ಪೆರು: 100 ಅಡಿ ಪ್ರಪಾತಕ್ಕೆ ಬಿದ್ದ ಬಸ್, ಕನಿಷ್ಠ 46 ಮಂದಿ ಸಾವು

Posted By:
Subscribe to Oneindia Kannada

ಲಿಮಾ(ಪೆರು), ಜನವರಿ 03 : ಪೆರು ರಾಷ್ಟ್ರದ ರಾಜಧಾನಿ ಲಿಮಾದಲ್ಲಿ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 46 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಬೆಳಗಾವಿ: ಮರಕ್ಕೆ ಕಾರು ಡಿಕ್ಕಿ, ತಾಯಿ ಇಬ್ಬರು ಮಕ್ಕಳು ದುರ್ಮರಣ

ಹುವಾಚೋದಿಂದ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಬೆಟ್ಟದ ರಸ್ತೆಯಿಂದ ಜಾರಿ ಸುಮಾರು 100 ಅಡಿ ಆಳಕ್ಕೆ ಬಿದ್ದಿದೆ. ಮಂಗಳವಾರ ಈ ದುರಂತ ಸಂಭವಿಸಿದೆ. ಪರಿಣಾಮ ಸುಮಾರು 46 ಜನರು ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ ಎಂದು ಪೆರು ಅಗ್ನಿಶಾಮಕ ಅಧಿಕಾರಿ ಲೆವಿಸ್ ಮೆಜಿಯ ತಿಳಿಸಿದ್ದಾರೆ.

Peru: at least 46 dead after bus plunges off cliff on 'Devil's Curve' highway

, ಗಾಯಾಳುಗಳನ್ನು ಹಾಗೂ ಮೃತದೇಹಗಳನ್ನು ಹೆಲಿಕಾಪ್ಟರ್ ಮೂಲಕ ಹೊರ ತೆಗೆಯಲಾಗುತ್ತಿದೆ. ಇನ್ನು ಕೆಲವರನ್ನು ಹಗ್ಗದ ಮೇಲಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೌಕಾಪಡೆ, ಅಗ್ನಿಶಾಮಕ ದಳ ಸೇರಿದಂತೆ ಹಲವು ಪಡೆಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least 46 people have been killed when a bus fell down a cliff onto a rocky beach along a narrow stretch of highway known as the “Devil’s Curve”, Peruvian police and fire officials said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