donald Trump has been arrested

ಮಾಧ್ಯಮದವರಿಗೆ ನ್ಯಾಯಾಲಯದಲ್ಲಿ ಪ್ರವೇಶ ರದ್ದು

ಮಂಗಳವಾರ ಕಲಾಪ ನಡೆಯುವಾಗ ಮಾಧ್ಯಮದವರಿಗೆ ನ್ಯಾಯಾಲಯದ ಕೊಠಡಿ ಪ್ರವೇಶಿಸದಂತೆ ನಿರ್ಬಂಧಿಸಬೇಕು ಎಂದು ಮನವಿ ಮಾಡಲಾಗಿತ್ತು. ವಿಡಿಯೋ, ಫೋಟೋ ಮತ್ತು ರೇಡಿಯೋ ಪ್ರಸಾರಕ್ಕೆ ಅವಕಾಶ ನೀಡದಂತೆ ಕೇಳಿಕೊಳ್ಳಲಾಗಿತ್ತು. ಶರಣಾದ ನಂತರವೂ ಟ್ರಂಪ್ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ಬಿಡುಗಡೆ ಮಾಡದಂತೆ ವಿನಂತಿಸಲಾಗಿತ್ತು. ವಿಚಾರಣೆ ಆರಂಭಕ್ಕೂ ಮುನ್ನ ಟ್ರಂಪ್ ಅವರನ್ನು ಬಂಧಿಸಲಾಗಿದೆ. ಟ್ರಂಪ್ ಬಂಧನ ತಪ್ಪು ಎಂದು ಅಮೆರಿಕದ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ.

ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಮ್ಯಾನ್‌ಹ್ಯಾಟನ್ ನ್ಯಾಯಾಲಯದಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿತ್ತು. ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ನ್ಯಾಯಾಲಯಕ್ಕೆ ಹೋಗುವ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿತ್ತು. ವಿಐಪಿಗಳಿಗೆ ಮಾತ್ರ ಪ್ರಯಾಣಿಸಲು ಅವಕಾಶವಿತ್ತು. ನ್ಯಾಯಾಲಯಕ್ಕೆ ತೆರಳುವ ರಸ್ತೆಗಳಲ್ಲಿ ಭಾರಿ ಸಶಸ್ತ್ರ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲು ಕ್ರಮ ಕೈಗೊಳ್ಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+