ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಉಲ್ಬಣಗೊಂಡ ಹನಿ ಟ್ರ್ಯಾಪ್ ವಿವಾದ: ಬಜೆಟ್‌ನಲ್ಲಿ ವಾರ್ಷಿಕ 3,500 ಕೋಟಿ ಮೀಸಲು!

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜನವರಿ 04: ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ ಇದರ ನಡುವೆಯೇ ಹನಿ ಟ್ರ್ಯಾಪಿಂಗ್ ವಿಷಯ ಮತ್ತೊಮ್ಮೆ ಉಲ್ಬಣಗೊಂಡಿದೆ. ಈ ಬಾರಿ ಪಾಕಿಸ್ತಾನದ ಮಾಜಿ ಸೈನಿಕರ ಸಮಾಜದ ವಕ್ತಾರ ಮತ್ತು ನಿವೃತ್ತ ಸೇನಾ ಮೇಜರ್ ಆದಿಲ್ ರಾಜಾ, ಸೇನೆಯು ರಾಜಕಾರಣಿಗಳು ಸೇರಿದಂತೆ ಹಲವರನ್ನು ಹನಿ ಟ್ರ್ಯಾಪ್ ಮಾಡಲು ನಟಿಯರನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ನಿವೃತ್ತ ಸೇನಾ ಮೇಜರ್ ಆದಿಲ್ ರಾಜಾ ಅವರ ಈ ಆರೋಪಗಳನ್ನು ಸಜಲ್ ಅಲಿ, ಕೋಬ್ರಾ ಖಾನ್ ಮತ್ತು ಮೆಹ್ವಿಶ್ ಹಯಾತ್ ಎಂಬ ಮೂವರು ಪ್ರಮುಖ ನಟಿಯರು ನಿರಾಕರಿಸಿದ್ದಾರೆ. 2017 ರ ಹಿಂದಿ ಸಿನಿಮಾ ಮಾಮ್ ಚಿತ್ರದಲ್ಲಿ ಶ್ರೀದೇವಿ ಜೊತೆ ನಟಿಸಿದ್ದ ಸಜಲ್ ಅಲಿ, ದೇಶವು ನೈತಿಕವಾಗಿ ಅಧಃಪತನದತ್ತ ಸಾಗುತ್ತಿರುವುದು ದುರಾದೃಷ್ಟಕರ ಎಂದು ಹೇಳಿದ್ದಾರೆ.

Pakistan Economic Crisis :ಆರ್ಥಿಕ ದಿವಾಳಿಯತ್ತ ಪಾಕಿಸ್ತಾನ: ಪ್ಲಾಸ್ಟಿಕ್ ಚೀಲಗಳಲ್ಲಿ ಅಡುಗೆ ಅನಿಲ ತುಂಬಿಸಿಕೊಳ್ಳುತ್ತಿರುವ ಜನPakistan Economic Crisis :ಆರ್ಥಿಕ ದಿವಾಳಿಯತ್ತ ಪಾಕಿಸ್ತಾನ: ಪ್ಲಾಸ್ಟಿಕ್ ಚೀಲಗಳಲ್ಲಿ ಅಡುಗೆ ಅನಿಲ ತುಂಬಿಸಿಕೊಳ್ಳುತ್ತಿರುವ ಜನ

ನಿವೃತ್ತ ಸೇನಾ ಮೇಜರ್ ಆದಿಲ್ ರಾಜಾ ತನ್ನ ವಿಡಿಯೋದಲ್ಲಿ ಯಾವ ನಟಿಯರ ಹೆಸರನ್ನು ಹೇಳಿರಲಿಲ್ಲ. ಆದರೆ, ಅವರ ಮೊದಲ ಅಕ್ಷರಗಳನ್ನು ಹೇಳಿದ್ದರು. ನಟಿಯರು ಆರೋಪಗಳನ್ನು ನಿರಾಧಾರ ಎಂದು ನಿರಾಕರಿಸಿದ್ದರೂ, ಪಾಕಿಸ್ತಾನವು ಬಹಳಷ್ಟು ಹನಿ ಟ್ರ್ಯಾಪಿಂಗ್‌ನಲ್ಲಿ ತೊಡಗಿದೆ ಎಂಬುದು ಸತ್ಯ. ಇದನ್ನು ಭಾರತದ ವಿರುದ್ಧ ಹಲವು ಸಂದರ್ಭಗಳಲ್ಲಿ ಬಳಸಿಕೊಂಡಿದೆ. ಪಾಕಿಸ್ತಾನ ಸೇನೆಯು ಹನಿ ಟ್ರ್ಯಾಪ್ ಮಾಡಲು ಒಂದು ವಿಭಾಗವನ್ನು ಹೊಂದಿದೆ.

Pakistan Spends Rs 3,500 cr annum budget for honey trap module

*ಹನಿ ಟ್ರ್ಯಾಪ್‌ಗಾಗಿ ಮೀಸಲಾದ ಬಜೆಟ್ ವಿವರ*

2019 ರಲ್ಲಿ ಮಿಲಿಟರಿ ನರ್ಸಿಂಗ್ ಕಾರ್ಪ್ಸ್‌ನಲ್ಲಿ ಸೇನಾ ಕ್ಯಾಪ್ಟನ್ ಎಂದುಕೊಂಡಿದ್ದ ಅನಿಕಾ ಚೋಪ್ರಾ ಎಂಬ ಮಹಿಳೆ ತನ್ನ ವಿಭಾಗ ಅಡಿಯಲ್ಲಿ ಸುಮಾರು 50 ಯೋಧರನ್ನು ಹೊಂದಿದ್ದರು ಎಂದು ತಿಳಿದುಬಂದಿದೆ. ಆ ಮಹಿಳೆ ಪಾಕಿಸ್ತಾನಿ ಎಂದು ನಂತರ ತಿಳಿಯಿತು.

