ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘನ್‌ನಲ್ಲಿ ಪ್ರತಿಭಟನೆ ಮಾಡಬೇಕೆಂದರೆ ಏನೆಲ್ಲಾ ನಿಯಮ ಅನುಸರಿಸಬೇಕು?

|
Google Oneindia Kannada News

ಕಾಬೂಲ್, ಸೆಪ್ಟೆಂಬರ್ 09: ಅಫ್ಘಾನಿಸ್ತಾನದಲ್ಲಿ ಇನ್ನುಮುಂದೆ ಪ್ರತಿಭಟನೆ ಮಾಡುವುದು ಅಷ್ಟು ಸುಲಭವಲ್ಲ. ಪ್ರತಿಭಟನಾಕಾರರು ಹಲವು ನಿಯಮಗಳನ್ನು ಅನುಸರಿಸಲೇಬೇಕು.

ಅಫ್ಘನ್​ನಲ್ಲಿ ಶಾಂತಿಯುತ ಪ್ರತಿಭಟನೆ ಮಾಡಬೇಕು. ಅದನ್ನು ಮಾಡುವುದಕ್ಕೂ ಅಧಿಕಾರಿಗಳಿಂದ ಅನುಮತಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಂಘರ್ಷದ ವಾತಾವರಣವನ್ನು ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತಿಲ್ಲ ಎಂದು ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಹೇಳಿಕೆ ನೀಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ 33 ಸದಸ್ಯರ ತಾಲಿಬಾನ್ ಸರ್ಕಾರ ರಚನೆ: ಪೂರ್ಣ ಪಟ್ಟಿಅಫ್ಘಾನಿಸ್ತಾನದಲ್ಲಿ 33 ಸದಸ್ಯರ ತಾಲಿಬಾನ್ ಸರ್ಕಾರ ರಚನೆ: ಪೂರ್ಣ ಪಟ್ಟಿ

ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿರುವ ತಾಲಿಬಾನ್​ ನಾಯಕರು ತಮ್ಮ ಮೂಗಿನ ನೇರಕ್ಕಷ್ಟೆ ನಿಯಮಾವಳಿಗಳನ್ನು ರೂಪಿಸುತ್ತಿದ್ದು ಇದೀಗ ಪ್ರತಿಭಟನೆ ಕುರಿತು ಹೊಸ ಆದೇಶ ಹೊರಡಿಸಿದ್ದಾರೆ.

Permission Needed For Protests, Purpose And Slogans To Be Shared With Interior Ministry In Taliban

ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಬೆಂಬಲಿತ ತಾಲಿಬಾನ್ ಸರ್ಕಾರ ರಚನೆಯಾಗಿದೆ. ಪಂಜ್ಶೀರ್ ಮೇಲೆ ಪಾಕಿಸ್ತಾನ ಸೇನೆ ನೆರವಿನಿಂದ ತಾಲಿಬಾನ್ ದಾಳಿ ನಡೆಸಿ ಸಂಪೂರ್ಣ ಆಫ್ಘಾನಿಸ್ತಾನವನ್ನು ಉಗ್ರರು ಕೈವಶ ಮಾಡಿದ್ದಾರೆ. ಇದರ ಬಳಿಕ ಕಾಬೂಲ್ ಸೇರಿದಂತೆ ಹಲವೆಡೆ ಪಾಕಿಸ್ತಾನ ಕೈವಾಡದ ವಿರುದ್ಧ ಪ್ರತಿಭಟನೆಗಳು ಆರಂಭಗೊಂಡಿದೆ.

ಪ್ರತಿಭಟನಾ ನಿರತರ ಮೇಲೆ ತಾಲಿಬಾನ್ ಗುಂಡಿನ ಮಳೆ ಸುರಿಸಿದೆ. ಇದರ ನಡುವೆ ದಿಟ್ಟ ಮಹಿಳೆ ತಾಲಿಬಾನ್ ಉಗ್ರನ ಬಂದೂಕಿಗೆ ಎದೆಯೊಡ್ಡಿ ನಿಂತ ಫೋಟೋ ವೈರಲ್ ಆಗಿದೆ.

ಕಾಬೂಲ್ ನಗರದ ಹಲೆವೆಡೆ ಮಹಿಳೆಯರು ಸೇರಿದಂತೆ ಆಫ್ಘಾನ್ ನಿವಾಸಿಗಳು ಪಾಕಿಸ್ತಾನ ಪ್ರವೇಶ ಹಾಗೂ ತಾಲಿಬಾನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಹತ್ತಿಕ್ಕಲ್ಲು ತಾಲಿಬಾನ್ ಉಗ್ರರು ಸತತ ಗುಂಡಿನ ದಾಳಿ ನಡೆಸಿದ್ದಾರೆ. ಕಾಬೂಲ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಮುಂಭಾಗದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ನಿರತರ ಮೇಲೆ ತಾಲಿಬಾನ್ ಗುಂಡು ಹಾರಿಸಲು ಮುಂದಾಗಿದೆ. ಆದರೆ ತಾಲಿಬಾನ್ ಉಗ್ರ ಮಹಿಳೆಗೆ ನೇರವಾಗಿ ಬಂದೂಕು ಹಿಡಿದು ಪ್ರತಿಭಟನೆ ನಿಲ್ಲಿಸುವಂತೆ ಎಚ್ಚರಿಸಿದ್ದಾರೆ.

