• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಎಸ್ಐ ಕೈಗೊಂಬೆಯೇ ತಾಲಿಬಾನ್?:ಅಫ್ಘಾನಿಸ್ತಾನದಲ್ಲಿ ಕಾಣಿಸಿಕೊಂಡ ಪಾಕ್ ಹೆಲಿಕಾಪ್ಟರ್!

|
Google Oneindia Kannada News

ಕಾಬೂಲ್, ಸಪ್ಟೆಂಬರ್ 6: ತಾಲಿಬಾನ್ ಸಂಘಟನೆ ಮತ್ತು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ ನಡುವಿನ ಸಂಘರ್ಷಕ್ಕೆ ಪಂಜ್ ಶೀರ್ ಕಣಿವೆ ಸಾಕ್ಷಿಯಾಗುತ್ತಿದೆ. ಅದೇ ಕಣಿವೆಯ ಹೆಲಿಪ್ಯಾಡ್ ವೊಂದರಲ್ಲಿ ಪಾಕಿಸ್ತಾನ ಸೇನೆಯ ಹೆಲಿಕಾಪ್ಟರ್ ಕಾಣಿಸಿಕೊಂಡಿದೆ.

ರೆಸಿಸ್ಟೆನ್ಸ್ ಮೂಲಗಳಿಂದ ಬಿಡುಗಡೆಯಾದ ದೃಶ್ಯಗಳಲ್ಲಿ, ಕಣಿವೆಯ ಪರ್ವತವನ್ನು ಮರೆ ಮಾಚುವ ಹೆಲಿಪ್ಯಾಡ್‌ನಲ್ಲಿ ಪಾಕಿಸ್ತಾನ ನಿರ್ವಹಿಸುವ ರಷ್ಯಾದ ಮಿ -17 ಹೆಲಿಕಾಪ್ಟರ್ ಪತ್ತೆಯಾಗಿದೆ. ಸೋಮವಾರ ಬೆಳಗ್ಗೆ ಪಾಕ್ ಹೆಲಿಕಾಪ್ಟರ್ ಈ ಪ್ರದೇಶದಲ್ಲಿ ಕಂಡು ಬಂದಿದೆ. ಪಾಕಿಸ್ತಾನವು 40 ಎಂಐ -17 ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತಿದೆ.

'ಪಂಜ್‌ಶೀರ್‌ ಸಂಪೂರ್ಣವಾಗಿ ತನ್ನ ವಶದಲ್ಲಿದೆ' ಎಂದ ತಾಲಿಬಾನ್‌'ಪಂಜ್‌ಶೀರ್‌ ಸಂಪೂರ್ಣವಾಗಿ ತನ್ನ ವಶದಲ್ಲಿದೆ' ಎಂದ ತಾಲಿಬಾನ್‌

ಪಂಜ್ ಶೀರ್ ಕಣಿವೆಯನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದೇವೆ ಎಂದು ತಾಲಿಬಾನ್ ಈಗಾಗಲೇ ಹೇಳಿಕೊಂಡಿದೆ. ಅದಾಗ್ಯೂ, ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ ತಾಲಿಬಾನ್ ಹೇಳಿಕೆಯನ್ನು ತಳ್ಳಿ ಹಾಕಿದೆ. ಪಂಜ್ ಶೀರ್ ಕಣಿವೆಯಲ್ಲಿ ತಾಲಿಬಾನಿಗಳ ಜೊತೆಗಿನ ಸಂಘರ್ಷ ಮುಂದುವರಿಸಲಾಗುತ್ತಿದೆ ಎಂದು ನ್ಯಾಷನಲ್ ರೆಸಿಸ್ಟನ್ಸ್ ಫ್ರಂಟ್ ಆಫ್ ಅಫ್ಘಾನ್ ಸ್ಪಷ್ಟಪಡಿಸಿದೆ.

