ಟೈಮ್ಸ್‌ ಚೌಕದಲ್ಲಿ ಮೋದಿ ಭಾಷಣ ಲೈವ್

ನ್ಯೂಯಾರ್ಕ್, ಸೆ.17: ನ್ಯೂಯಾರ್ಕ್‌ನ ಮ್ಯಾನ್‌ಹಟನ್‌ನಲ್ಲಿರುವ ಮ್ಯಾಡಿಸನ್‌ ಸ್ಕ್ವೇರ್‌ ಗಾರ್ಡನ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 20,000 ಮಂದಿ ಭಾರತೀಯ ಅಮೆರಿಕನರನ್ನು ಉದ್ದೇಶಿಸಿ ಐತಿಹಾಸಿಕ ಭಾಷಣ ಮಾಡಲಿದ್ದಾರೆ. ಸೆ. 28ರಂದು ಮೋದಿ ಮಾಡಲಿರುವ ಭಾಷಣವನ್ನು ಟೈಮ್ಸ್‌ ಚೌಕದಲ್ಲಿನ ಬೃಹತ್‌ ಪರದೆಯ ಮೂಲಕ ನೇರಪ್ರಸಾರ ಮಾಡಲು ನಿರ್ಧರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮವನ್ನು ಆಯೋಜಿಸಿರುವ ಭಾರತೀಯ ಅಮೆರಿಕನ್‌ ಸಮುದಾಯ (ಐಎಸಿಎಫ್) ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವಯರ್ ನಲ್ಲಿ ಮೋದಿ ಅವರ ಭಾಷಣದ ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲು ಟೈಮ್ಸ್ ಚೌಕದ ಅಲಯನ್ಸ್‌ನೊಂದಿಗೆ ಒಪ್ಪಿಗೆಯನ್ನು ಪಡೆದುಕೊಂಡಿದೆ.

ನ್ಯೂಯಾರ್ಕ್‌ ನಗರದ ಕೇಂದ್ರ ಭಾಗ ಎನಿಸಿರುವ ಟೈಮ್ಸ್ ಚೌಕದಲ್ಲಿ ಬೃಹತ್‌ ಪರದೆಯ ಮೂಲಕ ಮೋದಿ ಅವರ ಭಾಷಣ ನೇರಪ್ರಸಾರಗೊಳ್ಳಲಿದ್ದು ಪರದೆಯ ಕೆಳ ಭಾಗದಲ್ಲಿ ಅವರ ಭಾಷಣದ ಇಂಗ್ಲೀಷ್ ಅನುವಾದ ಪ್ರಸಾರಗೊಳ್ಳಲಿದೆ. ಭಾಷಣದ ಧ್ವನಿಯನ್ನು ಆಲಿಸಲು ಜನರು ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿ ಕೇಳಬಹುದು ಅಥವಾ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಅಪ್ಲಿಕೇಶನ್‌ನ ಮೂಲಕ ಕೇಳಬಹುದಾಗಿದೆ ಎಂದು ಪಿಟಿಐಗೆ ಆಯೋಜಕರು ತಿಳಿಸಿದ್ದಾರೆ.

PM Narendra Modi's speech to be beamed live at New York's Times Square during US visit

ಸೆ.28ರಂದು ಮ್ಯಾಡಿಸನ್‌ ಸ್ಕ್ವಯರ್ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 20,000 ಮಂದಿಗೆ ಪಾಲ್ಗೊಳ್ಳಲಷ್ಟೇ ಅವಕಾಶ ಲಭ್ಯವಿದ್ದು ಈಗಾಗಲೇ ದೇಶಾದ್ಯಂತದ 40,000ಕ್ಕೂ ಅಧಿಕ ಆಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಮೋದಿ ಅವರ ಕಾರ್ಯಕ್ರಮ ಸಂಘಟನೆಗಾಗಿ ಐಎಸಿಎಫ್ ಸಾರ್ವಜನಿಕರಿಂದ ಈಗಾಗಲೇ 15ಲಕ್ಷ ಡಾಲರ್‌ಗಳಷ್ಟು ದೇಣಿಗೆ ಸಂಗ್ರಹಿಸಿದೆ. ಐಎಸಿಎಫ್ ವೈಬ್‌ಸೈಟ್‌ನ ಮೂಲಕ ಹಲವರು ದೇಣಿಗೆಯನ್ನು ಕಳುಹಿಸಿಕೊಟ್ಟಿದ್ದಾರೆ. ಕಾರ್ಯಕ್ರಮದ ವೆಚ್ಚಗಳನ್ನು ಭರಿಸಿದ ಬಳಿಕ ಉಳಿಯುವ ಹಣವನ್ನು ಯಾವುದಾದರೂ ದತ್ತಿ ಅಥವಾ ಎನ್‌ಜಿಒ ಸಂಸ್ಥೆಗೆ ದೇಣಿಗೆ ನೀಡಲು ಐಎಎಸಿಎಫ್ ನಿರ್ಧರಿಸಿದೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾದರೂ ಪೂರ್ವ ನೋಂದಣಿ ಕಡ್ಡಾಯವಾಗಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಅಮೆರಿಕದಲ್ಲಿನ ಭಾರತೀಯ ಸಮುದಾಯ, ಪ್ರಜಾಸತ್ತೆಯ ಸಾಮಾನ್ಯ ಮೌಲ್ಯಗಳು, ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಅದ್ಭುತ ಗೆಲುವಿನ ಕುರಿತಾಗಿನ ಲೇಖನಗಳನ್ನೊಳಗೊಂಡ ಸ್ಮರಣಸಂಚಿಕೆಯನ್ನು ನೀಡಲು ಐಎಸಿಎಫ್ ತೀರ್ಮಾನಿಸಿದೆ. ಈ ಸ್ಮರಣಸಂಚಿಕೆಯ ಜಾಹೀರಾತು ವೆಚ್ಚ 2,500 ಡಾ.ಗಳಿಂದ 35,000 ಡಾಲರ್‌ಗಳಾಗಿದೆ.(ಐಎಎನ್ಎಸ್/ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+