Imran Khan Kannada: ಪಾಕಿಸ್ತಾನದಲ್ಲಿ ಸುಪ್ರೀಂ ಆದೇಶಕ್ಕೂ ಬೆಲೆ ಇಲ್ಲ!
ಇಸ್ಲಾಮಾಬಾದ್: ಜೈಲು ಸೇರಿರುವ ಇಮ್ರಾನ್ ಖಾನ್‌ನ 1 ಗಂಟೆ ಒಳಗೆ ಸುಪ್ರೀಂಕೋರ್ಟ್‌ಗೆ ಕರೆತನ್ನಿ ಎಂದು ಆದೇಶ ನೀಡಿದ್ದರೂ, ಪಾಕಿ ಸೇನೆ ಮತ್ತು ಪೊಲೀಸರು ಆಟ ಆಡುತ್ತಿದ್ದಾರೆ. ಸುಪ್ರೀಂ ಡೆಡ್‌ಲೈನ್ ಮುಗಿದು 2 ಗಂಟೆ ಕಳೆದರೂ ಇಮ್ರಾನ್ ಖಾನ್ (Imran Khan) ಪತ್ತೆ ಇಲ್ಲ. ಈ ಮೂಲಕ ಪಾಕಿಸ್ತಾನದಲ್ಲಿ ಸುಪ್ರೀಂಕೋರ್ಟ್ ಆದೇಶಕ್ಕೂ ಬೆಲೆ ಇಲ್ಲ ಅನ್ನೋದು ಬಯಲಾಗಿದೆ.
ಅಂದಹಾಗೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ಕುರಿತು ಪಾಕ್ ಸುಪ್ರೀಂಕೋರ್ಟ್ ಮಧ್ಯಾಹ್ನ ಮಹತ್ವದ ತೀರ್ಪು ನೀಡಿತ್ತು. ಅದೇನೆಂದರೆ ಇಮ್ರಾನ್ ಬಂಧನ ಕಾನೂನು ಬಾಹೀರ ಎನ್ನುವ ಮೂಲಕ ಪಾಕಿಸ್ತಾನ ಸೇನೆಗೆ ಪರೋಕ್ಷವಾಗಿ ಬೆವರಿಳಿಸಿ, 1 ಗಂಟೆ ಒಳಗೆ ಸುಪ್ರೀಂಕೋರ್ಟ್ ಎದುರು ಇಮ್ರಾನ್ ಹಾಜರುಪಡಿಸಲು ಆದೇಶ ನೀಡಿತ್ತು. ಹೀಗೆ ಸುಪ್ರೀಂಕೋರ್ಟ್ ಆದೇಶ ನೀಡಿ 3 ಗಂಟೆ ಕಳೆದರೂ ಇನ್ನೂ ಇಮ್ರಾನ್ ಪತ್ತೆಯಾಗಿಲ್ಲ. ಈ ಘಟನೆ ಪಾಕಿಸ್ತಾನದ ಪರಿಸ್ಥಿತಿಯನ್ನ ಜಗತ್ತಿಗೇ ತೋರಿಸುತ್ತಿದೆ.