ಶನಿವಾರವೇ ಅಫ್ಘಾನಿಸ್ತಾನಕ್ಕೆ ಹೋಗಿರುವ ಐಎಸ್ಐ ಮುಖ್ಯಸ್ಥ

ಶನಿವಾರವೇ ಅಫ್ಘಾನಿಸ್ತಾನಕ್ಕೆ ಹೋಗಿರುವ ಐಎಸ್ಐ ಮುಖ್ಯಸ್ಥ

ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಸೃಷ್ಟಿಯಾಗಿರುವ ಬಿಕ್ಕಟ್ಟು ಶಮನಕ್ಕಾಗಿ ಪಾಕಿಸ್ತಾನ ಗುಪ್ತಚರ ಇಲಾಖೆ(ಐಎಸ್ಐ) ಮುಖ್ಯಸ್ಥ ಫೈಜ್ ಹಮೀದ್, ಸೆಪ್ಟೆಂಬರ್ 04ರಂದೇ ಕಾಬೂಲ್ ನಗರಕ್ಕೆ ಭೇಟಿ ನೀಡಿದ್ದಾರೆ. ಅಫ್ಘಾನಿಸ್ತಾನದ ಮುಂದಿನ ಸರ್ಕಾರದಲ್ಲಿ ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬಾರಾದರ್ ಮತ್ತು ಹಕ್ಕಾನಿ ನಡುವೆ ಯಾರು ಸರ್ವೋಚ್ಛ ನಾಯಕರು ಎಂಬ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.

ತಾಲಿಬಾನ್ ಸಂಘಟನೆ ಐಎಸ್ಐ ಕೈಗೊಂಬೆ

ತಾಲಿಬಾನ್ ಸಂಘಟನೆ ಐಎಸ್ಐ ಕೈಗೊಂಬೆ

ಪಾಕಿಸ್ತಾನ ಗುಪ್ತಚರ ಇಲಾಖೆ ಮುಖ್ಯಸ್ಥ ಫೈಜ್ ಹಮೀದ್ ತಾಲಿಬಾನ್ ಸರ್ಕಾರದ ರಚನೆ ಬಗ್ಗೆ ಗೊಂದಲ ನಿವಾರಣೆಗೆ ನೇರವಾಗಿ ಪಾಲ್ಗೊಳ್ಳುತ್ತಾರೆ. ಅಫ್ಘಾನಿಸ್ತಾನದಕ್ಕೆ ತುರ್ತಾಗಿ ಭೇಟಿ ನೀಡುತ್ತಾರೆ ಅಂದರೆ ತಾಲಿಬಾನ್ ಐಎಸ್ಐ ಕೈಗೊಂಬೆಯಂತೆ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ತಾಲಿಬಾನ್ ಅನ್ನು ಏಕೆ ಪ್ರಶ್ನೆ ಮಾಡಬೇಕು ಎಂದು ಯುಎಸ್ ನೀತಿ ನಿರೂಪಕ ಮೈಕೆಲ್ ರೂಬಿನ್ ಹೇಳಿದ್ದಾರೆ.

