ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದು: ಅಮೆರಿಕ ಅಧ್ಯಕ್ಷ ಜೋ ಬಿಡೆನ್

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್‌ 15: ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ಡೆಮಾಕ್ರಟಿಕ್ ಕಾಂಗ್ರೆಸ್‌ನಲ್‌ ಕ್ಯಾಂಪೇನ್ ಕಮಿಟಿ ಸಮಾರಂಭದಲ್ಲಿ ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.

ಪಾಕಿಸ್ತಾನದ ರಾಜಕೀಯ ನಾಯಕರು ಹಾಗೂ ಸೈನ್ಯದ ಮುಖ್ಯಸ್ಥರ ನಡುವೆ ಯಾವುದೇ ಒಗ್ಗಟ್ಟಿಲ್ಲ. ಆದರೆ, ಆ ದೇಶವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಇದು ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಬಿಡೆನ್‌ ಹೇಳಿದ್ದಾರೆ.

Pakistan One Of The Most Dangerous Nations US President Joe Biden

ಅಮೆರಿಕ ಜೊತೆಗಿನ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಯತ್ನಿಸುತ್ತಿದ್ದಾರೆ. ಆದರೆ, ಬಿಡೆನ್‌ ಹೇಳಿಕೆಗಳಿಂದ ಷರೀಫ್‌ ಅವರ ಯತ್ನಕ್ಕೆ ಹಿನ್ನಡೆಯಾಗಿದೆ.

ಇದೇ ಸಂದರ್ಭದಲ್ಲಿ ಚೀನಾ ಹಾಗೂ ರಷ್ಯಾ ದೇಶಗಳ ನೀತಿಗಳನ್ನೂ ಅವರು ಟೀಕಿಸಿದ್ದಾರೆ.

ಚೀನಾ ಅಧ್ಯಕ್ಷರ ವಿರುದ್ಧ ಕಿಡಿಕಾರಿರುವ ಬಿಡೆನ್‌, 'ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ವ್ಯಕ್ತಿತ್ವದಲ್ಲಿ ಆಳವಾದ ಸಮಸ್ಯೆಗಳಿವೆ. ಅವರು ತಮಗೆ ಬೇಕಿರುವುದನ್ನಷ್ಟೇ ಅರ್ಥೈಸಿಕೊಳ್ಳುತ್ತಾರೆ. ಅದರಂತೆಯೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸಹ ಇದ್ದಾರೆ. ಅವರನ್ನು ನಾವು ಹೇಗೆ ನಿಯಂತ್ರಿಸಬಹುದು ಎಂಬುದರ ಬಗ್ಗೆ ನಾನು ಯೋಚಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.

21 ನೇ ಶತಮಾನದ ಎರಡನೇ ತ್ರೈಮಾಸಿಕದಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ತನ್ನ ಕ್ರಿಯಾಶೀಲ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಲು ಅಮೆರಿಕಕ್ಕೆ ಅಗಾಧವಾದ ಅವಕಾಶಗಳಿವೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಜಗತ್ತಿನಲ್ಲಿ ಹಲವಾರು ಬೆಳವಣಿಗೆಗಳು ನಡೆಯುತ್ತಿರುವುದು ನಿಜ. ಆದರೂ, ತನ್ನ ಕ್ರಿಯಾಶೀಲತೆಯನ್ನು ಬದಲಿಸಿಕೊಳ್ಳಲು ಅಮೆರಿಕಕ್ಕೆ ಅವಕಾಶಗಳಿವೆ ಎಂದು ಹೇಳಿದ್ದಾರೆ.

ಬಿಡೆನ್‌ ಅವರ ಈ ಹೇಳಿಕೆಗಳನ್ನು ಶ್ವೇತಭವನದ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ ನೀತಿ ಕುರಿತ ದಾಖಲೆಗಳು ಬಿಡುಗಡೆಯಾದ ಎರಡು ದಿನಗಳ ಬಳಿಕ ಬಿಡೆನ್‌ ಈ ಹೇಳಿಕೆ ನೀಡಿದ್ದಾರೆ.

