ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಯೋಲ್ ಶಾಂತಿ ಪ್ರಶಸ್ತಿ ಸ್ವೀಕರಿಸಿದ ಮೋದಿ, ನಮಾಮಿ ಗಂಗೆಗೆ ಅರ್ಪಣೆ

|
Google Oneindia Kannada News

ಸಿಯೋಲ್, ಫೆಬ್ರವರಿ 22: "ದ್ವೇಷದ ಜಾಗದಲ್ಲಿ ಸೌಹಾರ್ದತೆಯನ್ನು ನೆಲೆಗೊಳಿಸುವ ಕೆಲಸವಾಗಬೇಕಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಅವರು ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು. 'ಮಹಾತ್ಮಾ ಗಾಂಧೀಜಿ ಅವರ 150 ನೇ ಜನ್ಮ ವರ್ಷಾಚರಣೆಯ ಸಮಯದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ಹೆಮ್ಮೆ ತಂದಿದೆ' ಎಂದ ಅವರು, ಸಿಯೋಲ್ ಶಾಂತಿ ಪ್ರಶಸ್ತಿಯೊಂದಿಗೆ ಬಂದ ನಗದು ಹಣವನ್ನು ಗಂಗಾ ಶುದ್ಧೀಕರಣದ 'ನಮಾಮಿ ಗಂಗೆ' ಯೋಜನೆಗೆ ಅರ್ಪಿಸಿದರು.

ಸಮಯ ಬಂದಿದೆ, ಭಯೋತ್ಪಾದನೆ ಹತ್ತಿಕ್ಕಲು ವಿಶ್ವ ಒಂದಾಗಲಿ: ಮೋದಿ ಘರ್ಜನೆಸಮಯ ಬಂದಿದೆ, ಭಯೋತ್ಪಾದನೆ ಹತ್ತಿಕ್ಕಲು ವಿಶ್ವ ಒಂದಾಗಲಿ: ಮೋದಿ ಘರ್ಜನೆ

ಅಂತಾರಾಷ್ಟ್ರೀಯ ಸಹಕಾರ, ಜಾಗತಿಕ ಪ್ರಗತಿ, ಮಾನವಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ನರೇಂದ್ರ ಮೋದಿ ಅವರ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ದಕ್ಷಿಣ ಕೊರಿಯಾದಲ್ಲಿ ಶಾಂತಿ ಪ್ರಶಸ್ತಿ ಸ್ವೀಕರಿಸಲಿರುವ ಪ್ರಧಾನಿ ಮೋದಿದಕ್ಷಿಣ ಕೊರಿಯಾದಲ್ಲಿ ಶಾಂತಿ ಪ್ರಶಸ್ತಿ ಸ್ವೀಕರಿಸಲಿರುವ ಪ್ರಧಾನಿ ಮೋದಿ

ಈ ಸಂದರ್ಭದಲ್ಲಿ ಭಯೋತ್ಪಾದನೆಯ ವಿರುದ್ಧವೂ ಮಾತನಾಡಿದ ಅವರು, ಮಾನವೀಯತೆಯ ಮೇಲೆ ನಂಬಿಕೆ ಇರುವವರು ಭಯೋತ್ಪಾದನೆಯ ನಿಗ್ರಹಕ್ಕೆ ಕೈಜೋಡಿಸಬೇಕಿದೆ ಎಂದರು.

