Roma Michael: ಬಿಕಿನಿ ತೊಟ್ಟು ಶಾಕ್‌ ಕೊಟ್ಟ ಪಾಕ್‌ ಮಾಡಲ್‌!

ಪಾಕಿಸ್ತಾನ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಬಟ್ಟೆ ಧರಿಸುವ ವಿಚಾರದಲ್ಲಿ ಕಟ್ಟುಪಾಡುಗಳಿವೆ. ಹಾಗಾಗಿ ಬಹುತೇಕರು ಹಿಜಾಬ್‌ ಧರಿಸುವ ಪದ್ಧತಿಯೂ ಇದೆ. ಕೆಲವರು ಮೈಕಾಣುವಂತೆ ಬಟ್ಟೆ ಕೂಡ ಧರಿಸುವಂತಿಲ್ಲ. ಈ ನಿಯಮಗಳ ನಡುವೆಯೂ ಪಾಕಿಸ್ತಾನದ ಮಾಡಲ್‌ವೊಬ್ಬರು ಬಿಕಿನಿ ತೊಟ್ಟು ಮಿಸ್‌ ವರ್ಲ್ಡ್‌ ಸ್ಪರ್ಧೆಯ (Miss World Grand Show) ವೇದಿಕೆ ಮೇಲೆ ವಾಕ್‌ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಹೌದು ಪಾಕಿಸ್ತಾನದ ಖ್ಯಾತ ಮಾಡಲ್‌ ರೋಮಾ ಮೈಕೆಲ್ (Roma Michael) ಮಿಸ್‌ ವರ್ಲ್ಡ್‌ ಗ್ರ್ಯಾಂಡ್‌ ಸೌಂದರ್ಯ ಸ್ಪರ್ಧೆಯಲ್ಲಿ ಮಿಂಚಿದ್ದಾರೆ. ಈ ವಿಡಿಯೋ ಸದ್ಯ ಜಾಗತಿಕವಾಗಿ ಚರ್ಚೆಯಲ್ಲಿದೆ. ಮುಸ್ಲಿಂ ರಾಷ್ಟ್ರಗಳಿಂದ ಈ ವಿಡಿಯೋಗೆ ವಿರೋಧ ಕೂಡ ವ್ಯಕ್ತವಾಗಿದೆ. ರೋಮಾ ಮೈಕೆಲ್ ಅವರು ಪಾಕಿಸ್ತಾನಿ ಕ್ರಿಶ್ಚಿಯನ್ ಎಂದೂ ಹೇಳಲಾಗುತ್ತಿದೆ.

Pakistani Model Roma Michael Participated In The Miss World Grand Show

ಮೊದಲಿಗೆ ರೋಮಾ ಮೈಕೆಲ್ ಅವರು ತಮ್ಮ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದರು. ಆದರೆ ಪಾಕಿಸ್ತಾನದ ಜನರು ಪಾಕಿಸ್ತಾನದ ಹೆಸರನ್ನು ಹಾಳು ಮಾಡಿದ್ದೀಯ ಎಂದು ಈಕೆಗೆ ಬೆದರಿಕೆ ಹಾಕಿ, ಮನಬಂದಂತೆ ನಿಂದಿಸುತ್ತಿರುವುದರಿಂದ ಆ ವಿಡಿಯೋ ಡಿಲೀಟ್‌ ಮಾಡಿದ್ದಾರೆ ಎನ್ನಲಾಗಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಹೆಚ್ಚು ವೀಕ್ಷಣೆ ಪಡೆಯುತ್ತಿದೆ. ಇನ್ನು ಕಟ್ಟುಪಾಡುಗಳನ್ನು ಸೈಡಿಗಿಟ್ಟ ರೋಮಾ ಮೈಕೆಲ್ ನಡೆಗೆ ಹಲವರು ಬೇಷ್‌ ಎಂದಿದ್ದಾರೆ. ಆದರೆ, ಪಾಕಿಸ್ತಾನದ ಮಂದಿಯಂತೂ ಕೆಂಡವಾಗಿದ್ದಾರೆ. ಕೆಲವರು ರೋಮಾ ಮೈಕೆಲ್ ಅವರು ತುಂಬಾ ಬೋಲ್ಡ್ ಮತ್ತು ಸೆಕ್ಸಿಯಾಗಿದ್ದಾರೆ. ಮೊದಲ ಬಾರಿಗೆ ಲಾಹೋರ್ ಮೂಲದ ಮಾಡೆಲ್ ರೋಮಾ ಮೈಕೆಲ್ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಆಧುನೀಕರಣಗೊಂಡ ಪಾಕಿಸ್ತಾನಕ್ಕಾಗಿ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಧನ್ಯವಾದಗಳು ಎಂದು ವಿಡಿಯೋ ಟ್ಯಾಗ್‌ ಮಾಡಿದ್ದಾರೆ.

