ಅಮೆರಿಕದಲ್ಲಿದ್ದ ಪಾಕ್ ನ ಹಬೀಬ್ ಬ್ಯಾಂಕ್ ಗೆ ಗೇಟ್ ಪಾಸ್

ನ್ಯೂಯಾರ್ಕ್, ಸೆಪ್ಟೆಂಬರ್ 8: ನ್ಯೂಯಾರ್ಕ್ ನಲ್ಲಿರುವ ಪಾಕಿಸ್ತಾನದ ಹಬೀಬ್ ಬ್ಯಾಂಕ್ ಅನ್ನು ಮುಚ್ಚುವಂತೆ ಅಮೆರಿಕ ಬ್ಯಾಂಕಿಂಗ್ ವ್ಯವಸ್ಥೆ ನೋಡಿಕೊಳ್ಳುವ ಪ್ರಾಧಿಕಾರದಿಂದ ಆದೇಶ ಹೊರಬಿದ್ದಿದೆ. ಕಳೆದ ನಲವತ್ತು ವರ್ಷಗಳಿಂದ ಈ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿತ್ತು. ಭಯೋತ್ಪಾದಕರಿಗೆ ಹಣಕಾಸು ನೆರವು ಮತ್ತು ಮನಿ ಲಾಂಡ್ರಿಂಗ್ ಆರೋಪದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪಾಕಿಸ್ತಾನದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಹಬೀಬ್ ಬ್ಯಾಂಕ್ ಪದೇಪದೇ ನಿಯಮಾವಳಿಗಳನ್ನು ಮೀರಿದೆ. ಭಯೋತ್ಪಾದನೆಗೆ ಉತ್ತೇಜನ ನೀಡಿದೆ, ಮನಿ ಲಾಂಡ್ರಿಂಗ್ ಮತ್ತು ಇತರ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಆರೋಪ ಇದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

Pakistan's biggest bank kicked out of US

ಹಬೀಬ್ ಬ್ಯಾಂಕ್ ಗೆ 225 ಮಿಲಿಯನ್ ಅಮೆರಿಕನ್ ಡಾಲರ್ ದಂಡವನ್ನು ಬ್ಯಾಂಕ್ ಗೆ ವಿಧಿಸಲಾಗಿದೆ. ಮೊದಲಿಗೆ 629.6 ಮಿಲಿಯನ್ ಅಮೆರಿಕನ್ ಡಾಲರ್ ದಂಡ ವಿಧಿಸುವ ಪ್ರಸ್ತಾವ ಇತ್ತು. 1978ರಿಂದ ಹಬೀಬ್ ಬ್ಯಾಂಕ್ ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿದೆ. 2006ರಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದ ಬಗ್ಗೆ ಗಮನಕ್ಕೆ ಬಂದಿತ್ತು.

ಹಬೀಬ್ ಬಾಂಕ್ ಬಿಲಿಯನ್ ಡಾಲರ್ ಗಳಷ್ಟು ವ್ಯವಹಾರವನ್ನು ಸೌದಿಯ ಖಾಸಗಿ ಬ್ಯಾಂಕ್ ಅಲ್ ರಜಿ ಬ್ಯಾಂಕ್ ನೊಂದಿಗೆ ಮಾಡಿದೆ. ವರದಿಗಳ ಪ್ರಕಾರ ಆ ಬ್ಯಾಂಕ್ ಗೆ ಅಲ್ ಕೈದಾ ಉಗ್ರ ಸಂಘಟನೆಯೊಂದಿಗೆ ನಂಟಿದೆ. ಮನಿ ಲಾಂಡ್ರಿಂಗ್ ಆಗಿಲ್ಲ ಅಥವಾ ಭಯೋತ್ಪಾದನೆಗೆ ಆ ಹಣ ಬಳಸಿಲ್ಲ ಎಂಬುದನ್ನು ಸಾಬೀತು ಪಡಿಸಲು ಹಬೀಬ್ ಬ್ಯಾಂಕ್ ವಿಫಲವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+