ಹನಿ ಟ್ರ್ಯಾಪಿಂಗ್ ನಡೆಸುವುದು ಅನೇಕ ಬೇಹುಗಾರಿಕಾ ಏಜೆನ್ಸಿಗಳ ಹಳೆಯ ಟ್ರಿಕ್ ಆಗಿದ್ದರೂ, ಭಾರತಕ್ಕೆ ಪಾಕಿಸ್ತಾನದಿಂದ ಕೆಡುಕಾಗುವ ಲಕ್ಷಣಗಳು ಹೆಚ್ಚು. ಇನ್ನು ಗಂಭೀರವಾದ ವಿಷಯವೆಂದರೇ 2019 ರವರೆಗೆ ಪಾಕಿಸ್ತಾನದಲ್ಲಿ ವಾರ್ಷಿಕವಾಗಿ 3,500 ಕೋಟಿ ರೂಪಾಯಿಗಳ ಹನಿ ಟ್ರ್ಯಾಪಿಂಗ್ ಬಜೆಟ್ ಅನ್ನು ನಿಗದಿಪಡಿಸಲಾಗಿದೆ ಎಂಬುದು.

ಐಎಸ್‌ಐ ಮತ್ತು ಪಾಕಿಸ್ತಾನದಿಂದ ನಿಯಂತ್ರಿಸಲ್ಪಡುವ ಹನಿ ಟ್ರ್ಯಾಪ್ ಮಾಡ್ಯೂಲ್ ಅನ್ನು ಫರೀದ್‌ಕೋಟ್‌ನಿಂದ ನಡೆಸಲಾಗುತ್ತಿದೆ. 2015 ರಿಂದ ವಾರ್ಷಿಕವಾಗಿ 3,500 ಕೋಟಿ ರೂಪಾಯಿಗಳ ಬಜೆಟ್ ಅನ್ನು ಇದಕ್ಕಾಗಿಯೇ ನಿಗದಿಪಡಿಸಲಾಗಿದೆ.

Pakistan Spends Rs 3,500 cr annum budget for honey trap module

ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಸಣ್ಣ ಪ್ರಮಾಣದಲ್ಲಿ ಇಂತಹ ಮಾಡ್ಯೂಲ್‌ಗಳನ್ನು ಸ್ಥಾಪಿಸಲು ಐಎಸ್‌ಐ ಯಶಸ್ವಿಯಾಗಿದೆ. ಇವುಗಳು ಪಾಕಿಸ್ತಾನದ ಫರೀದ್‌ಕೋಟ್‌ನಲ್ಲಿರುವ ತಮ್ಮ ಮೇಲಾಧಿಕಾರಿಗಳಿಗೆ ವರದಿ ಮಾಡುತ್ತವೆ ಎಂದು ಅಧಿಕಾರಿಯೊಬ್ಬರು ಒನ್‌ಇಂಡಿಯಾಗೆ ತಿಳಿಸಿದ್ದಾರೆ.

*ಬಲೆಗೆ ಬೀಳಿಸುವುದು ಹೇಗೆ*

ಒಮ್ಮೆ ಒಬ್ಬ ವ್ಯಕ್ತಿ ಈ ಬಲೆಗೆ ಬಿದ್ದರೇ, ಪಾಕಿಸ್ತಾನದ ಮಹಿಳೆ ನಗದು ಅಥವಾ ಬ್ಲ್ಯಾಕ್‌ಮೇಲ್ ಮೂಲಕ ಇಲ್ಲಿನ ಮಾಹಿತಿಯನ್ನು ಪಡೆಯುತ್ತಾಳೆ. ಅವರ ಗಾಳಕ್ಕೆ ಸಿಕ್ಕಿಬಿದ್ದ ವ್ಯಕ್ತಿಗೆ ಆತ ನೀಡುವ ಮಾಹಿತಿಯ ಆಧಾರದ ಮೇಲೆ 5 ರಿಂದ 10 ಲಕ್ಷ ರೂಪಾಯಿ ನೀಡಲಾಗುತ್ತದೆ.

2019 ರಲ್ಲಿ, ರೋಹ್ಟಕ್ ಪೊಲೀಸರು ಗೌರವ್ ಕುಮಾರ್ ಎಂಬುವವರನ್ನು ಬಂಧಿಸಿದರು. ಈತ ಸೇನೆಗೆ ಸೇರಲು ತರಬೇತಿ ಪಡೆಯುತ್ತಿದ್ದ ಅಭ್ಯರ್ರ್ಥಿಯಾಗಿದ್ದು, ಪ್ರತಿ ಬಾರಿ ಸೇನಾ ತರಬೇತಿ ಶಿಬಿರಕ್ಕೆ ಭೇಟಿ ನೀಡಿದಾಗ ಅಲ್ಲಿನ ಚಿತ್ರಗಳನ್ನು ತೆಗೆದುಕೊಂಡು ಕಳುಹಿಸುವಂತೆ ತಿಳಿಸಲಾಗಿತ್ತು. ತರಬೇತಿ ಶಿಬಿರಕ್ಕೆ 18 ಬಾರಿ ಭೇಟಿ ನೀಡಿ ಚಿತ್ರಗಳನ್ನು ಕ್ಲಿಕ್ಕಿಸಿ ಮಾಹಿತಿ ಹಂಚಿಕೊಂಡಿರುವುದು ಕೂಡ ತನಿಖೆಯಲ್ಲಿ ಪತ್ತೆಯಾಗಿದೆ.

English summary
Pakistan had an earmarked budget of Rs 3,500 cr annum for its honey trap module. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X