ವಿಡಿಯೋ : ಕರಾಚಿಯ ಚೀನಾ ರಾಯಭಾರಿ ಕಚೇರಿ ಬಳಿ ಸ್ಫೋಟ
ಕರಾಚಿ, ನವೆಂಬರ್ 23: ಇಲ್ಲಿನ ಕ್ಲಿಫ್ಟನ್ ಪ್ರದೇಶದಲ್ಲಿರುವ ಚೀನಾ ರಾಯಭಾರಿ ಕಚೇರಿ ಬಳಿ ಶುಕ್ರವಾರ ಬೆಳಗ್ಗೆ ಬಾಂಬ್ ಸ್ಫೋಟ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ಇಬ್ಬರು ಪೊಲೀಸರು ಹಾಗೂ ಮೂವರು ಭಯೋತ್ಪಾದಕರು ಮೃತಪಟ್ಟಿದ್ದಾರೆ. ಗ್ರೇನೆಡ್ ಹಾಗೂ ಇನ್ನಿತರ ಶಸ್ತ್ರಾಸ್ತ್ರಗಳನ್ನು ಹಿಡಿದ ಮುಸುಕುಧಾರಿಗಳನ್ನು ಕ್ಲಿಫ್ಟನ್ ಬ್ಲಾಕ್ 4ರಲ್ಲಿ ಬೆಳಗ್ಗೆ 9.30ರ ಸುಮಾರಿಗೆ ನೋಡಿದೆ.

ಎಲ್ಲರು ಚೀನಾದ ರಾಯಭಾರಿ ಕಚೇರಿ ಬಳಿ ಧಾವಿಸುತ್ತಿದ್ದರು. ಮುರ್ನಾಲ್ಕು ಮಂದಿ ರಾಯಭಾರ ಕಚೇರಿಗೆ ನುಗ್ಗಲು ಯತ್ನಿಸುತ್ತಿರುವ ದೃಶ್ಯ ಕಂಡೆ ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಹೇಳಿದ್ದಾರೆ.
#karachi #khialerts 09h35 video from witnesses pic.twitter.com/ONguK5Hh7P
— norbert almeida (@norbalm) November 23, 2018
ಉಗ್ರರು ಹಾಗೂ ರಾಯಭಾರ ಕಚೇರಿಯ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ಮೊದಲಿಗೆ ಮೃತಪಟ್ಟರು. ನಂತರ ಉಗ್ರರ ಪೈಕಿ ಮೂವರನ್ನು ಹೊಡೆದುರಳಿಸಲಾಗಿದೆ.












Click it and Unblock the Notifications