ಆದರೆ ಮಹಿಳೆ ಯಾವುದೇ ಅಳುಕಿಲ್ಲದೆ ಉಗ್ರನ ಬಂದೂಕಿನ ನಳಿಕೆ ಮುಂದೆ ದಿಟ್ಟವಾಗಿ ಘೋಷಣೆ ಕೂಗಿದ ಘಟನೆ ನಡೆದಿದೆ.ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ತಾಲಿಬಾನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ತಾಲಿಬಾನ್ ಆಡಳಿತದಲ್ಲಿ ಹೆಣ್ಣುಮಕ್ಕಳು ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಷರಿಯಾ ನಿಯಮದ ವಿರುದ್ಧ ಹೆಣ್ಣು ಮಕ್ಕಳು ಓಡಾಡಿದರೆ ಅಲ್ಲೆ ಸಮಾಧಿ.

ಅದೆಷ್ಟೇ ಹಣ್ಣು ಮಕ್ಕಳು ಕಳೆದೊಂದು ತಿಂಗಳಲ್ಲಿ ತಾಲಿಬಾನ್ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. ಈಗ ನಡೆಯುತ್ತಿರುವಂತೆ ಅಫ್ಘನ್ ನಾಯಕರ ನಿಂದನೆಗೆ ಅವಕಾಶವಿಲ್ಲ. ಯಾರೂ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವಹಾಗಿಲ್ಲ. ಸಂಘರ್ಷದ ವಾತಾವರಣ ಸೃಷ್ಟಿಸಿ ಅದನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು.

ಯಾವ ಸ್ಥಳದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂಬ ಮಾಹಿತಿಯನ್ನೂ ಮೊದಲೇ ತಿಳಿಸಬೇಕು. ಅಫ್ಘಾನಿಸ್ತಾನದಲ್ಲಿ ನೂತನ ಸರ್ಕಾರ ರಚನೆ ಮಾಡಿರುವ ತಾಲಿಬಾನ್ ಸಂಘಟನೆಯಲ್ಲಿ 17 ಮಂದಿ ಭಯೋತ್ಪಾದಕರಿದ್ದಾರೆ ಎಂದು ವಿಶ್ವಸಂಸ್ಥೆಯ ಅಫ್ಘಾನಿಸ್ತಾನದ ಶಾಶ್ವತ ಪ್ರತಿನಿಧಿ ಗುಲಾಮ್ ಎಂ ಇಸಾಕಜೈ ಹೇಳಿದ್ದಾರೆ.

, ಅಫ್ಘಾನಿಸ್ತಾನದಲ್ಲಿ ನೂತನ ಸರ್ಕಾರ ರಚನೆ ಮಾಡಿರುವ ತಾಲಿಬಾನ್ ಸಂಘಟನೆಯಲ್ಲಿ 17 ಮಂದಿ ಭಯೋತ್ಪಾದಕರಿದ್ದಾರೆ. ವಿಶ್ವಸಂಸ್ಥೆ ಈಗಾಗಲೇ ಈ 17 ಮಂದಿ ಭಯೋತ್ಪಾದಕರನ್ನು ಜಾಗತಿಕ ಉಗ್ರರು ಎಂದು ಘೋಷಿಸಿದೆ. ಎಂದು ಟ್ವೀಟ್ ಗುಲಾಮ್ ಎಂ ಇಸಾಕಜೈ ಟ್ವೀಟ್ ಮಾಡಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡು ಸುಮಾರು 2 ವಾರಗಳಾಗಿವೆ. ಇದಾದ ಬಳಿಕ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು.

ಆ. 15ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದಿತ್ತು. ಅಫ್ಘಾನಿಸ್ತಾನದಲ್ಲಿ ಮುಂದಿನ ವಾರ ನೂತನ ಸರ್ಕಾರ ರಚನೆಯಾಗಲಿದ್ದು, ತಾಲಿಬಾನ್​ ಸಂಘಟನೆಯ ಪ್ರಮುಖ ನಾಯಕರಿಗೆ ಮಹತ್ವದ ಹುದ್ದೆಗಳು ಸಿಗಲಿವೆ.

ಅಫ್ಘಾನ್ ಸರ್ಕಾರದಲ್ಲಿರುವ ನೂತನ ಸಂಪುಟದಲ್ಲಿ ಸದ್ಯ 17 ಜನರು ಭಯೋತ್ಪಾದಕರ ಪೈಕಿ ಒಬ್ಬರು ಪ್ರಧಾನಿ, ಇಬ್ಬರು ಡೆಪ್ಯೂಟಿ ಪ್ರಧಾನಿ, ಗೃಹ ಸಚಿವ, ರಕ್ಷಣಾ ಸಚಿವ, ವಿದೇಶಾಂಗ ಸಚಿವರೂ ಜಾಗತಿಕ ಭಯೋತ್ಪದಕರು ಎಂದು ಗುಲಾಮ್ ಎಂ ಇಸಾಕೈ ಹೇಳಿದ್ದಾರೆ.

ಆದರೆ ಇದೀಗ ಘೋಷಿತ ಭಯೋತ್ಪಾದಕರ ಜತೆಗೆ ವಿಶ್ವ ಸಂಸ್ಥೆ, ಅಮೆರಿಕಾ ರಾಜತಾಂತ್ರಿಕ ವ್ಯವಹಾರಗಳನ್ನು ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.

English summary
The Taliban has introduced several ‘conditions’ to restrict protests in Afghanistan after forming a new government in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X