ಕುಲಭೂಷಣ್ ಜಾಧವ್ ಭೇಟಿ ಮಾಡಲು ಪತ್ನಿಗೆ ಅವಕಾಶ ನೀಡಿದ ಪಾಕ್

Posted By:
Subscribe to Oneindia Kannada

ನವದೆಹಲಿ, ನವೆಂಬರ್ 10: ಭಾರತದ ಹಲವು ತಿಂಗಳ ರಾಜತಾಂತ್ರಿಕ ಪ್ರಯತ್ನದ ನಂತರ ಪಾಕಿಸ್ತಾನ ಸರಕಾರವು ಅಲ್ಲಿ ಬಂದಿಯಾಗಿರುವ ಕುಲಭೂಷಣ್ ಜಾಧವ್ ರನ್ನು ಭೇಟಿ ಮಾಡಲು ಅವರ ಪತ್ನಿಗೆ ಅವಕಾಶ ನೀಡಿದೆ. ಮಾನವೀಯತೆಯ ಆಧಾರದಲ್ಲಿ ಈ ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಾಧವ್ ಗಲ್ಲು ಶಿಕ್ಷೆಗೆ ತಡೆ; ಅಂತಾರಾಷ್ಟ್ರೀಯ ಕೋರ್ಟ್ ಐತಿಹಾಸಿಕ ತೀರ್ಪು

ಕಮ್ಯಾಂಡರ್ ಕುಲಭೂಷಣ್ ಜಾಧವ್ ರನ್ನು ಭೇಟಿ ಮಾಡಲು ಅವರ ಪತ್ನಿಗೆ ಅವಕಾಶ ಮಾಡಿಕೊಡಲು ಪಾಕಿಸ್ತಾನ ಸರಕಾರ ನಿರ್ಧರಿಸಿದೆ. ಅದೂ ಮಾನವೀಯತೆಯ ನೆಲೆಯಲ್ಲಿ ಈ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಲಾಗಿದೆ. ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈ ಕಮಿಷನ್ ಗೆ ಶುಕ್ರವಾರ ಈ ಬಗ್ಗೆ ಪತ್ರವೊಂದು ತಲುಪಿದೆ.

Kulbhushan Jadhav

ಆದರೆ, ಕುಲಭೂಷಣ್ ಜಾಧವ್ ಭಾರತದ ಗೂಢಚಾರ ಸಂಸ್ಥೆ 'ರಾ' ಏಜೆಂಟಲ್ಲ ಎಂಬುದನ್ನು ಒಪ್ಪಲು ಈಗಲೂ ಪಾಕಿಸ್ತಾನ ಸಿದ್ಧವಿಲ್ಲ. ತನ್ನ ಪ್ರಕಟಣೆಯಲ್ಲಿ ಕೂಡ ಕುಲಭೂಷಣ್ ಜಾಧವ್ ರನ್ನು ಪಾಕಿಸ್ತಾನದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಭಾರತ ಕಳುಹಿಸಿದ್ದ ಗೂಢಚಾರ ಅಂತಲೇ ಕರೆದಿದೆ.

ಕುಲಭೂಷಣ್ ಜಾಧವ್ ಭಾರತ ನೌಕಾ ಪಡೆಯ ನಿವೃತ್ತ ಅಧಿಕಾರಿ. ಅವರನ್ನು ಪಾಕಿಸ್ತಾನವು ಕಳೆದ ವರ್ಷ ಮಾರ್ಚ್ ನಲ್ಲಿ ವಿಧ್ವಂಸಕ ಕೃತ್ಯದ ಸಂಚು ನಡೆಸಿದ ಆರೋಪದಲ್ಲಿ ಬಂಧಿಸಿತ್ತು. ಈ ವರ್ಷದ ಏಪ್ರಿಲ್ ನಲ್ಲಿ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು. ಆ ಕ್ರಮವನ್ನು ವಿರೋಧಿಸಿ, ಭಾರತ ಅಂತರರಾಷ್ಟ್ರೀಯ ಕೋರ್ಟ್ ಮೆಟ್ಟಿಲೇರಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After months of diplomatic deadlock, the Pakistan government has offered a meeting between imprisoned Indian national Kulbhushan Jadhav and his wife on humanitarian grounds.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