ಬಿಡುಗಡೆ ಆಗುತ್ತಾರಾ ಇಮ್ರಾನ್ ಖಾನ್?
ಈಗಾಗಲೇ ಪಾಕಿಸ್ತಾನದಲ್ಲಿ ಇಮ್ರಾನ್ ಬೆಂಬಲಿಗರು ಉಗ್ರ ಪ್ರತಿಭಟನೆ ಆರಂಭಿಸಿ ಹಿಂಸೆಗೆ ಇಳಿದಿದ್ದಾರೆ. ಆದರೆ ಹಿಂಸೆ ನಿಯಂತ್ರಿಸಲು ಆಗದ ಪಾಕ್ ಸೇನೆ ಪರದಾಡುತ್ತಿದೆ. ಈ ಕಾರಣಕ್ಕೆ ಕಂಡಲ್ಲಿ ಗುಂಡು ಹೊಡೆಯುತ್ತಿದೆ. ಭೀಕರ ಹಿಂಸಾಚಾರದಲ್ಲಿ 10 ಜನ ಮೃತಪಟ್ಟರೂ ಪ್ರತಿಭಟನೆ ಹಿಡಿತಕ್ಕೆ ಸಿಗುತ್ತಿಲ್ಲ. ಇದೇ ಸಂದರ್ಭದಲ್ಲಿ ಇಮ್ರಾನ್ ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ, ಮಹತ್ವದ ತೀರ್ಪು ನೀಡಿದೆ. ಇಮ್ರಾನ್ ಖಾನ್ ಬಿಡುಗಡೆಗೆ ಕೌಂಟ್‌ಡೌನ್ ಶುರುವಾದಂತಾಗಿದೆ.
ಪಾಕಿಸ್ತಾನ ಸುಪ್ರೀಂಕೋರ್ಟ್ ಹೇಳಿದ್ದೇನು?
2 ದಿನದ ಹಿಂದೆ ವಿಚಾರಣೆಗೆ ಅಂತಾ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಹಾಜರಾಗಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಬಂಧನವಾಗಿತ್ತು. ಪಾಕಿಸ್ತಾನಿ ಅರೆಸೈನಿಕ ಪಡೆ ಇಮ್ರಾನ್ ಖಾನ್ ಅವರನ್ನ ಅರೆಸ್ಟ್ ಮಾಡಿತ್ತು. ಇದು ಪಾಕಿಸ್ತಾನದ ನೆಮ್ಮದಿ ಕೆಡಿಸಿತ್ತು. ಅದರಲ್ಲೂ ಇಮ್ರಾನ್ ಅವರನ್ನ ಬಂಧಿಸಿದ್ದ ರೀತಿ ಎಲ್ಲರನ್ನೂ ರೊಚ್ಚಿಗೆಬ್ಬಿಸಿದೆ. ಮತ್ತೊಂದ್ಕಡೆ ಇಮ್ರಾನ್ ಬಂಧನದ ಬಗ್ಗೆ ನಿನ್ನೆ ಇಸ್ಲಾಮಾಬಾದ್ ಹೈಕೋರ್ಟ್ ತೀರ್ಪು ನೀಡಿ ಇಮ್ರಾನ್ ಬಂಧನ ಸರಿಯಾಗಿದೆ ಎಂದಿತ್ತು. ಆದರೆ ಈಗ ಪಾಕಿಸ್ತಾನ ಸುಪ್ರೀಂಕೋರ್ಟ್ ಉಲ್ಟಾ ತೀರ್ಪು ನೀಡಿ, ಬಂಧನ ಕಾನೂನು ಬಾಹೀರ ಎಂದಿದೆ.
ಏನಿದು ಇಮ್ರಾನ್ ವಿರುದ್ಧದ ಕೇಸ್?
ಅಷ್ಟಕ್ಕೂ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಅಧ್ಯಕ್ಷ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿಯೂ ಆದ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲಿಂಗ್ ಹಗರಣವಿದೆ. ಈ ಕೇಸ್ ಸಂಬಂಧ ಈಗ ಇಮ್ರಾನ್ ಖಾನ್ ಜೈಲು ಹಕ್ಕಿಯಾಗಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ವಶದಲ್ಲಿರುವ ಇಮ್ರಾನ್ ಖಾನ್ ವಿಚಾರಣೆ ಕೂಡ ಆರಂಭವಾಗಿದೆ. ಆದರೆ ಇಮ್ರಾನ್ ಬೆಂಬಲಿಗರು ಈ ಆರೋಪ ಅಲ್ಲಗಳೆಯುತ್ತಿದ್ದಾರೆ.

ಇಮ್ರಾನ್ ಜೀವಕ್ಕೆ ಅಪಾಯ?
ಜೈಲು ಸೇರಿರುವ ಇಮ್ರಾನ್ ಖಾನ್ ಜೀವಂತವಾಗಿ ಹೊರಗೆ ಬರ್ತಾರಾ? ಇಮ್ರಾನ್ ಖಾನ್ ಕಥೆ ಮುಂದೇನು? ಹೀಗೆ ಪಾಕಿಸ್ತಾನ ಮಾಜಿ ಪಿಎಂ ಇಮ್ರಾನ್ ಖಾನ್ ಅವರ ಅಭಿಮಾನಿಗಳು ಬೆಂಬಲಿಗರು ಭಯದಲ್ಲೇ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಉತ್ತರ ಹೇಳುವ ಮುಖಗಳು ಮಾತ್ರ ಕಾಣುತ್ತಲೇ ಇಲ್ಲ. ಈ ನಡುವೆ ವಿಚಾರಣೆಗೆ ಬಂದ ಇಮ್ರಾನ್ ಖಾನ್ ಅವರನ್ನ ಪಾಕಿಸ್ತಾನದ ಅರೆಸೇನಾ ಪಡೆ ಬಂಧಿಸಿದ್ದು ಯಾಕೆ? ಇದು ಹೇಗೆ ಸಾಧ್ಯ? ಎಂಬ ಪ್ರಶ್ನೆ ತೀವ್ರವಾಗಿದೆ.
ಒಟ್ನಲ್ಲಿ ಪಾಕಿಸ್ತಾನದಲ್ಲಿ ಕಾನೂನು ಸುವ್ಯವಸ್ಥೆ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ಈ ಘಟನೆಯಿಂದ ಮತ್ತೆ ಪ್ರೂವ್ ಆಗಿದೆ. ದೇಶದ ಅತ್ಯುನ್ನತ ಕೋರ್ಟ್ ನೀಡಿರುವ ಆದೇಶವನ್ನೇ ಅಲ್ಲಿನ ಪೊಲೀಸರು & ಸೇನೆ ಪಾಲಿಸುತ್ತಿಲ್ಲ ಎಂದಾದರೆ, ಇನ್ಯಾರಿಗೆ ಬೆಲೆ ಸಿಗುತ್ತೆ? ಹೀಗಾಗಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.












Click it and Unblock the Notifications