ಮೊದಲ ಡೋಸ್ ಲಸಿಕೆ ಪಡೆದ ಪಾಕ್ ರಾಷ್ಟ್ರಪತಿಗೆ ಕೊರೊನಾವೈರಸ್!
ಇಸ್ಲಮಾಬಾದ್, ಮಾರ್ಚ್ 29: ಕೊರೊನಾವೈರಸ್ ಸೋಂಕಿನ ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡ ಮರುದಿನವೇ ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿ ಅವರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ತಮಗೆ ಕೊರೊನಾವೈರಸ್ ಸೋಂಕು ತಗುಲಿರುವ ಬಗ್ಗೆ ಸ್ವತಃ ಆರಿಫ್ ಅಲ್ವಿ ಅವರೇ ಟ್ವೀಟ್ ಮಾಡಿದ್ದಾರೆ. ನಾನು ಕೊವಿಡ್-19 ಲಸಿಕೆಯನ್ನು ಹಾಕಿಸಿಕೊಂಡಿದ್ದು, ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ ಎಂದು ತಮ್ಮ ಆರೋಗ್ಯದ ಬಗ್ಗೆ ಬರೆದುಕೊಂಡಿದ್ದಾರೆ.
"ನನಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಿಂದ ಗೊತ್ತಾಗಿದೆ. ಕೊವಿಡ್-19 ಸೋಂಕಿತರ ಮೇಲೆ ಅಲ್ಲಾನ ಕೃಪೆ ಇರುತ್ತದೆ. ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡ ಸಂದರ್ಭದಲ್ಲಿ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುವ ಪ್ರಕ್ರಿಯೆ ಆರಂಭವಾಗುವುದಿಲ್ಲ. ಎರಡನೇ ಡೋಸ್ ಲಸಿಕೆ ನಂತರದಲ್ಲಿ ಈ ಕ್ರಿಯೆ ಶುರುವಾಗಲಿದೆ. ದಯವಿಟ್ಟು ಕೊರೊನಾವೈರಸ್ ಬಗ್ಗೆ ಎಲ್ಲರೂ ಜಾಗೃತರಾಗಿರಿ" ಎಂದು ರಾಷ್ಟ್ರಪತಿ ಆರಿಫ್ ಅಲ್ವಿ ಟ್ವೀಟ್ ಮಾಡಿದ್ದಾರೆ.

ಇಮ್ರಾನ್ ಖಾನ್ ಅವರಿಗೂ ಕೊರೊನಾವೈರಸ್:
ಇಮ್ರಾನ್ ಖಾನ್ ಅವರಿಗೂ ಕೊರೊನಾವೈರಸ್:
ಕಳೆದ ವಾರವಷ್ಟೇ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರಿಗೂ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ಕೊವಿಡ್-19 ಲಸಿಕೆ ಹಾಕಿಸಿಕೊಂಡ ನಂತರವೇ ಇಮ್ರಾನ್ ಖಾನ್ ಅವರಲ್ಲೂ ಸೋಂಕು ಕಾಣಿಸಿಕೊಂಡಿತ್ತು.












Click it and Unblock the Notifications