ಪಂಜ್ ಶೀರ್ ಕಣಿವೆಯಲ್ಲಿ ಮುಂದುವರಿದೆ ಸಂಘರ್ಷ

ಪಂಜ್ ಶೀರ್ ಕಣಿವೆಯಲ್ಲಿ ಮುಂದುವರಿದೆ ಸಂಘರ್ಷ

ಕಳೆದ 1996 ರಿಂದ 2001ರ ಅವಧಿಯಲ್ಲಿ ಸರ್ಕಾರ ರಚಿಸಿ ಆಡಳಿತ ನಡೆಸಿದ ತಾಲಿಬಾನ್, ಪಂಜ್ ಶೀರ್ ಪ್ರಾಂತ್ಯವನ್ನು ಮಾತ್ರ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇತ್ತೀಚಿಗೆ ಯುಎಸ್ ಸೇನೆಯು ಅಫ್ಘಾನಿಸ್ತಾನದಿಂದ ವಾಪಸ್ ಆದ ಬೆನ್ನಲ್ಲೇ ಕಾಬೂಲ್ ಸೇರಿದಂತೆ ಇಡೀ ದೇಶದ ಮೇಲೆ ತಾಲಿಬಾನ್ ನಿಯಂತ್ರಣ ಹೊಂದಿದೆ. ಅದಾಗ್ಯೂ, ಪಂಜ್ ಶೀರ್ ಪ್ರಾಂತ್ಯದಲ್ಲಿ ಮಾತ್ರ ತಾಲಿಬಾನ್ ಸಂಘಟನೆ ವಿರುದ್ಧ ನ್ಯಾಷನಲ್ ರೆಸಿಸ್ಟನ್ಸ್ ಫ್ರೆಂಟ್ ಆಫ್ ಅಫ್ಘಾನಿಸ್ತಾನ ಪ್ರಾಬಲ್ಯವನ್ನು ಸಾಧಿಸುತ್ತಲೇ ಬಂದಿದೆ. ಈ ಪ್ರದೇಶವನ್ನು ವಶಕ್ಕೆ ಪಡೆದುಕೊಳ್ಳಲು ಪ್ರಯತ್ನಿಸಿದ 600ಕ್ಕೂ ಹೆಚ್ಚು ತಾಲಿಬಾನಿಗಳನ್ನು ನಾವೇ ಹೊಡೆದುರುಳಿಸಿದ್ದೇವೆ ಎಂದು ಎನ್ಆರ್ಎಫ್ ಹೇಳಿಕೊಂಡಿತ್ತು.

ಪಂಜ್ ಶೀರ್ ಮತ್ತು ತಾಲಿಬಾನ್ ನಡುವೆ ಕದನ

ಪಂಜ್ ಶೀರ್ ಮತ್ತು ತಾಲಿಬಾನ್ ನಡುವೆ ಕದನ

ತಾಲಿಬಾನ್‌ ಮತ್ತು ನ್ಯಾಷನಲ್‌ ರೆಸಿಸ್ಟೆನ್ಸ್ ಫ್ರಂಟ್ ಆಫ್‌ ಅಫ್ಘಾನಿಸ್ತಾನದ ನಡುವಿನ ಸಂಘರ್ಷದ ಬಗ್ಗೆ ಎನ್‌ ಆರ್‌ ಎಫ್‌ನ ವಕ್ತಾರ ಫಾಹಿಮ್‌ ದಸ್ತಿ ಹೇಳಿಕೆ ನೀಡಿದ್ದರು. "ಇಂದು ಬೆಳಿಗ್ಗೆಯಿಂದೀಚೆಗೆ ಪಂಜ್ ಶೀರ್‌ನ ವಿವಿಧ ಜಿಲ್ಲೆಗಳಲ್ಲಿ 600 ಕ್ಕೂ ಅಧಿಕ ಮಂದಿ ತಾಲಿಬಾನ್‌ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಹಾಗೆಯೇ ಸಾವಿರಕ್ಕೂ ಅಧಿಕ ತಾಲಿಬಾನ್‌ ಭಯೋತ್ಪಾದಕರನ್ನು ಬಂಧನ ಮಾಡಲಾಗಿದೆ ಅಥವಾ ಅವರಾಗಿಯೇ ಶರಣಾಗಿದ್ದಾರೆ," ಎಂದು ತಿಳಿಸಿದ್ದರು. ಹಾಗೆಯೇ ತಾಲಿಬಾನ್‌ಗೆ ಅಫ್ಘಾನಿಸ್ತಾನದ ಇತರೆ ಪ್ರಾಂತ್ಯಗಳಿಂದ ಸಲಕರಣೆಗಳನ್ನು ಪಡೆಯುವಲ್ಲಿ ಸಮಸ್ಯೆ ಉಂಟಾಗಿದೆ ಎಂದು ಕೂಡಾ ಎನ್‌ ಆರ್‌ ಎಫ್‌ನ ವಕ್ತಾರರು ಹೇಳಿದ್ದರು.

English summary
Pakistan Military Chopper Seen In Afghanistan Resistance Pocket Panjshir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X