• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೆ ಕಂಡಿತಾ ಹಾರುವ ತಟ್ಟೆ? ಪಾಕಿಸ್ತಾನಿ ಪೈಲಟ್ ಸೆರೆ ಹಿಡಿದ ದೃಶ್ಯ ವೈರಲ್

|

ಇಸ್ಲಾಮಾಬಾದ್, ಜನವರಿ 28: ಹಾರುವ ತಟ್ಟೆ ಬಗೆಗಿನ ಕುತೂಹಲ ಇಂದು ನಿನ್ನೆಯದ್ದಲ್ಲ. ಶತಮಾನಗಳಿಂದಲೂ ಇದರ ಬಗ್ಗೆ ಜಿಜ್ಞಾಸೆ ಇದ್ದೇ ಇದೆ. ಹಾರುವ ತಟ್ಟೆ ಇದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲದಿದ್ದರೂ ಆಗಾಗ ಆಕಾಶದಲ್ಲಿ ಗೋಚರಿಸುವ ನಿಗೂಢ ವಸ್ತುಗಳು ಮತ್ತೆ ಮತ್ತೆ ಕುತೂಹಲ ಕೆಣಕುತ್ತಿರುತ್ತವೆ.

ಈಚೆಗೂ ಇಂಥದ್ದೊಂದು ಸಂಗತಿ ಸುದ್ದಿ ಮಾಡಿದೆ. ಪಾಕಿಸ್ತಾನ ಮೂಲದ ಪೈಲಟ್ ಒಬ್ಬರಿಗೆ ವಿಮಾನ ಹಾರಾಟದ ವೇಳೆ ಆಕಾಶದಲ್ಲಿ ಹಾರುವ ತಟ್ಟೆಯಂಥ ವಸ್ತುವೊಂದು ಕಂಡುಬಂದಿದೆ. ಲಾಹೋರ್ ನಿಂದ ಕರಾಚಿಗೆ ಏರ್ ಬಸ್ A-320 ವಿಮಾನದಲ್ಲಿ ರಾಹಿಮ್ ಯಾರ್ ಖಾನ್ ಪ್ರದೇಶದ ಬಳಿ ತೆರಳುತ್ತಿದ್ದ ಸಂದರ್ಭ ಈ ನಿಗೂಢ ವಸ್ತು ಕಂಡಿದ್ದಾಗಿ ಪೈಲಟ್ ಮಾಹಿತಿ ನೀಡಿದ್ದಾರೆ. ಅದರ ವಿಡಿಯೋ ಕೂಡ ಮಾಡಿರುವುದಾಗಿ ತಿಳಿಸಿದ್ದಾರೆ.

ಅಮೆರಿಕ: ಮತ್ತೆ ಕುತೂಹಲ ಸೃಷ್ಟಿಸಿದ ಹಾರುವ ತಟ್ಟೆಗಳು ಅಮೆರಿಕ: ಮತ್ತೆ ಕುತೂಹಲ ಸೃಷ್ಟಿಸಿದ ಹಾರುವ ತಟ್ಟೆಗಳು

"ಸೂರ್ಯನ ಪ್ರಖರ ಕಿರಣದ ಹೊರತಾಗಿಯೂ ಈ ಹಾರುವ ತಟ್ಟೆ ತೀಕ್ಷ್ಣವಾಗಿ ಹೊಳೆಯುತ್ತಿತ್ತು. ದಿನದ ಸಮಯದಲ್ಲಿಯೂ ಈ ರೀತಿ ಹೊಳೆಯುವ ವಸ್ತು ಕಂಡಿದ್ದು ಅಚ್ಚರಿ ಎನಿಸಿತ್ತು" ಎಂದು ಪೈಲಟ್ ಹೇಳಿಕೊಂಡಿದ್ದಾರೆ. ಇದು ಗ್ರಹ ಎಂದು ಹೇಳಲು ಆಗುವುದಿಲ್ಲ. ಆದರೆ ಕೃತಕ ಗ್ರಹ ಆಗಿರಬಹುದು ಎಂದು ಅಂದಾಜಿಸಿದ್ದಾರೆ. ಪೈಲಟ್ ಹೊರತಾಗಿಯೂ ರಾಹೀಮ್ ಯಾರ್ ಖಾನ್ ಸ್ಥಳೀಯರಿಗೆ ಇದು ಕಂಡಿದ್ದು, ವಿಡಿಯೋ ಮೂಲಕ ದೃಶ್ಯವನ್ನು ಸೆರೆಹಿಡಿದಿದ್ದಾರೆ.

ಜನವರಿ 23ರಂದು ಈ ನಿಗೂಢ ವಸ್ತು ಕಂಡುಬಂದಿದ್ದು, ಸಂಜೆ 4 ಗಂಟೆ ಸುಮಾರಿಗೆ ಗೋಚರಿಸಿದೆ. ತಕ್ಷಣವೇ ಪೈಲಟ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಆದರೆ ಇದರ ಬಗ್ಗೆ ಈಗಲೇ ತೀರ್ಮಾನಕ್ಕೆ ಬರುವುದು ಕಷ್ಟ. ಇದು ಏನೆಂದು ಈಗಲೇ ಅಂದಾಜಿಸುವುದು ಆಗುವುದಿಲ್ಲ ಎಂದು ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್‌ ವಕ್ತಾರ ಮಾಹಿತಿ ನೀಡಿದ್ದಾರೆ.

English summary
Pakistani pilot has spotted a very shiny unidentified flying object (ufo) in sky on january 23,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X