ಇಮ್ರಾನ್ ಖಾನ್ ಗೆ ಪ್ರಧಾನಿ ನರೇಂದ್ರ ಮೋದಿ ಸಂದೇಶ

ನವದೆಹಲಿ, ಮಾರ್ಚ್ 23: ಭಾರತ ಮತ್ತು ಪಾಕಿಸ್ತಾನ ನಡುವೆ ಕೆಲವು ವಾರಗಳಿಂದ ಎದ್ದಿದ್ದ ಪ್ರಕ್ಷುಬ್ಧ ವಾತಾವರಣದ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸಂದೇಶ ಕಳಿಸಿದ್ದಾರೆ.

ಪಾಕಿಸ್ತಾನ ಮಾರ್ಚ್ 23 ರಂದು ಪಾಕಿಸ್ತಾನ ದಿನವನ್ನು ಆಚರಿಸಿಕೊಳ್ಳುತ್ತಿದ್ದು ಅದಕ್ಕಾಗಿ ಖಾನ್ ಅವರಿಗೆ ಮೋದಿ ಶುಭಾಶಯ ಕೋರಿದ್ದಾರೆ.

ಈ ಕುರಿತು ಇಮ್ರಾನ್ ಖಾನ್ ಅವರೇ ತಮ್ಮ ಟ್ವಿಟ್ಟರ್ ಖಾತೆಯನ್ನು ಮಾಹಿತಿ ನೀಡಿದ್ದು, "ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಸಂದೇಶ ಕಳಿಸಿದ್ದಾರೆ. ಅದರ ಒಕ್ಕಣೆ ಹೀಗಿದೆ: 'ಪಾಕಿಸ್ತಾನ ರಾಷ್ಟ್ರೀಯ ದಿನದಂದು ಪಾಕಿಸ್ತಾನದ ಜನತೆಗೆ ನನ್ನ ಶುಭಾಶಯಗಳು. ಉಪಖಂಡದ ಜನರು ಪ್ರಜಾಪ್ರಭುತ್ವ, ಶಾಂತಿಯುತ, ಪ್ರಗತಿಶೀಲ ಮತ್ತು ಸಮೃದ್ಧಿಯ ಆಶಯಗಳಿಂದ ಒಟ್ಟಾಗಿ ಕೆಲಸ ಮಾಡಬೇಕಿದೆ. ಭಯೋತ್ಪಾದನೆ ಮತ್ತು ಹಿಂಸೆಯಿಂದ ಮುಕ್ತವಾಗಿ ಬದುಕಬೇಕಿದೆ'" ಎಂದು ಮೋದಿಯವರ ಸಂದೇಶದ ಸಾರಾಂಶವನ್ನು ಖಾನ್ ಟ್ವೀಟ್ ಮಾಡಿದ್ದಾರೆ.

PM Narendra Modi sends message to Pakistan PM Imran Khan

ಈ ಕುರಿತು ಪ್ರತಿಕ್ರಿಯೆ ನೀಡಿದ ಇಮ್ರಾನ್ ಖಾನ್, "ಪ್ರಧಾನಿ ನರೇಂದ್ರ ಮೊದಿ ಅವರ ಸಂದೇಶವನ್ನು ನಾವು ಸ್ವಾಗತಿಸುತ್ತೇವೆ. ಭಾರತದೊಂದಿಗೆ ಮಾತುಕತೆ ನಡೆಸಿ, ನಮ್ಮ ನಡುವಿನ(ಭಾರತ-ಪಾಕಿಸ್ತಾನ) ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ" ಎಂದು ಖಾನ್ ಹೇಳಿದ್ದಾರೆ.

ಪ್ರತಿ ವರ್ಷವೂ ಪಾಕಿಸ್ತಾನ ರಾಷ್ಟ್ರೀಯ ದಿನಕ್ಕೆ ಭಾರತದಿಂದ ಇಬ್ಬರು ಸಚಿವರು ತೆರಳುತ್ತಿದ್ದರು. ಆದರೆ ಪುಲ್ವಾಮಾ ಘಟನೆ, ಏರ್ ಸ್ಟ್ರೈಕ್ ಗಳ ಹಿನ್ನಲೆಯಲ್ಲಿ ಉಭಯ ದೇಶಗಳ ನಡುವೆ ಸಂಬಂಧ ಬಿಗಡಾಯಿಸಿರುವ ಕಾರಣ ಈ ಬಾರಿ ಪಾಕಿಸ್ತಾನಕ್ಕೆ ಭಾರತದಿಂದ ಯಾರೂ ತೆರಳುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+