ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೊಂಗಾ ಜ್ವಾಲಾಮುಖಿ: ತೈಲ ಸೋರಿಕೆಯಿಂದ ಪ್ರಾಣಿ ಪಕ್ಷಿಗಳಿಗೆ ಹಾನಿ

|
Google Oneindia Kannada News

ಲಿಮಾ ಜನವರಿ 21: ಕಳೆದ ವಾರಾಂತ್ಯದಲ್ಲಿ ಟೊಂಗಾದಲ್ಲಿನ ಜ್ವಾಲಾಮುಖಿಯ ಸ್ಫೋಟದಿಂದ ಉಂಟಾದ ಹೆಚ್ಚಿನ ಅಲೆಗಳ ಸಮಯದಲ್ಲಿ ಪೆರುವಿನ ಸಂಸ್ಕರಣಾಗಾರದಲ್ಲಿ ತೈಲ ಸೋರಿಕೆಯಾಗಿ ಪರಿಸರ ಹದಗೆಟ್ಟಿದೆ ಎಂದು ಪೆರುವಿಯನ್ ಸರ್ಕಾರ ಹೇಳಿದೆ. ತೈಲ ಸೋರಿಕೆಯು ದ್ವೀಪಗಳು ಮತ್ತು ಮೀನುಗಾರಿಕೆ ಪ್ರದೇಶಗಳ ಸುಮಾರು 18,000 ಚದರ ಕಿಲೋಮೀಟರ್ (6,950 ಚದರ ಮೈಲುಗಳು) ಪ್ರದೇಶದಲ್ಲಿ ಪ್ರಾಣಿ ಮತ್ತು ಸಸ್ಯ ಜೀವನಕ್ಕೆ ಹಾನಿ ಮಾಡಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಸುಮಾರು 10,000 ಕಿಮೀ (6,213 ಮೈಲುಗಳು) ದೂರದಲ್ಲಿರುವ ಟೊಂಗಾದಲ್ಲಿ ಸಮುದ್ರದೊಳಗಿನ ಬೃಹತ್ ಜ್ವಾಲಾಮುಖಿ ಸ್ಫೋಟದ ನಂತರ ಸ್ಪ್ಯಾನಿಷ್ ತೈಲ ಕಂಪನಿ ರೆಪ್ಸೋಲ್‌ನ ಲಾ ಪ್ಯಾಂಪಿಲ್ಲ ಸಂಸ್ಕರಣಾಗಾರದಲ್ಲಿ ಕಚ್ಚಾ ತೈಲವನ್ನು ಇಳಿಸುತ್ತಿದ್ದ ಟ್ಯಾಂಕರ್‌ ಸೋರಿಕೆಯಾಗಿತ್ತು.

ಘಟನೆಯ ಹೊಣೆ ಹೊತ್ತುಕೊಳ್ಳಲು ಸಚಿವಾಲಯ Repsol (REP.MC) ಗೆ ಕರೆ ನೀಡಿದೆ. "ಇದು ಇತ್ತೀಚಿನ ದಿನಗಳಲ್ಲಿ ಲಿಮಾ ಸುತ್ತಮುತ್ತ ಸಂಭವಿಸಿದ ಅತ್ಯಂತ ಕೆಟ್ಟ ಪರಿಸರ ವಿಪತ್ತು. ಇದು ನೂರಾರು ಮೀನುಗಾರರ ಕುಟುಂಬಗಳನ್ನು ಗಂಭೀರವಾಗಿ ಹಾನಿಗೊಳಿಸಿದೆ. ರೆಪ್ಸೋಲ್ ತಕ್ಷಣವೇ ಹಾನಿಯನ್ನು ಸರಿದೂಗಿಸಬೇಕು" ಎಂದು ಸಚಿವಾಲಯ ಟ್ವಿಟರ್‌ನಲ್ಲಿ ತಿಳಿಸಿದೆ. ಘಟನೆಯ ಕಾರಣದಿಂದಾಗಿ ಪೆರುವಿಯನ್ ಪ್ರಾಸಿಕ್ಯೂಟರ್‌ಗಳು ರೆಪ್ಸೋಲ್‌ನ ಘಟಕದ ತನಿಖೆಯನ್ನು ನಡೆಸಿವೆ.

ಪರಿಸರ ಸಚಿವ ರೂಬೆನ್ ರಾಮಿರೆಜ್ ಅವರು ರೆಪ್ಸೋಲ್‌ನ ಅಧಿಕಾರಿಗಳನ್ನು ಭೇಟಿ ಮಾಡಿದರು. ಈ ವೇಳೆ ಮಾತನಾಡಿದ ಅವರು ಕಂಪನಿಯ ಪ್ರಕಾರ ಸುಮಾರು 6,000 ಬ್ಯಾರೆಲ್‌ಗಳ ತೈಲ ಸೋರಿಕೆಯಾಗಿದೆ ಎಂದು ಹೇಳಿದರು.