ದ್ವೇಷದ ಜಾಗದಲ್ಲಿ ಸೌಹಾರ್ದತೆ ನೆಲೆಸಲಿ

ದ್ವೇಷದ ಜಾಗದಲ್ಲಿ ಸೌಹಾರ್ದತೆ ನೆಲೆಸಲಿ

"ಭಯೋತ್ಪಾದನೆಯನ್ನು ಹತ್ತಿಕ್ಕಲು ಸಮಯ ಬಂದಿದೆ, ಇಡೀ ಜಗತ್ತೂ ಒಟ್ಟಾಗಿ ಉಗ್ರವಾದದ ನಿಗ್ರಹಕ್ಕೆ ಕೈಜೋಡಿಸಬೇಕು. ಮಾನವೀಯತೆ ಇರುವ ಪ್ರತಿಯೊಬ್ಬರೂ ಈ ಹಿಂಸೆಯ ವಿರುದ್ಧ ಹೋರಾಡಬೇಕು. ಉಗ್ರರ ಜಾಲಗಳು ಎಲ್ಲೆಲ್ಲಿವೆಯೋ ಆ ಮೂಲದಿಂದಲೇ ನಿರ್ಮೂಲನೆಯಾಗಬೇಕು. ಇದರಿಂದ ಮಾತ್ರವೇ ನಾವು ದ್ವೇಷದ ಜಾಗದಲ್ಲಿ ಸೌಹಾರ್ದತೆ ನೆಲೆಸುವಂತೆ ಮಾಡಲು ಸಾಧ್ಯ"- ನರೇಂದ್ರ ಮೋದಿ

ಈ ಪ್ರಶಸ್ತಿ ಪ್ರತಿ ಭಾರತೀಯನದ್ದು

ಈ ಪ್ರಶಸ್ತಿ ಪ್ರತಿ ಭಾರತೀಯನದ್ದು

"ಈ ಪ್ರಶಸ್ತಿ ಕೇವಲ ನನಗೆ ಮಾತ್ರ ಸಂದಿದ್ದಲ್ಲ. ಇಡೀ ಭಾರತೀಯರಿಗೂ ಸಲ್ಲಬೇಕಾದ್ದು. ಭಾರತ ಕಳೆದ ಐದು ವರ್ಷಗಳಿಂದ ಗಳಿಸಿದ ಅಭೂತಪೂರ್ವ ಯಶಸ್ಸಿನ ಹಿಂದೆ ಈ ದೇಶದ ಜನರ ಪ್ರಯತ್ನ, ಸ್ಫೂರ್ತಿ ಮತ್ತು ದೂರದೃಷ್ಟಿ ಇದೆ. ಆವರೆಲ್ಲರ ಪರವಾಗಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ. ನಿಮಗೆ ಕೃತಜ್ಞತೆ ಅರ್ಪಿಸುತ್ತೇನೆ"- ನರೇಂದ್ರ ಮೋದಿ

ನಗದು ಹಣ ನಮಾಮಿ ಗಂಗೆಗೆ

ನಗದು ಹಣ ನಮಾಮಿ ಗಂಗೆಗೆ

"ಸಿಯೋಲ್ ಶಾಂತಿ ಪ್ರಶಸ್ತಿ ಪಾರಿತೋಷಕದೊಂದಿಗೆ ಕೊಡಮಾಡಿದ 2000(1,44,000 ರೂ.) ಡಾಲರ್ ನಗದು ಹಣವನ್ನು ನಾನು ನಮಾಮಿ ಗಂಗೆ ಯೋಜನೆಗೆ ನೀಡುತ್ತೇನೆ"-ನರೇಂದ್ರ ಮೋದಿ

ಗಾಂಧೀಜಿ ನೆನೆದ ಮೋದಿ

ಗಾಂಧೀಜಿ ನೆನೆದ ಮೋದಿ

"ಮಹಾತ್ಮಾ ಗಾಂಧೀಜಿಯವರ 150 ನೇ ವರ್ಷಾಚರಣೆಯ ಹೊತ್ತಲ್ಲಿ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನನಗೆ ಅತೀವ ಸಂತಸ ತಂದಿದೆ."- ನರೇಂದ್ರ ಮೋದಿ

English summary
PM Narendra Modi on receiving Seoul Peace Prize in South Korea: This award does not belong to me personally but to the people of India, the success India has achieved in the last 5 years, powered by the skill of 1.3 billion people
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X