ರೋಮಾ ಮೈಕೆಲ್ ಸದ್ಯ ಕ್ರಿಶ್ಚಿಯನ್ ಹಾಗೂ ಪಾಕಿಸ್ತಾನದ ಮಾಡೆಲ್‌. ಮೈಕೆಲ್‌ ನಾನ್ ಇಸ್ಲಾಮಿಸ್ಟ್ ಆಗಿರುವುದರಿಂದ ಬುರ್ಕಾ ಇಲ್ಲದೆ ಮಿಸ್ ವರ್ಲ್ಡ್ ಗ್ರ್ಯಾಂಡ್ ಶೋನಲ್ಲಿ ಭಾಗವಹಿಸಿದ್ದಾಳೆ. ಬಿಕಿನಿಯಲ್ಲಿ ಸಖತ್‌ ಸೆಕ್ಸಿ ಮತ್ತು ಸ್ಟನ್ನಿಂಗ್ ಆಗಿ ಕಾಣಿಸುತ್ತಿದ್ದಾಳೆ. ಒಂದು ವೇಳೆ ಅವಳು ಇಸ್ಲಾಮಿಕ್ ಆಗಿದ್ದರೆ ಏನು ಕಥೆ? ಎಂದು ಕೆಲವರು ಪ್ರಶ್ನೆ ಮುಂದಿಟ್ಟಿದ್ದಾರೆ.

Pakistani Model Roma Michael Participated In The Miss World Grand Show

ಮಾಡೆಲ್ ರೋಮಾ ಅವರು ಪಾಕಿಸ್ತಾನದ ಲಾಹೋರ್‌ನಿಂದ ಏಷ್ಯಾದ ಪ್ರಸ್ತುತ ಶೋ ಸ್ಟಾಪರ್ ಆಗಿದ್ದಾರೆ. ಇವರು ಶರಿಯಾ ಜಗತ್ತನ್ನು ಬೆರಗುಗೊಳಿಸಿದ್ದಾರೆ. ರೋಮಾ ಮೈಕೆಲ್‌ನನ್ನು ಇತರ ಪಾಕಿಸ್ತಾನಿ ಮಾಡೆಲ್‌ಗಳು ಹಾಗೂ ಇನ್‌ಫ್ಲುಯೆನ್ಸರ್‌ಗಳಂತೆ ಇಸ್ಲಾಂನ ಹೆಸರಿನಲ್ಲಿ ಹತ್ಯೆ ಮಾಡಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹಲವರು ಈಕೆಯ ಬಗ್ಗೆ ಕಳವಳ ಕೂಡ ವ್ಯಕ್ತಪಡಿಸಿದ್ದಾರೆ.

ರೋಮಾ ಮೈಕೆಲ್‌ ಕ್ರಿಶ್ಚಿಯನ್ ಮಾಡೆಲ್, ಮುಸ್ಲಿಂ ಅಲ್ಲ. ಆದರೆ ಇನ್ನೂ ಸಂಪ್ರದಾಯವಾದಿ ಇಸ್ಲಾಮಿಕ್ ದೇಶವನ್ನು ಪ್ರತಿನಿಧಿಸುವುದು ಅವರ ಅಸ್ತಿತ್ವಕ್ಕೆ ಅವಮಾನವಾಗಿದೆ. ಅವರು ತಮ್ಮ ಪಾಸ್‌ಪೋರ್ಟ್‌ಗಳ ಅಡಿಯಲ್ಲಿ ಇಸ್ಲಾಮಿಕ್‌ ರಿಪಬ್ಲಿಕ್‌ ಆಫ್‌ ಪಾಕಿಸ್ತಾನ್‌ ಎಂಬ ಟ್ಯಾಗ್ ಅನ್ನು ತೆಗೆದುಹಾಕಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+