ಕದನ ವಿರಾಮ ಉಲ್ಲಂಘನೆ ಆರೋಪ:ಭಾರತೀಯ ರಾಜತಾಂತ್ರಿಕ ಅಧಿಕಾರಿಗೆ ಪಾಕ್ ಸಮನ್ಸ್

ಇಸ್ಲಾಮಾಬಾದ್, ನವೆಂಬರ್ 23: ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿರುವ ಆರೋಪದ ಮೇರೆಗೆ ಭಾರತೀಯ ಹಿರಿಯ ರಾಜತಾಂತ್ರಿಕ ಅಧಿಕಾರಿಗೆ ಪಾಕಿಸ್ತಾನ ಸಮನ್ಸ್ ನೀಡಿದೆ.

2003ರ ಕದನ ವಿರಾಮ ನಿಯಮಗಳನ್ನು ಭಾರತ ಗೌರವಿಸಬೇಕು. ಕದನ ವಿರಾಮ ಉಲ್ಲಂಘನೆಯ ಇತರ ಘಟನೆಗಳನ್ನು ತನಿಖೆ ಮಾಡಿ ಮತ್ತು ನಿಯಂತ್ರಣ ಮತ್ತು ಕಾರ್ಯ ಗಡಿಯುದ್ದಕ್ಕೂ ಶಾಂತಿಯನ್ನು ಕಾಪಾಡಿಕೊಳ್ಳಿ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ವಿದೇಶಾಂಗ ಕಚೇರಿ ಪ್ರಕಾರ, ಎಲ್‌ಒಸಿಯ ಖುಯಿರಟ್ಟಾ ಸೆಕ್ಟರ್‌ನಲ್ಲಿ ಭಾನುವಾರ ನಡೆದ ಭಾರತೀಯ ಸೇನೆಯ ಯೋಧರು ನಡೆಸಿರುವ ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ 11 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ.

Pakistan Summons Senior Indian Diplomat Over Ceasefire Violations

ಈ ವರ್ಷ ಭಾರತವು 2,820 ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ವಿದೇಶಾಂಗ ಕಚೇರಿ ಆರೋಪಿಸಿದೆ. ಇದರ ಪರಿಣಾಮವಾಗಿ 26 ಮಂದಿ ಸಾವನ್ನಪ್ಪಿದ್ದು 245 ಮಂದಿಗೆ ಗಂಭೀರ ಗಾಯಗಳಾಗಿವೆ.

ಉಗ್ರರ ಕಾರ್ಖಾನೆಯಾಗಿರುವ ಪಾಕಿಸ್ತಾನ ಭಾರತಕ್ಕೆ ಉಗ್ರರನ್ನು ರವಾನಿಸುವ ತನ್ನ ಚಾಳಿಯನ್ನು ಎಂದಿನಿಂತೆ ಮುಂದುವರೆಸಿದೆ. ಭಾರತದೊಳಗೆ ನುಸುಳಲು ಉಗ್ರರಿಗೆ ಪಾಕಿಸ್ತಾನವೇ ಸಹಾಯ ಮಾಡಿದೆ ಎಂಬುದಕ್ಕೆ ಸಾಕ್ಷ್ಯ ದೊರೆತಿದೆ.

ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಪಾಕಿಸ್ತಾನ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಲಿದೆ. ಇತ್ತೀಚೆಗಷ್ಟೇ ಹತ್ಯೆಯಾದ ನಾಲ್ವರು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕರು ಭಾರತಕ್ಕೆ ನುಸುಳಲು ಬಳಿಸಿದ್ದ ಸುರಂಗವನ್ನು ಭಾರತೀಯ ಸೇನಾಪಡೆಗಳು ಪತ್ತೆ ಹಚ್ಚಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+