ಕರಾಚಿಯಲ್ಲಿ ಖವ್ವಾಲಿ ಗಾಯಕ ಅಮ್ಜದ್ ಸಬ್ರಿ ಕಗ್ಗೊಲೆ

Posted By:
Subscribe to Oneindia Kannada

ಕರಾಚಿ, ಜೂನ್ 22: ಪಾಕಿಸ್ತಾನದ ಜನಪ್ರಿಯ ಖವ್ವಾಲಿ ಗಾಯಕ ಅಮ್ಜದ್ ಸಬ್ರಿ ಅವರನ್ನು ಬುಧವಾರ ಮಧ್ಯಾಹ್ನ ಕರಾಚಿಯಲ್ಲಿ ಗುಂಡಿಟ್ಟು ದುಷ್ಕರ್ಮಿಗಳು ಕೊಂದು ಹಾಕಿದ್ದಾರೆ. ದಿವಂಗತ ಗುಲಾಬ್ ಫರೀದ್ ಸಬ್ರಿ ಅವರ ಪುತ್ರ ಅಮ್ಜದ್ ಅವರು ಲಿಯಾಖತಾಬಾದ್ ಪ್ರದೇಶದಲ್ಲಿ ಹಂತಕನ ಗುಂಡಿಗೆ ಬಲಿಯಾಗಿದಾರೆ.

ಲಿಯಾಖತಾಬಾದ್ ಪ್ರದೇಶದಲ್ಲಿ ಗೆಳೆಯರೊಡನೆ ಅಮ್ಜದ್ ಸಬ್ರಿ ಅವರು ಕಾರಿನಲ್ಲಿದ್ದಾಗ, ದುಷ್ಕರ್ಮಿಯೊಬ್ಬನು ಗುಂಡಿನ ಮಳೆಗೆರೆದಿದ್ದಾನೆ. ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಬ್ರಿ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು.

Pakistan: Renowned singer Amjad Sabri shot dead

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಸಬ್ರಿ ಅವರ ದೇಹದೊಳಗೆ ಮೂರು ಗುಂಡು ಹೊಕ್ಕಿತ್ತು ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.

ಬಾಲಿವುಡ್ ನ ಯಶಸ್ವಿ ಚಿತ್ರ ಭಜರಂಗಿ ಭಾಯಿಜಾನ್ ನ ಖವ್ವಾಲಿ ಭಾರ್ ದೊ ಜೋಲಿ ಹಾಡನ್ನು ಕದಿಯಲಾಗಿದೆ. ಯಾವುದೇ ಹಕ್ಕು ಸ್ವಾಮ್ಯತೆ ಪಡೆದುಕೊಂಡಿಲ್ಲ ಎಂದು ಸಲ್ಮಾನ್ ಖಾನ್ ಹಾಗೂ ಅವರ ತಂಡದ ವಿರುದ್ಧ ಸಬ್ರಿ ಅವರು ಕಿಡಿಕಾರಿದ್ದರು.


ಅಮ್ಜದ್ ಫರಿದ್ ಸಬ್ರಿ ಹಾಗೂ ಅವರ ಸೋದರ ತಲ್ಹಾ ಫರೀದ್ ಸಬ್ರಿ ಅವರು ಸಬ್ರಿ ಬ್ರದರ್ಸ್ ಎಂಬ ಹೆಸರಿನಲ್ಲಿ ಜನಪ್ರಿಯಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A Well-known singer in Pakistan was shot dead by unidentified gunmen in port city of Karachi on Wednesday.
Please Wait while comments are loading...