ಭಾರತದೊಂದಿಗೆ "ಕಾಶ್ಮೀರ ಸೇರಿ ಶಾಂತಿ ಮಾತುಕತೆ"ಗೆ ರೆಡಿ ಎಂದ ಪಾಕ್‌!

ಭಾರತದೊಂದಿಗೆ ಶಾಂತಿ ಮಾತುಕತೆಗೆ ಸಿದ್ಧವಾಗಿರುವುದಾಗಿ ಪಾಕಿಸ್ತಾನ ಹೇಳಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಇತ್ತೀಚೆಗೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಾದ ಮೇಲೆ ಪಾಕಿಸ್ತಾನವು ನಿಧಾನವಾಗಿ ಶಾಂತಿ ಒಪ್ಪಂದ ಮಾಡಿಕೊಳ್ಳುವುದಕ್ಕೆ ನಾವು ರೆಡಿ ಅಂತ ಹೇಳುತ್ತಿದೆ. ಸಿಂಧೂ ನದಿ ಒಪ್ಪಂದ ಹಾಗೂ ವಾಯು ಮಾರ್ಗ ನಿರ್ಬಂಧ ಸೇರಿದಂತೆ ವಿವಿಧ ವಿಚಾರಗಳು ಪಾಕಿಸ್ತಾನಕ್ಕೆ ಭಾರೀ ಹೊಡೆತವನ್ನು ಕೊಟ್ಟಿದೆ. ಹೀಗಾಗಿ ಪಾಕಿಸ್ತಾನವು ಇದೀಗ ಭಾರತದೊಂದಿಗೆ ಶಾಂತಿಯ ಮಂತ್ರ ಜಪಿಸುತ್ತಿದೆ. ನಾವು ನ್ಯೂಕ್ಲಿಯರ್ ಬಾಂಬ್ ಬಳಸಲಿದ್ದೇವೆ ಎಂದು ಹೇಳಿಕೊಂಡು ಬೆದರಿಕೆಯನ್ನೊಂಡಿದ್ದ ಪಾಕಿಸ್ತಾನವು ಇದೀಗ ಭಾರತದೊಂದಿಗೆ ಕಾಶ್ಮೀರವು ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಶಾಂತಿ ಮಾತುಕತೆಗೆ ಸಿದ್ಧವೆಂದು ಹೇಳಿದೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತವನ್ನು ಶಾಂತಿ ಮಾತುಕತೆಗೆ ಆಹ್ವಾನಿಸಿದ್ದಾರೆ. ಈ ಮೂಲಕ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷ ಹೊಸ ತಿರುವು ಪಡೆದುಕೊಂಡಿದೆ. ಕಳೆದ ಒಂದು ಒಂದು ತಿಂಗಳಿನಿಂದಲೂ ಭಾರತ ಹಾಗೂ ಪಾಕಿಸ್ತಾನದ ನಡುವೆ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಾರತೀಯರು ಹಾಗೂ ವಿದೇಶಿ ಪ್ರಜೆ ಸೇರಿ 26 ಜನರನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ ಮೇಲೆ ಎರಡೂ ದೇಶಗಳ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಭಾರೀ ಕ್ಷಿಪಣಿ ಹಾಗೂ ಡ್ರೋನ್‌ಗಳ ಹಾರಾಟ ನಡೆದಿತ್ತು. ಇದೀಗ ಕದನ ವಿರಾಮ ಘೋಷಣೆಯಾಗಿದ್ದು. ಕದನ ವಿರಾಮದ ಬೆನ್ನಲ್ಲೇ ಪಾಕಿಸ್ತಾನವು ಮಾತುಕತೆಗೆ ಮುಂದಾಗಿದೆ.

Pakistan says it is ready for peace talks including Kashmir with India

ಶಾಂತಿಗಾಗಿ ನಾವು ಮುಂದಿಡುವ ಷರತ್ತುಗಳಲ್ಲಿ ಕಾಶ್ಮೀರದ ಸಮಸ್ಯೆಯೂ ಒಳಗೊಂಡಿರಲಿದೆ ಎಂದು ಪಾಕ್‌ ಪ್ರಧಾನಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಷರತ್ತು ಎನ್ನುವ ಪದವನ್ನು ಬಳಸಿರುವುದು ಪಾಕಿಸ್ತಾನ ಯಾವ ಉದ್ದೇಶದಿಂದ ಶಾಂತಿ ಮಾತುಕತೆಗೆ ಆಹ್ವಾನಿಸುತ್ತಿದೆ ಎನ್ನುವ ಅನುಮಾನ ಶುರುವಾಗಿದೆ. ಪಂಜಾಬ್ ಪ್ರಾಂತ್ಯದ ಕಮ್ರಾ ವಾಯುನೆಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ಮಾತನ್ನೇಳಿದ್ದಾರೆ. ನಾವು ಅದರೊಂದಿಗೆ (ಭಾರತ) ಶಾಂತಿಗಾಗಿ ಮಾತನಾಡಲು ಸಿದ್ಧರಿದ್ದೇವೆ ಎಂದಿದ್ದಾರೆ.

ಪಾಕ್‌ನೊಂದಿಗೆ ಮಾತನಾಡಲು ಇರುವುದು ಪಾಕ್‌ ಆಕ್ರಮಿತ ಕಾಶ್ಮೀರ ಮಾತ್ರ

ಇನ್ನು ಭಾರತವೂ ಸಹ ಈಚೆಗೆ ಪಾಕಿಸ್ತಾನದೊಂದಿಗೆ ಮಾತನಾಡುವ ವಿಚಾರವಾಗಿ ಅತ್ಯಂತ ಸ್ಪಷ್ಟವಾಗಿ ಹೇಳಿದೆ. ಪಾಕಿಸ್ತಾನದೊಂದಿಗೆ ಮಾತನಾಡುವುದಕ್ಕೆ ಇನ್ನೇನೂ ಉಳಿದಿಲ್ಲ. ಬಾಕಿ ಉಳಿದಿರುವುದು ಪಾಕ್‌ ಆಕ್ರಮಿತ ಕಾಶ್ಮೀರ ವಿಚಾರ ಮಾತ್ರ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವಿಚಾರವಾಗಿ ಮಾತ್ರ ನಾವು ಆ ದೇಶದೊಂದಿಗೆ ಮಾತನಾಡಲು ಇಚ್ಛಿಸುತ್ತೇವೆ ಎಂದು ಭಾರತ ಸರ್ಕಾರವು ಸ್ಪಷ್ಟಪಡಿಸಿದೆ. ಹೀಗಾಗಿ, ಈ ವಿಚಾರವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನದ ಶಾಂತಿ ಮಾತುಕತೆಯ ಆಹ್ವಾನಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಈ ವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ನಂತರ ಭಾರತ ಹಾಗೂ ಪಾಕಿಸ್ತಾನದ DGMO ಹಂತದಲ್ಲಿ ಮಾತುಕತೆ ನಡೆದಿತ್ತು. ಇದಾದ ಮೇಲೆ ಕದನ ವಿರಾಮ ಘೋಷಣೆಯಾಗಿತ್ತು. ಆದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ನನ್ನ ಮಧ್ಯಸ್ಥಿತಿಕೆಯಿಂದಲೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಿಂತಿತ್ತು ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+