Peru says oil spill caused by Tonga waves is an ecPeru says oil spill caused by Tonga waves is an ecological disasterological disaster

ಪೆರುವಿನ ಸೂಪರ್‌ವೈಸರಿ ಏಜೆನ್ಸಿ ಫಾರ್ ಇನ್ವೆಸ್ಟ್‌ಮೆಂಟ್ ಇನ್ ಎನರ್ಜಿ ಅಂಡ್ ಮೈನಿಂಗ್ (ಒಸಿನೆರ್ಗ್ಮಿನ್) ಒಂದು ಹೇಳಿಕೆಯಲ್ಲಿ ಸೋರಿಕೆಯ ಕಾರಣಗಳನ್ನು ನಿರ್ಧರಿಸುವವರೆಗೆ ರಿಫೈನರಿಯ ನಾಲ್ಕು ಟರ್ಮಿನಲ್‌ಗಳಲ್ಲಿ ಒಂದನ್ನು ಮುಚ್ಚಲು ಆದೇಶಿಸಿದೆ ಎಂದು ಹೇಳಿದೆ. ಲಾ ಪ್ಯಾಂಪಿಲ್ಲ ಪೆರುವಿನ ಅತಿದೊಡ್ಡ ಸಂಸ್ಕರಣಾಗಾರವಾಗಿದೆ ಮತ್ತು ಸ್ಥಳೀಯ ಇಂಧನ ಮಾರುಕಟ್ಟೆಯ ಅರ್ಧಕ್ಕಿಂತ ಹೆಚ್ಚಿನದನ್ನು ಪೂರೈಸುತ್ತದೆ.

ಜನವರಿ 15ರಂದು ಪೆಸಿಫಿಕ್ ಸಾಗರದ ಟೊಂಗಾ ಬಳಿ ಸಾಗರದಾಳದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿತ್ತು. ಸ್ಪೋಟದ ತೀವ್ರತೆಗೆ 20 ಕಿಲೋಮೀಟರ್ ಎತ್ತರಕ್ಕೆ ಬೂದಿ ಹಾರಿ ಆಕಾಶದಲ್ಲಿ ಬೂದು ಮೋಡಗಳು ಆವರಿಸಿದ್ದವು. ಸ್ಥಳೀಯ ಕಾಲಮಾನ ಬೆಳಗ್ಗೆ 4.10ರ ಸುಮಾರಿಗೆ ಹಂಗಾ ಟೊಂಗಾ- ಹಂಗಾ ಹಾಪೈ ನೀರಿನಡಿಯ ಅಗ್ನಿಪರ್ವತ ಸ್ಫೋಟಿಸಿದೆ. ಟೊಂಗಾ ರಾಜಧಾನಿಯಲ್ಲಿ ಸುನಾಮಿಗೆ ಕಾರಣವಾಗಿದೆ.

ಸುಮಾರು 80 ಸೆಂಟಿಮೀಟರ್‌ಗಳಷ್ಟು (2.7 ಅಡಿ) ಸುನಾಮಿ ಅಲೆಗಳು ಟೊಂಗಾದ ತೀರಕ್ಕೆ ಅಪ್ಪಳಿಸಿತು. ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್, ಟೊಂಗಾದ ತೀರದಲ್ಲಿ ದೋಣಿಗಳು ಮತ್ತು ಅಂಗಡಿಗಳಿಗೆ ಹಾನಿಯನ್ನುಂಟು ಮಾಡಿದೆ ಎಂದು ಹೇಳಿದರು. ಅಲೆಗಳು ಪೆಸಿಫಿಕ್ ಅನ್ನು ದಾಟಿ, ಪೆರುವಿನಲ್ಲಿ ಇಬ್ಬರನ್ನು ಮುಳುಗಿಸಿತು. ನ್ಯೂಜಿಲೆಂಡ್‌ನಿಂದ ಕ್ಯಾಲಿಫೋರ್ನಿಯಾದ ಸಾಂಟಾ ಕ್ರೂಜ್‌ಗೆ ಸಣ್ಣ ಹಾನಿಯನ್ನುಂಟುಮಾಡಿತು. 5.8 ತೀವ್ರತೆಯ ಭೂಕಂಪಕ್ಕೆ ಸಮನಾದ ಸ್ಫೋಟವು ಉಂಟಾಯಿತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಅಂದಾಜಿಸಿದೆ. ಅಂದಾಜು ಒಂದು ಮಿಲಿಯನ್ ನಷ್ಟು ಜ್ವಾಲಾಮುಖಿಗಳು ಸಮುದ್ರದೊಳಗಿವೆ. ಅವುಗಳಲ್ಲಿ ಹೆಚ್ಚಿನವು ಟೆಕ್ಟೋನಿಕ್ ಪ್ಲೇಟ್‌ಗಳ ಬಳಿ ಇವೆ.

ಉಪಗ್ರಹ ಚಿತ್ರಗಳು ಶನಿವಾರ ಸಂಜೆ ಸಮುದ್ರದೊಳಗಿನ ಸ್ಫೋಟವನ್ನು ತೋರಿಸಿದವು, ಬೂದಿ, ಉಗಿ ಮತ್ತು ಅನಿಲ ದಕ್ಷಿಣ ಪೆಸಿಫಿಕ್ ನೀರಿನ ಮೇಲೆ ದೈತ್ಯ ಅಣಬೆಯಂತೆ ಏರುತ್ತಿವೆ. ಅಲಾಸ್ಕಾದ ದೂರದವರೆಗೆ ದೊಡ್ಡ ಸದ್ದು ಕೇಳಿಸಿತು. ಸ್ಫೋಟವು ವಾತಾವರಣದ ಒತ್ತಡವನ್ನು ಬದಲಿಸಿದೆ ಎಂದು ಕೆಲವು ಹವಾಮಾನ ತಜ್ಞರು ಹೇಳಿದ್ದಾರೆ. ಇದು ಯುನೈಟೆಡ್ ಸ್ಟೇಟ್ಸ್‌ನ ಸಿಯಾಟಲ್‌ನಲ್ಲಿ ಮಂಜನ್ನು ತೆರವುಗೊಳಿಸಲು ಸಹಾಯ ಮಾಡಿರಬಹುದು.

English summary
An oil spill at a refinery in Peru during high waves caused by the explosion last weekend of a volcano in Tonga is an "ecological disaster," the Peruvian government said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X