ಚೀನಾ ಹಾಗೂ ರಷ್ಯಾ ಒಡ್ಡುತ್ತಿರುವ ಸವಾಲು ಮತ್ತು ಬೆದರಿಕೆಗಳ ಕುರಿತು ಈ ದಾಖಲೆಗಳಲ್ಲಿ ಒತ್ತಿ ಹೇಳಲಾಗಿದೆ. ಚೀನಾ ಮತ್ತು ರಷ್ಯಾಗಳ ನಡುವೆ ಉತ್ತಮ ಬಾಂಧವ್ಯವಿದೆ. ಇದು ಅಮೆರಿಕಕ್ಕೆ ಭಿನ್ನ ಸವಾಲವನ್ನು ಒಡ್ಡಲಿದೆ ಎಂದು ತಿಳಿಸಲಾಗಿದೆ.

ಉಕ್ರೇನ್‌ ವಿರುದ್ಧ ರಷ್ಯಾ ಸಾರಿರುವ ಯುದ್ಧವನ್ನು ಉಲ್ಲೇಖಿಸಿರುವ ಅಮೆರಿಕ, ರಷ್ಯಾದ ಸಾಮ್ರಾಜ್ಯಶಾಹಿ ನೀತಿಯ ಕುರಿತು ಬೆಳಕು ಚೆಲ್ಲಿದೆ. ಪುಟಿನ್‌ ಅವರು ಅಪಾಯಕಾರಿ ವ್ಯಕ್ತಿ. ಜಗತ್ತಿಗೆ ಸಮಸ್ಯೆ ತಂದಿಡುತ್ತಿದ್ದಾರೆ. ಕಮ್ಯುನಿಷ್ಟರ ಆಳ್ವಿಕೆಯ ಚೀನಾ ರಷ್ಯಾದ ಬೆಂಬಲಕ್ಕೆ ನಿಂತಿದೆ ಎಂದು ಒತ್ತಿ ಹೇಳಲಾಗಿದೆ.

ಅಂತ್ಯವಾಗದ ಉಕ್ರೇನ್‌- ರಷ್ಯಾ ಯುದ್ಧ

ಉಕ್ರೇನ್‌ ಹಾಗೂ ರಷ್ಯಾ ನಡುವಿನ ಯುದ್ಧ ಶುರುವಾಗಿ ತಿಂಗಳುಗಳೇ ಕಳೆದಿವೆ. ಜಗತ್ತಿನ ಹಲವು ರಾಷ್ಟ್ರಗಳ ವಿರೋಧದ ನಡುವೆಯೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಯುದ್ಧ ಮುಗಿಸುವ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಉಕ್ರೇನ್‌ಗೆ ಬೆಂಬಲವಾಗಿ ಯುರೋಪ್‌ ರಾಷ್ಟ್ರಗಳು ಹಾಗೂ ಅಮೆರಿಕ ನಿಂತಿವೆ.

ಯುದ್ಧದಿಂದ ಸಂಕಷ್ಟಕ್ಕೆ ಸಿಲುಕಿರುವ ಉಕ್ರೇನ್‌ಗೆ ಸುಮಾರು ₹5,975 ಕೋಟಿಗೂ ಅಧಿಕ ಮೊತ್ತದ ಸಹಾಯವನ್ನು ನೀಡಿದೆ. ಯುದ್ಧ ಉಪಕರಣಗಳು ಸೇರಿದಂತೆ ಮೂಲಭೂತ ಅಗತ್ಯಗಳ ವ್ಯವಸ್ಥೆಯನ್ನು ಅಮೆರಿಕ ನೀಡಿದೆ. ಉಕ್ರೇನ್‌ಗೆ ಬೇಕಿರುವ ಅಗತ್ಯ ನೆರವನ್ನು ಅಮೆರಿಕ ಒದಗಿಸಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ತಿಳಿಸಿದ್ದಾರೆ.

English summary
US President Joe Biden has said that Pakistan, which has nuclear weapons, is the most dangerous country in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X